ಕೇಂದ್ರ ಸರ್ಕಾರದ ಅಣೆಕಟ್ಟೆ ಪುನರ್ವಸತಿ  ಮತ್ತು ಸುಧಾರಣೆ ಯೋಜನೆ ಜಾರಿ ಸ್ವಾಗತಾರ್ಹ- ಯಡಿಯೂರಪ್ಪ

2021ರಿಂದ  2031ರ ಅವಧಿಯಲ್ಲಿ ಈ ಎರಡೂ ಹಂತಗಳ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರ  10,211 ಕೋಟಿ ರೂಪಾಯಿ  ವೆಚ್ಚ ಮಾಡುತ್ತಿದೆ.

0
209

ಬೆಂಗಳೂರು: ವಿಶ್ವ ಬ್ಯಾಂಕ್ ಹಾಗೂ ಏಷ್ಯಾ  ಮೂಲಸೌಕರ್ಯ  ಹೂಡಿಕೆ ಬ್ಯಾಂಕ್  ನೆರವಿನಿಂದ  ದೇಶದಲ್ಲಿ ಅಣೆಕಟ್ಟೆ ಪುನರ್ವಸತಿ  ಮತ್ತು ಸುಧಾರಣೆ  ಯೋಜನೆಯ 2 ಮತ್ತು  3ನೇ ಹಂತದ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ  ಅನುಮೋದನೆ ನೀಡಿರುವುದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಈ ಯೋಜನೆಯಿಂದ ರಾಜ್ಯಕ್ಕೆ ಅನುಕೂಲವಾಗಲಿದೆ. ರಾಜ್ಯದಲ್ಲಿ  ಜಲ ಸಂಪನ್ಮೂಲ ಇಲಾಖೆಯಿಂದ ಡಿ.ಆರ್.ಐ.ಪಿ ನೀರಾವರಿ  ಯೋಜನೆ ಜಾರಿಯಲ್ಲಿದ್ದು, ಕೇಂದ್ರದ ಈ ಕ್ರಮದಿಂದ ಅಣೆಕಟ್ಟೆಯ  ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

 

ಬರುವ 2021ರಿಂದ  2031ರ ಅವಧಿಯಲ್ಲಿ ಈ ಎರಡೂ ಹಂತಗಳ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರ  10,211 ಕೋಟಿ ರೂಪಾಯಿ  ವೆಚ್ಚ ಮಾಡುತ್ತಿದೆ. ಈ ಪೈಕಿ  ಬ್ಯಾಂಕ್ ಗಳು  7 ಸಾವಿರ ಕೋಟಿ ರೂಪಾಯಿ  ನೆರವು ನೀಡಲಿದ್ದು, ಅಣೆಕಟ್ಟೆಗಳಲ್ಲಿ  ಸುರಕ್ಷತಾ ಕ್ರಮಗಳನ್ನು ಅಳವಡಿಸಿ, ಅಣೆಕಟ್ಟೆಗಳ ಕಾರ್ಯಾಚರಣೆಯನ್ನು ವೃದ್ಧಿಸಲು  ಈ ಯೋಜನೆ ಸಹಕಾರಿಯಾಗಲಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here