ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿರುವವರಿಗೆ ಪ.ಪಂಗಡ ಪ್ರಮಾಣ ಪತ್ರ ನೀಡದಂತೆ ಮನವಿ

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

0
65

ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿರುವವರಿಗೆ ಪ.ಪಂಗಡ ಪ್ರಮಾಣ ಪತ್ರ ನೀಡದಂತೆ ಮನವಿ

ಮಾನ್ವಿ: ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯ ಕ್ರಮ ಸಂಖ್ಯೆ ೮೮ ಹೆಚ್ ರಲ್ಲಿ ಬರುವ ಅಂಬಿಗ,ಗAಗಾಮತಸ್ಥ,ಕಬ್ಬಲಿಗ ಜಾತಿಯಲ್ಲಿ ಬರುವ ತಳವಾರ,ಬೋಯ,ಪರಿವಾರ ಜಾತಿಗಳಿಗೆ ಪ.ಪಂಗಡ ಜಾತಿ ಪ್ರಮಾಣವನ್ನು ನೀಡುವುದರಿಂದ ಮೂಲ ಪ.ಪಂಗಡ ಸಮುದಾಯದವರಿಗೆ ಅನ್ಯಾಯವಾಗುತ್ತದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾ.ಅಧ್ಯಕ್ಷ ಹನುಮೇಶನಾಯಕ ಸಾದಪೂರ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕವತಿಯಿಂದ ಮುಖ್ಯಮಂತ್ರಿಗಳಿಗೆ ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ಮಾತನಾಡಿ ಭಾರತ ಸರಕಾರದ ಅಧಿಸೂಚನೆಯಂತೆ ರಾಜ್ಯದಲ್ಲಿನ ಪರಿಶಿಷ್ಟ ಪಂಗಡದ ಕ್ರಮ ಸಂಖ್ಯೆ ೩೮ರಲ್ಲಿ ಬರುವ ನಾಯಕ,ಚೋಳನಾಯಕ,ಕಪಾಡಿಯ ನಾಯಕ,ಮೋಟನಾಯಕ,ನಾನ ನಾಯಕ,ಬೇಡ ನಾಯಕ,ವಾಲ್ಮೀಕಿ ಜೊತೆಗೆ ಇದೇ ಜಾತಿಯಲ್ಲಿ ಬರುವ ಪರಿವಾರ,ತಳವಾರ ಜಾತಿಯವರಿಗೆ ಮಾತ್ರ ಪ.ಪಂಗಡ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಒತ್ತಾಯಿಸಿದರು

ಮುಖಂಡರಾದ ಶಿವರಾಜ ನಾಯಕ, ಬುಡ್ಡಪ್ಪನಾಯಕ, ಅಂಬಣ್ಣ ನಾಯಕ, ಹನುಮೇಶನಾಯಕ, ಬಸವನಾಯಕ,ಬಸವರಾಜ ನಾಯಕ, ಚಿದಾನಂದಸ್ವಾಮಿ, ಉಮಾಪತಿ ನಾಯಕ, ಚಂದ್ರಶೇಖರನಾಯಕ, ಅಯ್ಯಪ್ಪನಾಯಕ,ಸೇರಿದಂತೆ ಇನ್ನಿತರರು ಇದ್ದರು.

೯-ಮಾನ್ವಿ-೩:

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು

LEAVE A REPLY

Please enter your comment!
Please enter your name here