ಆಡಳಿತದಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆ ಬಳಕೆಯಾಗಬೇಕು : ಡಾ.ಬಸವ ಪ್ರಭುಪಾಟೀಲ್

ಮಾನ್ವಿ ಪಟ್ಟಣದ ಕನ್ನಡ ಭವನ ಆವರಣದಲ್ಲಿ ನಡೆದ 66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ಬಸವ ಪ್ರಭುಪಾಟೀಲ್ ಬೆಟ್ಟದೂರು ಕನ್ನಡ ಧ್ವಜಾರೋಹಣ ನೆರವೇರಿಸಿದರು

0
103

ಆಡಳಿತದಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆ ಬಳಕೆಯಾಗಬೇಕು : ಡಾ.ಬಸವ ಪ್ರಭುಪಾಟೀಲ್

ಮಾನ್ವಿ: ರಾಜ್ಯದಲ್ಲಿ ಕನ್ನಡ ಭಾಷೆ ಉಳಿಸಿ ಬೆಳಸಲು ಆಡಳಿತದಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆ ಬಳಕೆಯಾಗಬೇಕು ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ಬಸವ ಪ್ರಭುಪಾಟೀಲ್ ಬೆಟ್ಟದೂರು ತಿಳಿಸಿದರು
ಪಟ್ಟಣದ ಕನ್ನಡ ಭವನ ಆವರಣದಲ್ಲಿ ತಾ.ಕನ್ನಡ ಸಾಹಿತ್ಯ ಪರೀಷತ್ ವತಿಯಿಂದ ನಡೆದ 66ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಧ್ವಜಾರೋಹಣ ನೆರವೇರಿಸಿ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಇಂದು ಜಿಲ್ಲೆಯು ಗಡಿ ಭಾಗದಲ್ಲಿರುವುದರಿಂದ ಕನ್ನಡ ಮಾಧ್ಯಮದಲ್ಲಿ ಭೋದಿಸುವ ಸರಕಾರಿ ಶಾಲೆಗಳ ಅಭಿವೃದ್ದಿಯಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾ.ಕ.ಸಾ.ಪ. ಅಧ್ಯಕ್ಷ ಮಹಮ್ಮದ್ ಮುಜೀಬ್, ಅಮರಯ್ಯ ಉಪ್ಪಳಮಠ,ಗುಮ್ಮ ಬಸವರಾಜ, ಶ್ರೀ ಶೈಲಗೌಡ, ಡಿ.ವೀರನಗೌಡ, ಚುಟುಕು ಸಾಹಿತ್ಯ ಪರೀಷತ್ ತಾ.ಅಧ್ಯಕ್ಷ ಸೈಯಾದ್ ತಾಜೂದ್ದಿನ್,ದಲಿತ ಸಾಹಿತ್ಯ ಪರೀಷತ್ ಅಧ್ಯಕ್ಷ ಆರ್.ಕೆ.ಈರಣ್ಣ,ಗೋಪಿಕಾ,ವೈ. ಶ್ರೀನಿವಾಸ,ಸರೋಜ,ಶ್ರೀಧರ ದೇಸಾಯಿ, ಡಿ.ಜಿ.ಕರ್ಕಿಹಳ್ಳಿ,ಸುರೇಶ ಕುರ್ಡಿ,ಆನಂತರಾಮುಲು, ಸಂಗಮೇಶ  ಮುಧೋಳ, ಸಲ್ಲಾವುದ್ದೀನ್,ರಾಯಪ್ಪ, ಸೇರಿದಂತೆ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here