ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ ದ ಹೋರಾಟದ ಫಲವಾಗಿ ಉಟಕನೂರು ಗ್ರಾಮ ಪಂಚಾಯಿತಿಯ ರಾಮಪ್ಪ ನಡಿಗೇರಿ ಪಿ ಡಿ ಓ ಅಮಾನತು ಮಾಡಲಾಗಿದೆ

ಭ್ರಷ್ಟಾಚಾರದಲ್ಲಿ ಭಾಗಿಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯತಿಯ ಕೆಲ ಸದಸ್ಯರು ಗುತ್ತಿಗೆದಾರರು ಮತ್ತು ಅಂಗಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು

0
116

ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ ದ ಹೋರಾಟದ ಫಲವಾಗಿ ಉಟಕನೂರು ಗ್ರಾಮ ಪಂಚಾಯಿತಿಯ ರಾಮಪ್ಪ ನಡಿಗೇರಿ ಪಿ ಡಿ ಓ ಗೆ ಅಮಾನತು ಮಾಡಲಾಗಿದೆ

ಮಾನವಿ, ನ.29 ಮಾನವಿ ತಾಲೂಕಿನ ಊಟಕನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ 15ನೇ ಹಣಕಾಸಿನ ಪಂಚವಾರ್ಷಿಕ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರವಾಗಿ ಇದೆ ಸುಮಾರು 40 ಲಕ್ಷಕ್ಕಿಂತ ಅಧಿಕ ಹಣವನ್ನು ಈ ಯೋಜನೆ ಅಡಿಯಲ್ಲಿ ದುರ್ಬಳಕೆ ಮಾಡಲಾಗಿದೆ ಇದರ ವಿರುದ್ಧ ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ಸಂಘ ತಾಲೂಕ ಸಮಿತಿ ವತಿಯಿಂದ ದಿನಾಂಕ 28 10 2022 ರಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತಿ ಮಾನ್ವಿ ದಿನಾಂಕ 31 10 2022 ರಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ ರೈಚೂರು ಇವರಿಗೆ ದೂರು ನೀಡುತ್ತಾರೆ

ತದನಂತರ ಸಂಪೂರ್ಣ ತನಿಖೆಗೆ ಒತ್ತಾಯಿಸಿ ದಿನಾಂಕ 16.11.2022 ರಿಂದ 21.11/2022ರ ವರೆಗೆ ಊಟಕ್ನೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಭರಣಿ ಸತ್ಯಾಗ್ರಹ ಹಮ್ಮಿಕೊಂಡ ನಂತರ ಹೋರಾಟದ ಫಲವಾಗಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭ್ರಷ್ಟಾಚಾರ ತನಿಖೆ ನಡೆಸಿ ತನಿಕಾ ವರದಿಯನ್ನು ಜಿಲ್ಲಾ ಪಂಚಾಯಿತಿ ಕಾರ್ಯಲಯಕ್ಕೆ ಕಳುಹಿಸಲಾಗಿತ್ತು ಧರಣಿ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಅಧಿಕಾರಿಗಳು ಜಿಲ್ಲಾ ಪಂಚಾಯತಿಗೆ ಕಳುಹಿಸಿದ ಪ್ರತಿಯ ವರದಿಯನ್ನು ಧರಣಿ ನಿರಿತರಿಗೆ ಸಲ್ಲಿಸಿದ ನಂತರ ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ಸಂಘ ತಾಲೂಕ ಸಮಿತಿಯು ಮನವಿ ಪತ್ರವನ್ನು ನೀಡಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು

ನಂತರ ನಾವು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿ ಮಾಡಿ ಊಟಕ್ನೂರು ಗ್ರಾಮ ಪಂಚಾಯತಿಯಲ್ಲಿ ನಡೆದ ಭ್ರಷ್ಟಾಚಾರ ತನಿಖಾ ವರದಿಯನ್ನು ಪರಿಶೀಲಿಸಿ ತಪ್ಪಿತಸ್ಥರ  ಮೇಲೆ  ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ ಮಾಡಲಾಯಿತು

ನಮ್ಮ ಹೋರಾಟದ ಫಲವಾಗಿ ಭ್ರಷ್ಟಾಚಾರ ವಸಗಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ರಾಮಪ್ಪ ನಡಿಗೇರಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ

ಭ್ರಷ್ಟಾಚಾರದಲ್ಲಿ ಭಾಗಿಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯತಿಯ ಕೆಲ ಸದಸ್ಯರು ಗುತ್ತಿಗೆದಾರರು ಮತ್ತು ಅಂಗಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಮತ್ತು ಗುತ್ತಿಗೆದಾರರಲ್ಲಿ ಸದಸ್ಯರೊಬ್ಬರ ಖಾಸ ಮಗನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ ಆದಕಾರಣ ಗ್ರಾಮ ಪಂಚಾಯಿತಿ ಸೂಪರ್ ಸೀಡ್ ಮಾಡಬೇಕೆಂದು ಸಂಘದ ಮುಖಂಡರಾದ  ಬುಡ್ಡಪ್ಪ ನಾಯಕ ಮಲ್ಲಿನ ಮಡಗು, ಬಸವರಾಜ ಬಾಗಲವಾಡ, ಅಯ್ಯಪ್ಪ ನಾಯಕ ನಲಗಮದಿನ್ನಿ ಪತ್ರಿಕಾಗೋಷ್ಠಿಯನ್ನು ನಡೆಸಿ ಹೇಳಿದರು

ಈ ಸಂದರ್ಭದಲ್ಲಿ ಎಂ ಬಿ ನಾಯಕ ಹುದ್ಬಾಳ ಬಸವರಾಜ ನಾಯಕ ಜಡಿವಾಳ ಮಹಾಂತೇಶ ನಾಯಕ ಶಿವರಾಜ್ ಕರಡಿ ಬಸವ ನಾಯಕ ಹನುಮೇಶ ನಾಯಕ ಕನಕಪ್ಪ ಬೆಳವಾಟ್ ಅಯ್ಯಪ್ಪ ನಾಯಕ ಗೋವಿಂದಪ್ಪ ಹನುಮಂತ ಭೀಮನ್ ಗೌಡ ಶಿವರಾಜ್ ಗೌಡ ಸಿದ್ದಯ್ಯ ಕೋಳಿ ರಮೇಶ ನಾಯಕ ಸಿದ್ದಪ್ಪ ತಡಕಲ್ ರವಿ ತಡಕಲ್ ಶಿವರಾಜ್ ಉದ್ಬಾಳ ಅಚ್ಚುತರಾಯ ವಧುಬಾಳ ರಂಜಿತ್ ಉದ್ಬಾಳ್ ಮೌನೇಶ್ ತಡಕಲ್ ಶಿವನಾಯಕ ಪೋತ್ನಾಳ್ ಮತ್ತು ಇತರೆ

LEAVE A REPLY

Please enter your comment!
Please enter your name here