ಎಪಿಎಂಸಿ ಉಪಾಧ್ಯಕ್ಷ ರಾಗಿ ಹನುಮೇಶ್ ಮದ್ಲಾಪುರು ಅವಿರೋಧ ಅಯ್ಕೆ

0
85

ಎಪಿಎಂಸಿ ಉಪಾಧ್ಯಕ್ಷ ರಾಗಿ ಹನುಮೇಶ್ ಮದ್ಲಾಪುರು ಅವಿರೋಧ ಅಯ್ಕ

ಮಾನ್ವಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ(ಎಪಿಎಂಸಿ) ಉಪಾಧ್ಯಕ್ಷ ಸ್ಥಾನ ತೆರವಾಗಿದ್ದರಿಂದ ಇಂದು ನಡೆದ ಚುನಾವಣೆಯಲ್ಲಿ ಹನುಮೇಶ್ ಮದ್ಲಾಪುರು ಅವರನ್ನ ಸರ್ವ ಸದಸ್ಯರು ಒಮ್ಮತ ಮೇರೆಗೆ ಅವಿರೋಧವಾಗಿ ಆಯ್ಕೆ ಮಾಡಿದರು.

ಈ ಚುನಾವಣೆಯಲ್ಲಿ ಉಪಾಧ್ಯಕ್ಷಸ್ಥಾನಕ್ಕೆ ಯಾರು ಕೂಡಾ ನಾಮಪತ್ರ ಸಲ್ಲಿಸದ ಕಾರಣ ಅವರನ್ನ ಅವಿರೋಧವಾಗಿ ಚುನಾಯಿಸಿದರು. ಉಪಾಧ್ಯಕ್ಷಸ್ಥಾನ ಅಲಂಕರಿಸಿ ಮಾತನಾಡಿದ ಅವರು ಇಂದು ನಡೆದ ಉಪಾಧ್ಯಕ್ಷಸ್ಥಾನ ಚುನಾವಣೆಯಲ್ಲಿ ಆಯ್ಕೆಯಾಗಲು ಸಹಕರಿಸಿದ ಕಾಂಗ್ರೆಸ್ ಹಿರಿಯರು ನಾಯಕರಿಗೆ ಮತ್ತು ಸದಸ್ಯರಿಗೆ ಅಭಿನಂದನೆಗಳು ಎಂದು ತಿಳಿಸಿದರು‌..

ಈ ವೇಳೆ ಚುನಾವಣೆ ಅಧಿಕಾರಿಯಾಗಿ ಅಬ್ದುಲ್ ವಾಹೀದ್ ಪ್ರಭಾರಿ ತಹಸೀಲ್ದಾರ್ ರವರು ಕಾರ್ಯನಿರ್ವಹಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here