ಪೋತ್ನಾಳ್  ಗ್ರಾಮದಲ್ಲಿ ಸಡಗರದ ಸಂಭ್ರಮದ ಕ್ರಿಸ್ಮಸ್ ಆಚರಣೆ

0
248

ಮಾನ್ವಿ:ಡಿ.25 ತಾಲೂಕಿನ ‌ಪೋತ್ನಾಳ್ ಗ್ರಾಮದಲ್ಲಿ ‌ಇಂದು ಯೇಸುವಿನ ‌ಜನನದ‌ ತರುವಾಯ ಸಡಗರ ಸಂಭ್ರಮದಿಂದ ಕ್ರಿಸ್ಮಸ್ ‌ಹಬ್ಬ ಆಚರಣೆ ಮಾಡಲಾಯಿತು.
ಪೋತ್ನಾಳ್ ಗ್ರಾಮದ ಸಂತ ಕ್ಲಾರ ವಿಹಾರ ಚರ್ಚಿನಲ್ಲಿ ನಿನ್ನೆ ರಾತ್ರಿಯಿಂದಲೂ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು ಯೇಸುವಿನ ಬರುವಿಕೆಯನ್ನು ಭಕ್ತಾದಿಗಳು ಎದುರು ನೋಡುತ್ತಿದ್ದರು.
ಕ್ರಿಸ್ತನ ಜನನದ ‌ಸಂಕೇತವಾದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಿನ್ನೆ ಮಧ್ಯ ರಾತ್ರಿ ‌ಕ್ರಿಸ್ತನ ಜನನದ ‌ಸಂದೇಶವನ್ನು ಕೇಳಲು ಬಲಿ ಪೂಜೆಯನ್ನು ಅರ್ಪಿಸಿ ನೆರೆದಂತ‌ ಭಕ್ತಾದಿಗಳಿಗೆ ಕ್ರಿಸ್ತನ ಸುವಾರ್ತೆಯನ್ನು ಸಾರಿ ನೀವು ಕ್ರಿಸ್ತನ ಮಾರ್ಗವನ್ನು ಅನುಸರಿಸಬೇಕೆಂಬ ಭೋದನೆ ಹೇಳಿದರು.


ಇಂದು ‌ಬೆಳಿಗ್ಗೆ ವಿಶೇಷ ಬಲಿ ಪೂಜೆ ಏರ್ಪಡಿಸಿ ‌ಯೇಸುವಿನ ಜನನದ ‌ಹಿಂದಿನ ರಹಸ್ಯವನ್ನು ಬಿಚ್ಚಿಟ್ಟರು ಸುತ್ತಮುತ್ತಲಿನ ಗ್ರಾಮದ ಎಲ್ಲಾ ಕ್ರೈಸ್ತ ಭಕ್ತಾದಿಗಳು ಯೇಸುವಿನ ‌ಜನನದ ಸಾಂಕೇತಿಕ ಬಲಿ ಪೂಜೆಯಲ್ಲಿ ‌ಭಾಗವಹಿಸಿ ಕ್ರಿಸ್ತನ ಕೃಪೆಗೆ ಪಾತ್ರರಾದರು.
ಈ ದಿವ್ಯ ಬಲಿಪೂಜೆಯಲ್ಲಿ ವಿಚಾರಣ ಗುರುಗಳಾದ ವಂದನೀಯ ಫಾಧರ್ ಥೋಮಸ್, ವಿಮುಕ್ತಿ ಚಾರಿಟೇಬಲ್ ನಿರ್ದೇಶಕರಾದ ವಂದನೀಯ ಫಾ.ಸತೀಶ್ ಫರ್ನಾಂಡೀಸ್, ಅನುಗ್ರಹ ‌ಕಾನ್ವೆಂಟನ ಕನ್ಯಾ‌ ಸ್ತೀಯರು,‌ ಕ್ಲಾರ ಮಠದ ಬ್ರದರ್ಸ್‌ ಮತ್ತು ಎಲ್ಲಾ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here