ಕನ್ನಡ ಭಾಷಾಭಿಮಾನವನ್ನು ಬೆಳಸಿಕೊಳ್ಳಿಃ ರಾಜಾವೆಂಕಟಪ್ಪನಾಯಕ

ಮಾನ್ವಿ ಪಟ್ಟಣದ ತಹಸೀಲ್ ಕಚೇರಿಯಲ್ಲಿ ೬೫ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕ ರಾಜಾವೆಂಕಟಪ್ಪನಾಯಕ ಭಾಘಿಯಾಗಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ನೇರವೇರಿಸಿದರು. ಈವೇಳೆ ತಹಸೀಲ್ದಾರ ಶಂಸಾಲA,ಸಿಒ ಜಗದೀಶ, ರಾಜಾಮಹೇಂದ್ರನಾಯಕ, ರಾಜಾರಾಮಚಂದ್ರನಾಯಕ ಇದ್ದರು.

0
167
????????????????????????????????????

ಮಾನ್ವಿ, ಃ ಕನ್ನಡ ಭಾಷೆ ಬರೀ ನವೆಂಬರ್‌ಗಷ್ಟೇ ಸೀಮಿತವಾಗದೆ ವರ್ಷಪೂರ್ತಿ ಕನ್ನಡ ಭಾಷೆ ಆಚರಿಸುವಂತಾಗಬೇಕು ಮತ್ತು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೇಲ್ಲರ ಆದ್ಯಕರ್ತವ್ಯವಾಗಿದೆ ಎಂದು ಶಾಸಕ ರಾಜಾವೆಂಕಟಪ್ಪನಾಯಕ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ೬೫ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ನೇರವೇರಿಸಿ ಮಾತನಾಡಿದರು.

ಕೋವಿಡ್-೧೯ ಪ್ರಯುಕ್ತ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸರಳ ರೀತಿಯಲ್ಲಿ ಹಾಗೂ ನಿಯಮಗಳನ್ನು ಪಾಲಿಸುವ ಮೂಲಕ ಆಚರಣೆ ಮಾಡಲಾಗುತ್ತಿದ್ದು ನಮ್ಮ ನಾಡು ನುಡಿ ಜಲ ನೆಲದ ರಕ್ಷಣೆಗಾಗಿ ಕಟಿಬದ್ದರಾಗಿರೋಣ ಎಂದು ರಾಜಾವೆಂಕಟಪ್ಪನಾಯಕ ಕರೆ ನೀಡಿದರು.

೬೫ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ತಹಸೀಲ್ದಾರ ಶಂಶಾಲA ಧ್ವಜಾರೋಹಣ ನೇರವೇರಿಸಿದರು. ಈ ವೇಳೆ ಸಿಪಿಐ ದತ್ತಾತ್ರೇಯ ಕಾರ್ನಾಡ್, ಪುರಸಭೆ ಮುಖ್ಯಾಧಿಕಾರಿ ಜಗದೀಶ, ಪುರಸಭೆ ಸದಸ್ಯ ರಾಜಾಮಹೇಂದ್ರನಾಯಕ, ಮುಖಂಡರಾದ ರಾಜಾರಾಮಚಂದ್ರನಾಯಕ, ಶರಣಪ್ಪ ಮೇದಾ, ಇಬ್ರಾಹಿಂ ಖುರೇಶಿ, ಭಾಷಸಾಬ್, ಖಲೀಲ್ ಖುರೇಶಿ, ಕಸಾಪ ಅಧ್ಯಕ್ಷ ಮಹ್ಮದ್ ಮುಜೀಬ್, ಕಜಾಪ ಅಧ್ಯಕ್ಷ ತಾಯಪ್ಪ ಹೊಸೂರು, ಜಿ.ಎಸ್.ಬಾಲಾಜಿಸಿಂಗ್, ಈರಣ್ಣ ಮರ್ಲಟ್ಟಿ, ಶರಣೇಗೌಡ ಯರದೊಡ್ಡಿ, ಮಹ್ಮದ್ ಇಸ್ಮಾಯಿಲ್, ಶ್ರೀಧರಸ್ವಾಮಿ, ಹನುಮಂತ ಭೋವಿ, ಬಸವರಾಜ ಭಜಂತ್ರಿ, ಶಿವರಾಜನಾಯಕ, ಮಹಾದೇವಪ್ಪ, ಚನ್ನಬಸ್ಸಯ್ಯಸ್ವಾಮಿ, ಮೌಲಾಸಾಬ್, ವಿರೇಶ ಉಪ್ಪಾರ್, ದೊಡ್ಡಣ್ಣ ಹೂಗಾರ, ಹುಸೇನಪ್ಪ, ಕೆ.ಹಂಪಯ್ಯ, ಮನೋಹರ ವಿಶ್ವಕರ್ಮ, ಸಂತೋಷ ಹೂಗಾರ, ಶಿವಕುಮಾರ ಚಲ್ಮಲ್, ಸೇರಿದಂತೆ ಇನ್ನಿತರರಿದ್ದರು.

ಈ ಸಂಧರ್ಬದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಭವನ ಮತ್ತು ಪುರಸಭೆ ಕಾರ್ಯಾಲಯದಲ್ಲಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಶಾಸಕ ರಾಜಾವೆಂಕಟಪ್ಪನಾಯಕರು ಮಾಲಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here