ಆರ್ಥಿಕ ನೆರವನ್ನು ನೀಡಲು ಸಹಕಾರಿ ಸಂಸ್ಥೆಯ ಸ್ಥಾಪನೆ: ಎಂ.ಈರಣ್ಣ

ಮಾನ್ವಿ ಪಟ್ಟಣದ ಲಕ್ಷ್ಮಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ 11ನೇ ವಾರ್ಷಿಕ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಸಹಕಾರಿಯ ಅಧ್ಯಕ್ಷ ಎಂ.ಈರಣ್ಣ ಮಾತನಾಡಿದರು

0
119

ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಸಹಕಾರಿ ಸಂಸ್ಥೆಯ ಸ್ಥಾಪನೆ: ಎಂ.ಈರಣ್ಣ

ಮಾನ್ವಿ: ತಾಲ್ಲೂಕಿನ ಸಣ್ಣ ವ್ಯಾಪಾರಿಗಳಿಗೆ,ರೈತರಿಗೆ,ಸಾಮಾನ್ಯ ಜನರಿಗೆ ಸ್ವ-ಸಹಾಯ ಮಹಿಳಾ ಗುಂಪುಗಳಿಗೆ ಅವಶ್ಯಕವಾಗಿರುವವರಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಸಹಕಾರಿಯ ಅಧ್ಯಕ್ಷ ಎಂ.ಈರಣ್ಣ ತಿಳಿಸಿದರು

ಪಟ್ಟಣದ ಲಕ್ಷ್ಮಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ 11ನೇ ವಾರ್ಷಿಕ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಹಕರು ಸಹಕಾರಿಯೊಂದಿಗೆ ಪ್ರಾಮಾಣಿಕವಾಗಿ ಉತ್ತಮ ವ್ಯವಹಾರ ನಡೆಸಿ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿರುವುದರಿಂದ ಸಹಕಾರಿಯು ಕಳೆದ 11 ವರ್ಷಗಳಿಂದ ಉತ್ತಮ ಲಾಭದಲ್ಲಿ ಇದೆ.

1,76,30,700 ರೂ ಷೇರು ಬಂಡವಾಳ, 27,97,97,432,94 ರೂ ಠೇವಣಿ 36,49,22,520.36 ರೂ ದುಡಿಯುವ ಬಂಡವಾಳ, 56,69,87,907,94 ರೂ ವಹಿವಾಟು ನಡೆಸಿ 1,04,25,500,87 ಲಾಭವನ್ನು ಪ್ರಸಕ್ತ ಸಾಲಿನಲ್ಲಿ ಪಡೆದಿದ್ದು ಷೇರುದಾರರಿಗೆ ಶೇ 16ರಷ್ಟು ಲಾಭಾಂಶವನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು

ಮಟಮಾರಿ ಶ್ರೀ ಶಿವಾನಂದ ಮಠದ ಶ್ರೀ ಜ್ಞಾನಾನಂದ ಮಹಾರಾಜರು ಮಾತನಾಡಿ ಜಗತ್ತು ಸಹಕಾರಿ ತತ್ವದಡಿಯಲ್ಲಿ ನಿಂತಿದ್ದು ಪರಸ್ಪರ ಸಹಕಾರದಿಂದ ಸೌಹಾರ್ದತೆಯಿಂದ ಜೀವನ ನಡೆಸುವಂತೆ ತಿಳಿಸಿದರು

ಈ ಸಂದರ್ಭದಲ್ಲಿ ಸಹಕಾರಿಯ ಉತ್ತಮ ಗ್ರಾಹಕರನ್ನು ಮತ್ತು ನಿರ್ದೇಶಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಳ್ಳಿ ಹೋಸೂರಿನ ಬೀರಪ್ಪತಾತಾ, ಇ.ಒ.ಬಸವರಾಜ,ವ್ಯವಸ್ಥಾಪಕ ಕೆ.ಅನಿಲ್‌ಕುಮಾರ್,ಅಧಿಕಾರಿ ವೀರೇಶ,ಉಪಾಧ್ಯಕ್ಷ ಡಿ.ಅದಿನಾರಾಯಣ, ನಿರ್ದೇಶಕರಾದ, ಷಣ್ಮುಖ, ಬಿ.ವಿ.ಬೊಮ್ಮನಹಾಳ್, ಬಜ್ಜಣ್ಣ, ಶಂಶೀರ್‌ಖಾನ್,ಬೀರಪ್ಪ, ಹನುಮಂತಪ್ಪ, ನರಸಪ್ಪ, ರಾಜೇಶ್ವರಿ, ಗೀತಾ, ಡಾ.ಪೂಜಾ, ಬುಡ್ಡಣ್ಣ, ಈರಣ್ಣ, ರವಿಕುಮಾರ, ಸಿದ್ರಾಮಪ್ಪ, ಬಸವರಾಜ ಪಾಟೀಲ್, ಕಾನೂನು ಸಲಹೆಗಾರರಾದ ಗುಮ್ಮ ಬಸವರಾಜ,ಅಶೋಕ,ಸೇರಿದಂತೆ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here