ಮದ್ಲಾಪುರ್ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾಶಿಬಿರ

ಮಾನ್ವಿ ತಾಲೂಕಿನ ಮದ್ಲಾಪುರ್ ಗ್ರಾಮದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾಶಿಬಿರವನ್ನು ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಿ ದೇವಿ ಉದ್ಘಾಟಿಸಿದರು.

0
90

ಮದ್ಲಾಪುರ್ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾಶಿಬಿರ

ಮಾನ್ವಿ: ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲಿನ ಜನರ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದು ತಜ್ಞವೈದ್ಯರು ಆರೋಗ್ಯ ತಪಾಸಣೆ ನಡೆಸಲಿದ್ದು ಶಿಬಿರದ ಸದುಪಯೊಗಪಡಿಸಿಕೊಳ್ಳುವಂತೆ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಿ ದೇವಿ ಕೋರಿದರು.

ತಾಲೂಕಿನ ಮದ್ಲಾಪುರ್ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರೆವೆನ್ಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ತಾಲೂಕು ಸಾರ್ವಜನಿಕ ಆಸ್ಪತ್ರೆ ವತಿಯಿಂದ ನಡೆದ ಸಮುದಾಯ ಆಧಾರಿತ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು

ಶಿಬಿರದಲ್ಲಿ ೧೧೨ ಜನರಿಗೆ ಹೆಚ್.ಐ.ವಿ, ಬಿಪಿ. ಶುಗರ್, ಕಣ್ಣಿನ ತಪಾಸಣೆ ದಂತ ತಪಾಸಣೆ ಸೇರಿದಂತೆ ಇತರ ಕಾಯಿಲೆಗಳ ಬಗ್ಗೆ ಪರೀಕ್ಷೆಯನ್ನು ನಡೆಸಿ ಚಿಕಿತ್ಸೆ ನೀಡಲಾಯಿತು

ಕಾರ್ಯಕ್ರಮದಲ್ಲಿ ಗ್ರಾ.ಪಂ. ಪಿ,ಡಿ.ಒ, ಮಲ್ಲಯ್ಯ, ದಂತ ವೈದ್ಯ ಡಾ. ದೀಪಾ , ನೇತ್ರ ಸಹಾಯಕ ಯಲ್ಲಪ್ಪ , ಐಸಿಟಿಸಿ ಆಪ್ತ ಸಮಾಲೋಚಕಿ ರಾಜೇಶ್ವರಿ, ಶಿವರಾಜ್, ಗಿರೀಶ್ ಹಿರೇಮಠ , ವೆಂಕಟೇಶ್, ಸಿ.ಎಚ್.ಓ. ಅನಿತಾ, ರಾಮಣ್ಣ ಮುದಿಯಪ್ಪ, ಹಾಗೂ ಆಶಾ ಕಾರ್ಯಕರ್ತರು ಇದ್ದರು

೯-ಮಾನ್ವಿ-೪:

ಮಾನ್ವಿ: ತಾಲೂಕಿನ ಮದ್ಲಾಪುರ್ ಗ್ರಾಮದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾಶಿಬಿರವನ್ನು ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಿ ದೇವಿ ಉದ್ಘಾಟಿಸಿದರು

LEAVE A REPLY

Please enter your comment!
Please enter your name here