ಜನವೇದಿಕೆ ವತಿಯಿಂದ ಜನ ಸಂಪರ್ಕ ಸಭೆ ಮಾನವಿ

0
225

ಪೋತ್ನಾಳ್: ಜ 04 ರಂದು ಪ್ರಾಥಮಿಕಆರೋಗ್ಯಕೇಂದ್ರ ಮಟ್ಟದ ಜನವೇದಿಕೆ ಇವರ ವತಿಯಿಂದ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಯಿತ್ತು. ತಾಯಿ ಮತ್ತು ಮಗುವಿನ ರಕ್ಷಣೆ ಹಾಗೂ ಪೋಷಣೆಗಾಗಿ ಅಭಿಯಾನದ ಉದ್ದೇಶ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಮಗಳಲ್ಲಿ ಜನ ಸಂಘಟನೆಗಳ ಹಾಗೂ ಜನ ನಾಯಕತ್ವದಲ್ಲಿ ಜನ ವೇದಿಕೆಯನ್ನು ರಚಿಸಲಾಗಿದೆ. ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿನ ಕುಂದುಕೊರತೆಗಳು ಹಾಗೂ ತಾಯಂದಿರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಕರಪತ್ರದ ಹಾಗೂ ಭಿತ್ತಿಚಿತ್ರದ ವಿಕ್ಷಿಸುವ ಮೂಲಕ ಆರೋಗ್ಯ ಸಮಸ್ಯೆಗಳ ಗಮನಿಸಿದ ಜನ ನಾಯಕರು ಜುಲೈ 2019 ರಲ್ಲಿ ಒಂದು ತಿಂಗಳ ಕಾಲ ಸಮೀಕ್ಷೆ ನಡೆಸಿ ಮಾನವಿ, ತಾಲೂಕಿನ ಪೋತ್ನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರಗಳ 29 ಹಳ್ಳಿಗಳಲ್ಲಿ 21 ತಾಯಂದಿರ ಸಂದರ್ಶನ ಮಾಡಿ ಸಮೀಕ್ಷೆಯಲ್ಲಿ ಗುರುತಿಸಲಾದ ವೈದ್ಯಾಧಿಕಾರಿಗಳ ಕೊರತೆ ಮತ್ತು ವೈದ್ಯರ ಸಮಯ ಪಾಲನೆ ಹಾಗೂ ಖಾಸಗಿ ಆಸ್ಪತ್ರೆಗಳ ವಿಲೀನಿಕರಣ, ಔಷಧಿಗಳ ಕೊರತೆ, ಅಂಬುಲೇನ್ಸ್ ಸೌಲಭ್ಯಗಳ ವಿಳಂಬ, ಮತ್ತು ಹಣ ಪಡೆಯುವದು, ನಿರ್ದಿಷ್ಟ ಸ್ಥಳದಲ್ಲಿ ಆಸ್ಪತ್ರೆಗಳನ್ನು ಕಟ್ಟದಿರುವುದು, ಕಟ್ಟಡಗಳ ಸ್ಥಿತಿಗತಿ, ಸರಿಯಾದ ಉಪಕರಣಗಳ ಕೊರತೆ, ಮೂಲಸೌಕರ್ಯಗಳ ಕೊರತೆ, ವೈದ್ಯರು (ಕ್ವೋಟ್ರಸ್)ಸರ್ಕಾರಿ ಕಟ್ಟಡಗಳಲ್ಲಿ ಇಲ್ಲದಿರುವ ಸಮಸ್ಯೆಗಳ ಹಾಗೂ ಸರ್ಕಾರದ ಉದ್ದೇಶದಂತೆ ಶೂನ್ಯ(0) ಖರ್ಚಿನಲ್ಲಿ ಹೆರಿಗೆ ಎಂಬ ಧ್ಯೇಯೋದೇಶವನ್ನಿಟ್ಟುಕೊಂಡಿರುವ ಸರ್ಕಾರ ಮತ್ತು ಇಲಾಖೆಗಳು ಬಡಜನರ ಹಾಗೂ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಲ್ಲಿ ವಿವಿಧ ರೀತಿಯಲ್ಲಿ ಅವರಿಂದ ಹಣದೋಚುವಂತ ಕೆಲಸ ಮಾಡುತ್ತೀವೆ. ಉದಾ: ರಕ್ತ ಪರೀಕ್ಷೆ, ಹೊಟ್ಟೆ ಪರೀಕ್ಷೆ, ಚುಚ್ಚು ಮದ್ದುಗಳ ನೆಪದಲ್ಲಿ, ಹೆರಿಗೆ ಸಮಯದಲ್ಲಿ, ಸಾರಿಗೆ(ಅಂಬುಲೆನ್ಸ್)ಸೇವೆಗಳಲ್ಲಿ, ಜನನಿ ಸುರಕ್ಷಾಯೋಜನೆ, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿಯಲ್ಲಿ ದೊರಕುವAತ ಸೌಲಭ್ಯಗಳನ್ನು ಕೊಡಲು ಅವರಿಂದ ಹಣ ಪಡೆದುಕೊಳ್ಳುತ್ತೀರುವುದು ಶೋಚನಿಯ ಸಂಗತಿಯಾಗಿದೆ. ಗ್ರಾಮಗಳಲ್ಲಿ ಮಹಿಳೆಯರು, ತಾಯಂದಿರು ವಿವಿಧ ಸಮಸ್ಯೆಗಳನ್ನು ಹೇಳುವುದರ ಮುಖಾಂತರ ವೈದ್ಯಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.ಈ ಎಲ್ಲಾ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಆಲಿಸಿದ ತಾಲೂಕಾ ವೈದ್ಯಾಧಿಕಾರಿಗಳು ಮಾತನಾಡಿ ಈ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುವದಾಗಿ ಭರವಸೆ ನೀಡಿದರು. ಈ ಅಭಿಯಾನದಲ್ಲಿ ಪೋತ್ನಾಳ್ ಆರೋಗ್ಯಕೇಂದ್ರದ ವೈದ್ಯರು, ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು,ತಾಲೂಕಾ ವೈದ್ಯಾಧಿಕಾರಿಗಳು, ವಿವಿಧ ಸಂಘಟನೆಯ ಪಧಾದಿಕಾರಿಗಳು, ಜಾಗೃತಿ ಮಹಿಳಾ ಸಂಘಟನೆಯ ಸದಸ್ಯರು, ಹಾಗೂ ವಿವಿಧ ಗ್ರಾಮಗಳ ತಾಯಂದಿರು, ಜನವೇದಿಕೆಯ ಸದಸ್ಯರು, ಆಶಾಕಾರ್ಯಕರ್ತರು, ಅಂಗನವಾಡಿಯ ಮೇಲ್ವಿಚಾರಕರು ಮತ್ತು ಕಾರ್ಯಕರ್ತರು, ಜನಸಾಮಾನ್ಯರು ಅಭಿಯಾನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here