ಅಕ್ಟೊಬರ್ 17 ರಿಂದ ಪ್ರವಾದಿ ಮೊಹಮ್ಮದ್ ಅತ್ಯುತ್ತಮ ಮಾದರಿ: ಅಭಿಯಾನ

ಮೊಹಮದ್ ಪೈಗಂಬರ್ ಅವರ ಜೀವನ, ಆದರ್ಶ ಹಾಗೂ ಕೊಡುಗೆಗಳ ಕುರಿತು ಮನೆ-ಮನೆ ಭೇಟಿ

0
95

ಪ್ರವಾದಿ ಮೊಹಮ್ಮದ್ ಅತ್ಯುತ್ತಮ ಮಾದರಿ: ಅಭಿಯಾನ

ಸಿಂಧನೂರು.ಅ.೧೬ – ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರವಾದಿ ಮೊಹಮ್ಮದ್ ಪೈಗಂಬರ್ ಅತ್ಯುತ್ತಮ ಮಾದರಿ ಅಭಿಯಾನವನ್ನು ಅ-೧೭ ರಿಂದ ೨೬ ರ ವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಭಿಯಾನ ಪ್ರಚಾರ ವಿಭಾಗದ ಕಾರ್ಯದರ್ಶಿ ಹುಸೇನ ಬಾಷಾ ತಿಳಿಸಿದರು.

ನಗರದ ಹಳೇ ಬಜಾರ್‌ನಲ್ಲಿ ಮಜೀದ್ ಹುದಾ ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಮೊಹಮದ್ ಪೈಗಂಬರ್ ಅವರ ಜೀವನ, ಆದರ್ಶ ಹಾಗೂ ಕೊಡುಗೆಗಳ ಕುರಿತು ಮನೆ-ಮನೆ ಭೇಟಿ ವಿಚಾರ-ವಿನಿಯಮ, ಪುಸ್ತಕಗಳ ವಿತರಣೆ, ಕನಕದಾಸ. ಸಂಕೇತ, ಅನಿಕೇತನ ಹಾಗೂ ಆಕ್ಸ್ಫರ್ಡ್ ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ,

ಪದವಿ ಪೂರ್ವ ವಿಭಾಗದಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಿ ಪ್ರಬಂಧ ಸ್ಪರ್ಧೆ, ೨೦ರಂದು ಸುಕಾಲಪೇಟೆಯ ತರಕಾರಿ ಮಾರುಕಟ್ಟೆ ಸ್ವಚ್ಛತೆ, ಅರಿವು ಮೂಡಿಸುವದು. ೨೧ ರಂದು ಕಿಲ್ಲಾ ಮಸೀದಿಯ ಖಬರಸ್ತಾನ ಸ್ವಚ್ಛತೆ, ೧೯ ರಂದು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಣೆ ಹಾಗೂ ಹಣ್ಣು ಹಂಪಲು ವಿತರಣೆ, ಗ್ರಾಮೀಣ ಭಾಗದ ದಿದ್ದಿಗಿ, ಬನ್ನಿಗನೂರು, ಸಾಲಗುಂದಾ ಹಾಗೂ ಗೋಮರ್ಸಿ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮಹಿಳಾ ಘಟಕದಿಂದಲ್ಲೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಜಮಾ ಅತೆ ಇಸ್ಲಾಮೀ ಹಿಂದ್‌ನ ಅಧ್ಯಕ್ಷ ಮೊಹ್ಮದ್ ಹುಸೇನ ಸಾಬ್, ಕಾರ್ಯದರ್ಶಿ ಶರ್ಫುದ್ದೀನ್, ಉಪಾಧ್ಯಕ್ಷ ಆಫೀಸ್ ಸೈಯೀದ್ ಹುಸುವಾ, ಖಾದರ್ ಸುಭಾನಿ, ಸೈಯದ್ ಸಮ್ಮದ್ ಚೌದ್ರಿ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here