ಮಿಂಚಿನ ನೋಂದಣಿ ಅಭಿಯಾನ ಅಂಗವಾಗಿ ಸೈಕಲ್ ಜಾಥ

ಮಾನ್ವಿ ತಹಸಿಲ್ದಾರರಿಂದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಿಂಚಿನ ನೋಂದಣಿ ಅಭಿಯಾನ ಅಂಗವಾಗಿ ಸೈಕಲ್ ಜಾಥ

0
224

ಮಿಂಚಿನ ನೋಂದಣಿ ಅಭಿಯಾನ ಅಂಗವಾಗಿ ಸೈಕಲ್ ಜಾ

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಭಾರತ ಚುನಾವಣ ಆಯೋಗದ ಮಿಂಚಿನ ನೋಂದಣಿ ಅಭಿಯಾನ ಅಂಗವಾಗಿ ಸೈಕಲ್ ಜಾಥಕ್ಕೆ ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್ ಚಾಲನೆ ನೀಡಿ ಮಾತನಾಡಿ ಭಾರತ ಚುನಾವಣ ಆಯೋಗದವತಿಯಿಂದ ೫೫ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿನ ಯವಸಮೂಹ ಚುನಾವಣೆಯಲ್ಲಿ ಭಾಗವಹಿಸುವುದಕ್ಕೆ ಉತ್ತೇಜಿಸುವ ಅಂಗವಾಗಿ ೧೮ವರ್ಷ ವಯಸ್ಸು ಪೂರ್ತಿಯಾಗುವ ಯುವಕ, ಯುವತಿಯರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ನಿಮ್ಮ ಪಟ್ಟಣ ಹಾಗೂ ಗ್ರಾಮದಲ್ಲಿನ ಮತಗಟ್ಟೆಯಲ್ಲಿನ ಬೂತ್ ಮಟ್ಟದ ಆಧಿಕಾರಿಗಳನ್ನು ಸಂಪರ್ಕಿಸಿ ನಮೂನೆ ೬ರಲ್ಲಿ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವುಂತೆ ತಾಲೂಕು ಆಡಳಿತವತಿಯಿಂದ ನ.೧೨,೨೦ ಮತ್ತು ಡಿ.೩.೪ ರಂದು ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಅಯೋಜಿಸಲಾಗಿದ್ದು ನೂತನ ಯುವ ಮತದಾರರು ತಮ್ಮ ಹಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಮೂಲಕ ಮತದಾನದ ಹಕ್ಕನು ಪಡೆದುಕೊಳ್ಳುವ ಮೂಲಕ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸೋಣ ಎಂದು ತಿಳಿಸಿದರು.

ಪುರಸಭೆ ಮುಖ್ಯಧಿಕಾರಿ ಗಂಗಾಧರ,ಪಿ.ಮಹದೇವಪ್ಪ ಪಂಚಮುಖಿ. ಇ.ಒ.ಅಣ್ಣರಾವ್, ಚುನಾವಣ ವಿಭಾಗದ ಉಪತಹಸೀಲ್ದಾರ್ ವಿನಾಯಕರಾವ್,ಕಂದಾಯ ನೀರಿಕ್ಷಕರಾದ ಚರಣ್ ಸೀಂಗ್, ಪ್ರಾ.ಶಾ.ಶಿ.ಸಂಘದ ತಾ.ಅಧ್ಯಕ್ಷ ಸಂಗಮೇಶ ಮುಧೋಳ್, ಪುರಸಭೆ ಸದಸ್ಯರಾದ ಶರಣಯ್ಯಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು ವಿವಿಧ ಶಾಲಾ ,ಕಾಲೇಜುಗಳ ವಿಧ್ಯಾರ್ಥಿಗಳು ಜಾಗೃತಿ ಜಾಥದಲ್ಲಿ ಭಾಗವಹಿಸಿದರು,

ತಹಸೀಲ್ದಾರ್ ಕಚೇರಿಯಿಂದ ಬಸವ ವೃತ್ತದವರೆಗೂ ನಡೆದ ಸೈಕಲ್ ಜಾಥದಲ್ಲಿ ವಿವಿಧ ಇಲಾಖೆಗಳ ಆಧಿಕಾರಿಗಳು ಭಾಗವಹಿಸಿದರು.

೯-ಮಾನ್ವಿ-೧:

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಭಾರತ ಚುನಾವಣ ಆಯೋಗದ ಮಿಂಚಿನ ನೋಂದಣಿ ಅಭಿಯಾನ ಅಂಗವಾಗಿ ಸೈಕಲ್ ಜಾಥ ನಡೆಯಿತು.

LEAVE A REPLY

Please enter your comment!
Please enter your name here