ಪಟ್ಟಣ ಸ್ವಚ್ಚವಾಗಿದ್ದರೆ ಮಾತ್ರ ಆರೋಗ್ಯ ಪೂರ್ಣವಾದ ಸಮಾಜ ನಿರ್ಮಾಣ ಸಾಧ್ಯ; ರಾಜ ಮಹೇಂದ್ರ ನಾಯಕ್ ಪುರಸಭೆ ಹಿರಿಯ ಸದಸ್ಯರು

ಮಾನ್ವಿ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಜಿಲ್ಲಾ ಕೌಶಲ್ಯ ಮಿಶನ್ ಹಾಗೂ ಪುರಸಭೆ ಸಹಯೋಗದಲ್ಲಿ ನಡೆದ ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ಪುರಸಭೆಯ ಹಿರಿಯ ಸದಸ್ಯ ರಾಜಾ ಮಹೇಂದ್ರ ನಾಯಕ ಮಾತನಾಡಿದರು

0
114

ಪಟ್ಟಣ ಸ್ವಚ್ಚವಾಗಿದ್ದರೆ ಮಾತ್ರ ಆರೋಗ್ಯ ಪೂರ್ಣವಾದ ಸಮಾಜ ನಿರ್ಮಾಣ ಸಾಧ್ಯ

ಮಾನ್ವಿ: ಪಟ್ಟಣ ಸ್ವಚ್ಚವಾಗಿದ್ದಾರೆÉ ಮಾತ್ರ ಆರೋಗ್ಯ ಪೂರ್ಣವಾದ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಪುರಸಭೆಯ ಹಿರಿಯ ಸದಸ್ಯ ರಾಜಾ ಮಹೇಂದ್ರ ನಾಯಕ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಜಿಲ್ಲಾ ಕೌಶಲ್ಯ ಮಿಶನ್ ಹಾಗೂ ಪುರಸಭೆ ಸಹಯೋಗದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರಿಗಾಗಿ ಆರೋಗ್ಯ ನೈರ್ಮಲ್ಯ ಮತ್ತು ಶುಚಿತ್ವ ತ್ಯಾಜ್ಯ ನಿರ್ವಹಣೆ ಕುರಿತು ಹಮ್ಮಿಕೊಂಡ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಟ್ಟಣದ ಪ್ರತಿಯೊಬ್ಬ ನಾಗರಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿಟ್ಟು ಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಬಹುದು ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಾರ್ವಜನಿಕರು ಬೀದಿ ಬದಿಯ ವ್ಯಾಪರಸ್ಥರು ತಮ್ಮಲ್ಲಿ ಉತ್ಪತ್ತಿಯಾಗುವ ಕಸವನ್ನು ಒಣ ಮತ್ತು ಹಸಿಕಸವಾಗಿ ವಿಂಗಡಿಸಿ ಪುರಸಭೆಯ ವಾಹನಕ್ಕೆ ನೀಡುವುದರಿಂದ ಕಸದ ವಿಲೇವಾರಿಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕೌಶಲ್ಯ ಅಭಿವೃದ್ದಿ ಇಲಾಖೆಯ ವ್ಯವಸ್ಥಾಪಕ ರಸೂಲ್ ಸಾಬ್ ನೀರಮಾನ್ವಿ ಮಾತನಾಡಿ ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೆ ಹೆಚ್ಚಿನ ಹಾನಿಯಾಗುತ್ತಿರುವುದರಿಂದ ಒಂದೇ ಬಾರಿಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಬಿಟ್ಟು ಮಣ್ಣಿನಲ್ಲಿ ಬೇಗನೆ ಸೇರುವ ವಸ್ತುಗಳಿಂದ ಮಾಡಿದ ವಸ್ತುಗಳನ್ನು ಬಳಸಬೇಕು ಹಾಗೂ ಮಣ್ಣಿನಲ್ಲಿ ಬೆರೆಯುವ ಕಸ ಹಾಗೂ ಮಣ್ಣಿನಲ್ಲಿ ಬೇರೆಯಾದ ಕಸವನ್ನಾಗಿ ವಿಂಗಡಿಸಿ ನೀಡಿದಲ್ಲಿ ಸರಿಯಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಶಶಿಕಾಂತ ಕಾರ್ಯಾಗಾರ ವನ್ನ ನಡೆಸಿಕೊಟ್ಟರು.

ತರಬೇತಿ ಕಾರ್ಯಕ್ರಮದ ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಸೂಫಿಯ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖ ಫರೀಧ್ ಉಮ್ರಿ, ವ್ಯವಸ್ಥಾಪಕ ಕೃಷ್ಣಮೂರ್ತಿ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ರೆಹಮತ್ ಉನಿಸಾ ಬೇಗಂ, ಕ.ಸಾ.ಪ.ತಾ.ಅಧ್ಯಕ್ಷ ಮಹಮ್ಮದ್ ಮೂಜೀಬ್ ,ಡೇನ್ಮಲ್ ಶಾಖೆಯ ಅಧಿಕಾರಿ ಈರಣ್ಣ ಸೇರಿದಂತೆ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here