ದಕ್ಷಿಣ ಭಾರತೀಯ ಕರಾಟೆ ಸ್ಪರ್ಧೆ ಮಾನವಿ ತಂಡದ 09 ವಿದ್ಯಾರ್ಥಿಗಳಿಗೆ ಪ್ರಥಮಸ್ಥಾನ

0
314

ಮಾನ್ವಿ:ಜ.06 ನಿನ್ನೆ ಸಾಯಂಕಾಲ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತೀಯ ಕರಾಟೆ ಚಾಂಪಿಯನ್‌ ಶಿಫಿನಲ್ಲಿ ನಮ್ಮ ತಾಲೂಕಿನ ಕರಾಟೆ ಮಾಸ್ಟರ್ ದೇವರಾಜ ನಕ್ಕುಂದಿ ಅವರ ಗೊಜು ರಿಯೊ ಕರಾಟೆ ಅಸೋಸಿಯೇಷನ್ ಸಂಸ್ಥೆಯ ಒಟ್ಟು 18 ವಿದ್ಯಾರ್ಥಿಗಳು ಭಾಗವಹಿಸಿ ಒಂಬತ್ತು ಪ್ರಥಮ ಸ್ಥಾನ ,ಐದು ದ್ವಿತೀಯ ಸ್ಥಾನ,ಹಾಗೂ ನಾಲ್ಕು ತೃತೀಯ ಸ್ಥಾನ ಪಡೆದು ಮಾನವಿ ತಾಲೂಕಿನ ಕೀರ್ತಿ ಪಾತಕಿಯನ್ನು ಹಾರಿಸಿದ್ದಾರೆ ಎಂದು ಮಾಸ್ಟರ್ ದೇವರಾಜ ನಕ್ಕುಂದಿ ಹೇಳಿದರು.

ಭಾನುವಾರ ಬೆಂಗಳೂರಿನ ವರ್ತೂರು ರಸ್ತೆಯ ಅಕ್ಷತಾ ಪ್ಯಾಲೇಸನಲ್ಲಿ ವಿಶ್ವ ಕಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಾಸ್ಟರ ಸುನೀಲ ಕುಮಾರ ಇವರ ನೇತೃತ್ವದಲ್ಲಿ ನಡೆದ ದಕ್ಷಿಣ ಭಾರತದ ಕರಾಟೆ ಸ್ಪರ್ಧೆಯಲ್ಲಿ ಮಾನವಿ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳಾದ ಮುತ್ತುರಾಜು,ಅನೀಲಕುಮಾರ,ಅವಿನಾಶ,ಪ್ರಜ್ವಲ್,ಯಶವಂತ ನಂದಿನಿ,ಪ್ರೇರಣೆ,ಕೃಷ್ಟವೇಣಿ,ಜೀವನಪ್ರೀಯಾ,ಮಾನುಷಾ,ತೇಜಸ್ವಿನಿ,ಸಂಕೇತ, ನರಸಿಂಹ, ಹರೀಶ್,ಸಂಜುರಾಯ್,ನಾಗರೆಡ್ಡಿ,ಅಯ್ಯನಗೌಡ ಎನ್ನುವ ವಿದ್ಯಾರ್ಥಿಗಳ ಭಾಗವಹಿಸಿ ಗೆಲುವು ಸಾಧಿಸಿದ್ದಾರೆ ಇದಕ್ಕೆ  ಮಾಸ್ಟರ್ ಸಾಯಿ ಪವನ್ ಕೂಡ ಕಾರಣರಾಗಿದ್ದಾರೆ ಎಂದರು ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು ಹಾಗೂ ನಿರ್ಣಾಯಕರಾಗಿ ಭಾಗವಹಿಸಿದ ನಮಗೂ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here