ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಮಾದರಿ ಸೀರತ್ ಅಭಿಯಾನ; ಮಹ್ಮದ್ ಜಹೀರುದ್ದೀನ್ (ಗೌಸ್)

ಈದ್ ಮಿಲಾದ್ ಪ್ರಯುಕ್ತ ಹಮ್ಮಿಕೊಂಡಿರುವ ೧೦ ದಿನಗಳ ಅಭಿಯಾನ; ಜಮಾಅತೆ ಇಸ್ಲಾಮಿ ಹಿಂದ್

0
112

ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಮಾದರಿ : ಸೀರತ್ ಅಭಿಯಾನ

ಲಿಂಗಸುಗೂರು : ಮನುಕುಲಕ್ಕೆ ಪ್ರವಾದಿ ಮುಹಮ್ಮದ್ (ಸ) ಅವರು ಅತ್ಯುತ್ತಮ ಮಾದರಿ ಎನ್ನುವ ವಿಷಯದ ಕುರಿತು ಸೀರತ್ ಅಭಿಯಾನವನ್ನು ಅಕ್ಟೋಬರ್ ೧೭ರಿಂದ ೨೬ರ ವರೆಗೆ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಆಯೋಜಿಸಲಾಗಿದೆ ಎಂದು ಸಂಘಟನೆಯ ಸ್ಥಾನೀಯ ಸಂಚಾಲಕ ಮಹ್ಮದ್ ಜಹೀರುದ್ದೀನ್ (ಗೌಸ್) ಹೇಳಿದರು.

ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಮಾದರಿ ಸೀರತ್ ಅಭಿಯಾನ; ಮಹ್ಮದ್ ಜಹೀರುದ್ದೀನ್ (ಗೌಸ್)

ಸ್ಥಳೀಯ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸೀರತ್ ಅಬಿಯಾನದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆಧುನಿಕ ಜಗತ್ತು ಪ್ರಗತಿಯ ಉತ್ತುಂಗತೆಯಲ್ಲಿದ್ದರೂ ಇಂದಿಗೂ ಉಚ್ಚ-ನೀಚ, ಕರಿಯ-ಬಿಳಿಯ, ಸವರ್ಣೀಯರು-ಅವರ್ಣೀಯರು ಸೇರಿ ಇತರೆ ಮನೋಭಾವದಿಂದ ಮುಕ್ತವಾಗಿಲ್ಲ. ಆದರೆ, ಪ್ರವಾದಿ ಮುಹಮ್ಮದ್(ಸ)ರು ಈ ಮನೋಬಾವನೆಯ ವಿರುದ್ಧ ಸಮರ ಸಾರಿದ್ದರು. ಸಮಾಜದಲ್ಲಿ ಓರ್ವ ವ್ಯಕ್ತಿ ತಾನು ಕೌಟುಂಬಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹೀಗೆ ವಿವಿಧ ರಂಗಗಳಲ್ಲಿ ತನ್ನ ಪಾತ್ರವನ್ನು ವಹಿಸುತ್ತಾನೆ. ಒಂದುವೇಳೆ ಆತನು ತನ್ನ ಜವಾಬ್ದಾರಿಯನ್ನು ಅರಿತು ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದನೆಂದಾದರೆ, ಖಂಡಿತವಾಗಿಯೂ ಆತ ಯಶಸ್ವಿಯಾಗುತ್ತಾನೆ. ಅವನಿಂದಾಗಿ ಒಂದು ಮಾದರಿ ಸಮಾಜವೂ ನಿರ್ಮಾಣವಾಗುತ್ತದೆ ಎಂದು ಪ್ರವಾದಿಯವರು ಆರನೇ ಶತಮಾನದಲ್ಲಿಯೇ ಹೇಳಿದ್ದಾರೆ.

ಈದ್ ಮಿಲಾದ್ ಪ್ರಯುಕ್ತ ಹಮ್ಮಿಕೊಂಡಿರುವ ೧೦ ದಿನಗಳ ಅಭಿಯಾನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಘಟಕವು ಅಕ್ಟೋಬರ್ ೨೦ರಂದು ಜಮಾಅತೆ ಇಸ್ಲಾಮಿ ಹಿಂದ್‌ನ ಮಹಿಳಾ ವಿಭಾಗದಿಂದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಣೆ ಮತ್ತು ರೋಗಿಗಳಿಗೆ ಹಾಲು-ಹಣ್ಣು ವಿತರಣೆ ಸ್ವಚ್ಛತಾ ಕಾರ್ಯಕ್ರಮ. ಅ.೨೨ಕ್ಕೆ ಸಸಿ ನೆಡುವ ಕಾರ್ಯಕ್ರಮ. ಅ.೨೩ಕ್ಕೆ ಸ್ವಚ್ಛತಾ ಕಾರ್ಯಕ್ರಮ ಹಾಗೂ ಗಣ್ಯ ಭೇಟಿ ಮಾಡಿ ಪ್ರವಾದಿ ಮುಹಮ್ಮದ್(ಸ)ರು ಜಗತ್ತಿಗೆ ನೀಡಿದ ಕೊಡುಗೆಗಳ ಬಗ್ಗೆ ವಿಚಾರ ವಿನಿಮಯ ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅಭಿಯಾನದ ಸಂಚಾಲಕ ಮೌಲಾನಾ ಸೈಯದ್ ಅಬು ಸಯೀದ್ ಖಾಸ್ಮಿ, ಸ್ಥಾನಿಕ ಕಾರ್ಯದರ್ಶಿ ಬಾಬಾ ಕೆ.ಬಿ.ಎನ್., ಎಸ್‌ಐಓ ತಾಲೂಕು ಅದ್ಯಕ್ಷ ಶೇಖ್ ಆಫ್ರಿದಿ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ನಯೀಮ್, ಡಾ.ಮುಹಮ್ಮದ್ ಜಾವೇದ್, ಮುಹಮ್ಮದ್ ರಿಯಾಜ್, ಅಮೀರ್, ಕಲೀಮ್, ಜುಬೇರ್ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

LEAVE A REPLY

Please enter your comment!
Please enter your name here