ಗೌಸ್ ಖಾಜಾ ಅಂಜುಮನ್ ವತಿಯಿಂದ ಟೆಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ

ಮಾನ್ವಿ ಪಟ್ಟಣದ ಕರ್ನಾಟಕ ಶಾಲೆಯಲ್ಲಿ ಗೌಸ್ ಓ ಖ್ವಾಜಾ ಅಂಜುಮಾನ್ ಕಮಿಟಿ ವತಿಯಿಂದ ನಡೆದ ಸರ್ವಧರ್ಮ ಸಮಾಜ ಸೇವೆ ಕಾರ್ಯಕ್ರಮವನ್ನು ಶಾಸಕ ರಾಜಾ ವೆಂಕಟಪ್ಪನಾಯಕ ಉದ್ಘಾಟಿಸಿ ಮಾತನಾಡಿದರು

0
107

ಸ್ವ-ಉದ್ಯೋಗ ತರಬೇತಿಗಳನ್ನು ಪಡೆದುಕೊಂಡಲ್ಲಿ ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಾಧ್ಯ.

ಮಾನ್ವಿ: ಮಹಿಳೆಯರು ಸ್ವ-ಉದ್ಯೋಗ ಹೊಂದಲು ಗೌಸ್ ಓ ಖ್ವಾಜಾ ಅಂಜುಮಾನ್ ಕಮಿಟಿ ವತಿಯಿಂದ ನೀಡಲಾಗುವ ವಿವಿಧ ಸ್ವ-ಉದ್ಯೋಗ ತರಬೇತಿಗಳನ್ನು ಪಡೆದುಕೊಂಡಲ್ಲಿ ಮಾತ್ರ ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದರು.

ಪಟ್ಟಣದ ಕರ್ನಾಟಕ ಶಾಲೆಯಲ್ಲಿ ಗೌಸ್ ಓ ಖ್ವಾಜಾ ಅಂಜುಮಾನ್ ಕಮಿಟಿ ವತಿಯಿಂದ ನಡೆದ ಸರ್ವಧರ್ಮ ಸಮಾಜ ಸೇವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಲ್ಪ ಸಂಖ್ಯಾತ ಸಮುದಾಯದವರು ತಮ್ಮ ಮಕ್ಕಳಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣ ನೀಡಿದಾಗ ಮಾತ್ರ ಐ.ಎ.ಎಸ್.ಐ.ಪಿ.ಎಸ್. ಕೆ.ಎ.ಎಸ್ ನಂತಹ ಉನ್ನತವಾದ ಪದವಿಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು
ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಚಾರ್ಯ ಮಹಾಸ್ವಾಮಿಗಳು ಮಾತನಾಡಿ ಪ್ರತಿ ಸಮಾಜದಲ್ಲಿರುವ ಧರ್ಮಗುರುಗಳು ಬಡತನ ನಿವಾರಣೆಗಾಗಿ ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಅಗತ್ಯವಾದ ಮಾರ್ಗದರ್ಶನ ಮಾಡಬೇಕು ಅದಕ್ಕಾಗಿ ಹೆಚ್ಚು ತರಬೇತಿ ಶಿಬಿರಗಳ ಆಯೋಜನೆಯಾಗಬೇಕು ಉಳ್ಳವರು ಇಲ್ಲದವರ ಬೆಳವಣಿಗೆಗಾಗಿ ಶ್ರಮಿಸುವಂತೆ ಕರೆ ನೀಡಿದರು.

ಲೋಯಲ ಶಿಕ್ಷಣ ಸಂಸ್ಥೆಯ ಫಾದರ್ ಮೇಲ್ವಿನ್ ಡಿ ಕುನಃ, ಧರ್ಮ ಸಂದೇಶ ನೀಡಿದರು ಪುರಸಭೆ ಸದಸ್ಯರು ಫರೀದ್ ಉಮರಿ ಪ್ರಾಸ್ತಾವಿಕ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಸೈಯಾದ್ ಅರೀಫ್ ಖುದರಿ ಸಾಬ್, ಮುಖಂಡರಾದ ಶರ್ಫುದೀನ್, ಸೈಯಾದ್ ಜಾಕೀರುದ್ದಿನ್ ಖಾದ್ರಿ,ಸೈಯಾದ್ ಶಾ ಎಂ.ಡಿ.ಇದ್ದೀಸ್ ಖಾದ್ರಿ ಸಾಹೇಬ್, ಸೈಯಾದ್ ಶಾ ಮಸೂದ್ ಹುಸೇನಿ ಮತವಾಲೇ ಸೇರಿದಂತೆ ಇನ್ನಿತರರು ಮಾತನಾಡಿದರು

ಕಾರ್ಯಕ್ರಮದಲ್ಲಿ ಹೊಲಿಗೆಯಂತ್ರ ತರಬೇತಿ ಪಡೆದ ಮಹಿಳೆಯರು ಸಿದ್ದಪಡಿಸಿದ ಸಿದ್ದ ಉಡುಪುಗಳ ಮಳಿಗೆಯನ್ನು ಶಾಸಕರು ಉದ್ಘಾಟಿಸಿದರು ಹಾಗೂ ತರಬೇತಿ ಪಡೆದ ಮಹಿಳೆಯರ ಪೈಕಿ ಚೀಟಿ ಎತ್ತುವ ಮೂಲಕ ಒಬ್ಬ ಮಹಿಳೆಗೆ ಹೊಲಿಗೆ ಯಂತ್ರ ಬಹುಮಾನವಾಗಿ ವಿತರಿಸಿದರು

ಸಂಸ್ಥೆಯ ಅಧ್ಯಕ್ಷ ಆರಿಫ್ ಹಾದ್ರಿ ಸ್ವಾಗತಿಸಿದರು ಮತ್ತು ವಾರ್ಡ್ ನಂಬರ್ 25 ಪುರಸಭೆ ಸದಸ್ಯ ಫರೀದ್ ಉಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು ವೇದಿಕೆಯಲ್ಲಿ ಮುಖಂಡರಾದ ಮಾಜಿ ಪುರಸಭಾ ಅಧ್ಯಕ್ಷ ಇಸ್ಮಾಯಿಲ್ ಮೌಲ, ಪುರಸಭೆ ಸದಸ್ಯ ಭಾಷಾ ಇಬ್ರಾಹಿಂ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಸಲೀಂ ಸಾಬ್ಎಂ, ಸಂದಾನಿ ನಾಯಕ್, ಕೆ ಮೋಹಿನ್ ಖಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here