ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ಮಾನ್ವಿ:ಪಟ್ಟಣದ ಖಾದ್ರಿ ಪಂಕ್ಷನ್ ಹಾಲ್‌ನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹೃದಯರೋಗ ತಜ್ಞ ಡಾ.ಸಕಲೇಶ ಪಾಟೀಲ್ ಬೆಟ್ಟದೂರು ರೋಗಿಗಳಿಗೆ ಚಿಕಿತ್ಸೆ ನೀಡಿದರು

0
129

ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ.
ಮಾನ್ವಿ: ಪಟ್ಟಣದ ಖಾದ್ರಿ ಪಂಕ್ಷನ್ ಹಾಲ್‌ನಲ್ಲಿ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ಹಾಗೂ ಹೆಚ್.ಸೈಯದ್ ಷಾ ಮುರ್ತುಜಾ ಖಾದ್ರಿ ಚಾರಿಟೇಬಲ್ ಟ್ರಸ್ಟ್ (ರಿ),ನವೋದಯ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಮತ್ತು ಸಂಶೋಧನ ಕೇಂದ್ರ,ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹೃದಯರೋಗ ತಜ್ಞ ಡಾ.ಸಕಲೇಶ ಪಾಟೀಲ್ ಬೆಟ್ಟದೂರು ಮಾತನಾಡಿ ವೈದ್ಯರ ಸಲಹೆಯಂತೆ ಔಷದಿಗಳನ್ನು ಬಳಸುವುದರಿಂದ ಹಾಗೂ ಪ್ರತಿದಿನ ಸ್ವಲ್ಪ ದೂರ ನಡೆಯುವುದರಿಂದ ಲಘು ವ್ಯಾಯಾಮ ಮಾಡುವುದರಿಂದ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿರಿಸಬಹುದು

ಇಂದು ವಿಶ್ವದಾದ್ಯಂತ ಮಧುಮೇಹ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ವೈಜ್ಞಾನಿಕವಾಗಿ ಮಧುಮೇಹ ಕಾಯಿಲೆಯನ್ನು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ಪಡೆದು ನೀಯಂತ್ರಿಸದೆ ಇದ್ದಲ್ಲಿ ದಿರ್ಘಕಾಲದಲ್ಲಿ ದೇಹದ ವಿವಿಧ ಅಂಗಗಳಿಗೆ ಹಾನಿಯಾಗುವ ಸಂಭವವಿರುವದರಿAದ ಪ್ರತಿಯೊಬ್ಬರು ನಿಯಮಿತವಾಗಿ ರಕ್ತದೊತ್ತಡ,ಹಾಗೂ ಮಧುಮೇಹ ಪ್ರಮಾಣವನ್ನು ಪರಿಕ್ಷಿಸಿಕೊಂಡು ಚಿಕಿತ್ಸೆ ಪಡೆಯುವಂತೆ ತಿಳಿಸಿದರು

ಸಾವಿರಕ್ಕೂ ಹೆಚ್ಚು ಜನರು ಕಣ್ಣು, ಕಿವಿ, ಮೂಗು, ಹೃದಯ, ಚರ್ಮ, ಹಾಗೂ ಮಹಿಳೆಯರಿಗೆ ಸಂಬAಧಿಸಿದ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆಗೊಳಪಟ್ಟು ಚಿಕಿತ್ಸೆಯನ್ನು ಪಡೆದರು.

ಉಚಿತ ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ನೇತ್ರ ತಜ್ಞರು ಸೂಚಿಸಿದವರಿಗೆ ಉಚಿತವಾಗಿ ಕನ್ನಡಕಗಳನ್ನು ಶಿಬಿರದಲ್ಲಿ ವಿತರಿಸಲಾಯಿತು.

ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ಕೋವಿಡ್-19 ಲಸಿಕೆಯನ್ನು ನೀಡಲಾಯಿತು,ನವೋದಯ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಮತ್ತು ಸಂಶೋಧನ ಕೇಂದ್ರದ ವೈದ್ಯರಾದ ಡಾ.ಸಾಯಿಕಿರಣ,ಡಾ.ವಿಶ್ವನಾಥ,ಡಾ.ಕೆ.ಹೇಮಂತ ಸೇರಿದಂತೆ ಇತರ ವೈದ್ಯರ ತಂಡದಿಂದ ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು .

ಈ ಸಂದರ್ಭದಲ್ಲಿ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಸಂಸ್ಥೆಯ ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಸೈಯದ್ ಮುಜ್ತಬಾ ಖಾದ್ರಿ, ಯೂಸುಫ್ ಮಾಸ್ಟರ್ ಹಿದಾಯತ್ ನಾಯಕ್ ಮತ್ತು ಪುರಸಭೆ ಸದಸ್ಯ ಹುಸೇನ್ ಬಾಷಾ ಹೆಚ್ಡಿ ಎಂ ಮತ್ತು ಇತರೆ ಸದಸ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here