ಪಂಚಾಯತಿ ಅವ್ಯವಸ್ಥೆ ಸರಿಪಡಿಸಲು SFI DYFI ಪ್ರತಿಭಟನೆ

0
255

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹಾಲಾಪುರ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಗ್ರಂಥಾಲಯದ ಸಮಸ್ಯೆ, ವಿದ್ಯಾರ್ಥಿಗಳ ಪಠ್ಯ ಪುಸ್ತಕ ಖರೀದಿಗೆ ಹಣ, ಉದೋಗ ಖಾತ್ರಿ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYF) ನೇತೃತ್ವದಲ್ಲಿ ಹೋರಾಟವನ್ನು ಮಾಡಲಾಯಿತು. ಹಾಲಾಪೂರು ಪಂಚಾಯ್ತಿಯಲ್ಲಿ ಗ್ರಂಥಾಲಯವಿದೆ ಅದರ ಒಳಗೆ ಹೋಗಿ ಓದಲು ಯಾರಿಗೂ ಪ್ರವೇಶವಿಲ್ಲ ಅದಕ್ಕೆ ಒಂದು ಒಳ್ಳೆಯ ಕಟ್ಟಡವಿಲ್ಲದೆ ಅವ್ಯವಸ್ಥೆಯಿಂದ ಕೂಡಿದೆ ಜೊತೆಗೆ ಪುಸ್ತಕಗಳ ಕೊರತೆಯೂ ಇದೆ ಹಾಗೂ ಇರುವ ಪುಸ್ತಕಗಳು ಧೂಳಿನಿಂದ ಕೂಡಿವೆ. ಪತ್ರಿಕೆ, ಮ್ಯಾಗಜೇನ್‌ಗಳಿಲ್ಲದೆ ಸಕಾಲಕ್ಕೆ ದೊರೆಯಲ್ಲ ಹೀಗಾಗಿ ಈ ಗ್ರಂಥಾಲಯಕ್ಕೆ ಹೊಸ ಕಟ್ಟಡ ಮಂಜೂರು ಮಾಡಿ, ಮೂಲ ಸೌಲಭ್ಯ ಒದಗಿಸಿ ಗ್ರಂಥಾಲಯವನ್ನು ಬಲಪಡಿಸಬೇಕು ಮತ್ತು ಪಠ್ಯ ಪುಸ್ತಕ ಖರೀದಿಗೆ ಪಂಚಾಯ್ತಿಯಿಂದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ೨೪.೭೫ರ ಅನುದಾನದಲ್ಲಿ ನೀಡಬೇಕಾದ ಹಣವನ್ನು ಸೂಕ್ತ ಸಮಯದಲ್ಲಿ ನೀಡುತ್ತಿಲ್ಲ. ಇದನ್ನು ಜೂನ್-ಜುಲೈನಲ್ಲಿ ಒದಗಿಸಬೇಕಿದ್ದ ಪುಸ್ತಕಗಳನ್ನು ಡಿಸೆಂಬರ್‌ನಲ್ಲಿ ಅದು ಕಾಟಾಚಾರಕ್ಕೆ ಒದಗಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಇದನ್ನು ಸರಿಪಡಿಸಬೇಕು, ಸಮರ್ಪಕವಾಗಿ ಉದ್ಯೋಗಖಾತ್ರಿ ಯೋಜನೆ ಜಾರಿಗೆ ಮುಂದಾಗಬೇಕು ರಾಷ್ಟಿಯ ಮಹಾತ್ಮಾಗಾಂಧೀ ಉದ್ಯೋಗ ಖಾತ್ರಿ ಯೋಜನೆಲ್ಲಿ ಒಂದು ಕುಟುಂಬಕ್ಕೆ ನೀಡಬೇಕಿದ್ದ ೧೫೦ ದಿನಗಳ ಉದ್ಯೋಗವನ್ನು ನೀಡುತ್ತಿಲ್ಲ. ಮಾಡಿದ ಕೆಲಸಕ್ಕೆ ಹಣವನ್ನು ಸರಿಯಾಗಿ ಜಮಾ ಮಾಡಿಲ್ಲ. ಈ ಯೋಜನೆಯ ಉದ್ದೇಶ ಗ್ರಾಮೀಣ ಪ್ರದೇಶದ ಕೂಲಿಕಾರರ ವಲಸೆ ತಡೆಗಟ್ಟುವುದಾಗಿದೆ. ಆದರೆ ಈ ಕುರಿತು ಪಿಡಿಓಗೆ ನಿರ್ಲಕ್ಷ್ಯ ಧೋರಣೆ ಇದೆ ಇದನ್ನು ಕೂಡಲೇ ಅರಿತು ಕೆಲಸ ಮಾಡಲು ಕ್ರಮ ತೆಗೆದುಕೊಳ್ಳಬೇಕು ಹಾಗೂ ಉಳ್ಳವರ ಪಾಲಾಗುತ್ತಿರುವ ವಸತಿ ಯೋಜನೆ ವಸತಿರಹಿತರಿಗೆ ಮನೆ ಮಂಜೂರು ಮಾಡುತ್ತಿಲ್ಲ. ಬಂದ ಮನೆಗಳನ್ನು ಹಣಕ್ಕೆ ಮಾರಾಟ ಮಾಡಿ, ಫಲಾನುಭವಿಗಳಿಂದ ವಂಚಿತರನ್ನಾಗಿಸಲಾಗುತ್ತಿದೆ.ಇದರಿಂದ ಅನೇಕ ಕುಟುಂಬಗಳು ಸ್ವಾತಂತ್ರ ಬಂದು ೭೦ ವರ್ಷಗಳು ಗತಿಸಿದ್ದರೂ ಇಂದಿಗೂ ಗುಡಿಸಲುಗಳಿಂದ ನಮ್ಮ ಜನರಿಗೆ ಇಂದಿಗೂ ಸ್ವಾತಂತ್ರ ಇಲ್ಲವಾಗಿದೆ. ಹಾಲಾಪೂರು ಪಂಚಾಯ್ತಿಯಲ್ಲಿ ಬರುವ ಎಲ್ಲಾ ಗ್ರಾಮದ ಚಂರಡಿ, ರಸ್ತೆ, ನೀರು ಸೇರಿದಂತೆ ಇನ್ನಿತರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿ ಮಾಡಿದ ಅನಿರ್ಧಿಷ್ಟಾವಧಿಯ ಹೋರಾಟದ ಮನವಿ ಯನ್ನು ತಾಲ್ಲೂಕು ಪಂಚಾಯತ್ ಎ.ಡಿ ಚನ್ನರೆಡ್ಡಿಯವರಿಗೆ ಮನವಿಯನ್ನು ಕೊಟ್ಟು ಲಿಖಿತ ಭರವಸೆಯನ್ನು ಪಡೆದುಕೊಂಡು ಹೋರಾಟವನ್ನು ಕೈಬಿಡಲಾಯಿತು.
ಈ ಸಂಧರ್ಭದಲ್ಲಿ SFI ಜಿಲ್ಲಾ ಕಾರ್ಯದರ್ಶಿ ರಮೇಶ ವೀರಾಪೂರು, ಮುಖಂಡರಾದ ಬಸವಂತ ಹಿರೇಕಡಬೂರು, ಬಸವರಾಜ್ ಇರಕಲ್, ತಿಪ್ಪಣ ನಿಲೋಗಲ್, ಶಿವು ಬಸವನ ಕ್ಯಾಂಪ್,ಅಮರೇಶ ಹಿರೇಕಡಬೂರು, ಸುಬಾಷ್, ಬಸವರಾಜ್, ಅಮರೇಗೌಡ ಸೇರಿದಂತೆ ಅನೇಕರಿದ್ದರು.

LEAVE A REPLY

Please enter your comment!
Please enter your name here