ದಯವೇ ಧರ್ಮದ ಮೂಲವಾಗಿದೆ: ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು

0
80

ದಯವೇ ಧರ್ಮದ ಮೂಲವಾಗಿದೆ: ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು.

ಮಾನ್ವಿ: ಜಾತಿ,ಮತ,ಭೇದವಿಲ್ಲದೆ ಸಮಾಜದಲ್ಲಿ ಸೌಹಾರ್ದಯುತವಾದ ಬಾಳು ನಡೆಸಿ ಪಂಚ ಪೀಠಗಳು ಮಾನವ ಧರ್ಮಕ್ಕೆ ಜಯವಾಗಲಿ ದಯವೇ ಧರ್ಮದ ಮೂಲವಾಗಿದ್ದು ಪ್ರತಿಯೊಬ್ಬರಲ್ಲು ಹಾಗೂ ಪ್ರಾಣಿ ಪಕ್ಷಿಗಳಲ್ಲಿ ದಯ ಭಾವನೆ ಇರಬೇಕು ಎನ್ನುವ ತತ್ವವನ್ನು ಜನರಲ್ಲಿ ಪ್ರತಿಪಾದಿಸುತ್ತ ಬಂದಿವೆ ಎಂದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು

ತಾಲ್ಲೂಕಿನ ಜೂಕೂರು ಗ್ರಾಮದಲ್ಲಿ ಮಾರೆಮ್ಮ ದೇವಿ ಮತ್ತು ಸುಂಕ್ಲಮ್ಮ ದೇವಿ ನೂತನ ದೇವಸ್ಥಾನದಲ್ಲಿನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನಡೆದ ಧರ್ಮ ಸಭೆಯನ್ನು ಉದ್ಘಾಟಿಸಿ ಆರ್ಶೀವಚನ ನೀಡಿದರು
ದೇವಸ್ಥಾನದಲ್ಲಿನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯನ್ನು ಜಗದ್ಗುರುಗಳು ತಮ್ಮ ಅಮೃತ ಹಸ್ತದಿಂದ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬಿಚ್ಚಾಲಿ -ಮಟಮಾರಿ ಸಾವಿರದೇವರ ಸಂಸ್ಥಾನ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಜ್ಞಾನನಂದ ಮಹಾಸ್ವಾಮಿಗಳು,ಶ್ರೀ ಶಂಭು ಸೋಮನಾಥ ಶಿವಾಚಾರ್ಯಸ್ವಾಮಿಗಳು ಸೇರಿದಂತೆ ಗ್ರಾಮದ ಮುಖಂಡರು ಭಕ್ತರು ಭಾಗವಹಿಸಿದರು

LEAVE A REPLY

Please enter your comment!
Please enter your name here