ಕನಕದಾಸರನ್ನು ಒಂದೆ ಜಾತಿಗೆ ಸೀಮಿತರನ್ನಾಗಿ ಮಾಡುವುದು ಸರಿಯಲ್ಲ

ಮಾನ್ವಿ: ಪಟ್ಟಣದ ಪ್ರವಾಸಿಮಂದಿರ ವೃತ್ತದಿಂದ ತಹಸೀಲ್ದಾರ್ ಕಛೇರಿವರೆಗೆ ಭಕ್ತ ಕನಕದಾಸರ ಹಾಗು ಓನಕೆ ಓಬವ್ವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

0
62

ಕನಕದಾಸರನ್ನು ಒಂದೆ ಜಾತಿಗೆ ಸೀಮಿತರನ್ನಾಗಿ ಮಾಡುವುದು ಸರಿಯಲ್ಲ

ಮಾನ್ವಿ: ಪಟ್ಟಣದಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕ ಆಡಳಿತದಿಂದ ಶುಕ್ರವಾರ ನಡೆದ ಕನಕದಾಸರ ಹಾಗು ಓನಕೆ ಓಬವ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ರಾಜಾ ವೆಂಕಟಪ್ಪನಾಯಕ ಮಾತನಾಡಿ ನಮ್ಮ ನಾಡಿನಲ್ಲಿನ ದಾಸ ಸಾಹಿತ್ಯವನ್ನು ರಚಿಸಿದ ದಾಸರಲ್ಲಿ ಕನಕದಾಸರು ಕೂಡ ಶ್ರೇಷ್ಟದಾಸರಾಗಿದ್ದು ಅವರು ತಮ್ಮ ಕಿರ್ತನೆಗಳ ಮೂಲಕ ಸಮಾಜ,ಹಾಗೂ ಜನರಲ್ಲಿ ಜಾತಿ ವ್ಯವಸ್ಥೆಯ ಕುರಿತು ಅಸ್ಪೃಶ್ಯತೆ ಆಚರಣೆ ನಿವಾರಣೆೆ ಕುರಿತು ಜಾಗೃತಿ ಮೂಡಿಸಿದ ಕನಕದಾಸರು ಯಾವುದೇ ಜಾತಿಗೆ ಸೀಮಿತರಾಗದೆ ಬಡವ ಬಲ್ಲಿದ ಸೇರಿದಂತೆ ಎಲ್ಲಾರನ್ನು ಸಮಾನ ವಾಗಿ ಕಂಡ ಇವರನ್ನು ಇಂದು ಕೇವಲ ಒಂದು ಜಾತಿಗೆ ಸೀಮಿತವಾಗಿ ನೊಡುತ್ತಿರುವುದು ಸರಿಯಲ್ಲ ಹಾಲುಮತ ಸಮಾಜದವರು ಹಾಗೂ ವೀರವನಿತೆ ಒಬ್ಬವ್ವ ಸಮಾಜದವರು ಈ ಇಬ್ಬರು ಮಹನೀಯರ ತತ್ವ ಅದರ್ಶಗಳನ್ನು ಅಳಾವಡಿಸಿಕೊಳ್ಳಬೇಕು ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದಾಗ ಮಾತ್ರ ಸಮಾಜಿಕವಾಗಿ,ಅರ್ಥಿಕವಾಗಿ,ರಾಜಕೀಯವಾಗಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ೨೦ಲಕ್ಷ ಅನುದಾನದಲ್ಲಿ ವಿಕಲಚೇತನರಿಗೆ ೧೯ ತ್ರಿಚಕ್ರವಾಹನಗಳನ್ನು ಕನಕದಾಸರ ಜಯಂತಿ ಅಂಗವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.

ಗಾಂಧಿ ಕಾಲೇಜ್ ಪ್ರಾಚಾರ್ಯ ಈರಣ್ಣ ಮರ್ಲಟ್ಟಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಕನಕದಾಸರು ಭಕ್ತಿಪಂಥಕ್ಕೆ ಸೇರಿದವರಾಗಿದ್ದು, ಭಕ್ತಿಯಿಂದ ಕೀರ್ತನೆ ಹಾಡಿ ಶ್ರೀಕೃಷ್ಣನನ್ನೆ ಒಲಿಸಿಕೊಂಡಿದ್ದರು. ಓನಕೆ ಓಬವ್ವ ಕಳ್ಳ ಕಿಂಡಿಯಲ್ಲಿ ಚಿತ್ರದುರ್ಗ ಕೋಟೆಗೆ ನುಗ್ಗಿತ್ತಿದ್ದ ಹೈದರಾಲಿ ಸೈನ್ಯವನ್ನು ಓನಕೆ ಮೂಲಕ ಹೊಡೆದು ಉರುಳಿಸಿದ ವೀರವನಿತೆ ಇವರ ದೇಶ ಪ್ರೇಮವನ್ನು ನಾವು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು

ಗವಿಸಿದ್ದಪ್ಪ ಪಾಟೀಲ್ ಉಪನ್ಯಾಸನೀಡಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಬಸವ ವೃತ್ತದ ಮೂಲಕ ತಹಸೀಲ್ದಾರ್ ಕಛೇರಿವರೆಗೆ ಭಕ್ತ ಕನಕದಾಸರ ಹಾಗು ಓನಕೆ ಓಬವ್ವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಹನುಮಂತ್ರಾಯ ಗವಾಯಿಗಳಿಂದ ಕನಕದಾಸರ ಕೀರ್ತನೆಗಳ ಗಾಯನ ನಡೆಯಿತು. ಗಣ್ಯರನ್ನು ಸನ್ಮಾನಿಸಲಾಯಿತು. 

ಮಾಜಿ ಶಾಸಕ ಗಂಗಾಧರ ನಾಯಕ, ತಹಸೀಲ್ದಾರ್ ಚಂದ್ರಕಾAತ, ಪ್ರಥಮದರ್ಜೆ ಗುತ್ತಿಗೆದಾರ ಎಂ.ಈರಣ್ಣ, ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹೀದ್, ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮಾರಡ್ಡಿ ಭೋಗಾವತಿ, , ಶರಣಪ್ಪ ಗುಡದಿನ್ನಿ, ಡಿ.ಬಸನಗೌಡ, ಅಯ್ಯಪ್ಪ ಮ್ಯಾಕಲ್, ಕುರುಬರ ಸಮಾಜದ ತಾಲೂಕ ಅಧ್ಯಕ್ಷ ಕೆ.ಸತ್ಯನಾರಾಯಣ ಮುಸ್ಟೂರು, ನಯೋಪ್ರ ಅಧ್ಯಕ್ಷ ಶರಣನಗೌಡ ನಕ್ಕುಂದಿ,ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಸಾಲೀಂ ಪಾಷ, ಅರಣ್ಯಾಧಿಕಾರಿ ರಾಜೇಶ ನಾಯಕ, ಹಜೀಮಿಯಾ,ಮಹಮ್ಮದ್ ಯೂನಿಸ್, ಸೇರಿದಂತೆ ಇನ್ನಿತರರು ಇದ್ದರು.

ಫೋಟೋ: ೧೧ಎಂಎನ್‌ವಿ೧

ಮಾನ್ವಿ: ಪಟ್ಟಣದ ಪ್ರವಾಸಿಮಂದಿರ ವೃತ್ತದಿಂದ ತಹಸೀಲ್ದಾರ್ ಕಛೇರಿವರೆಗೆ ಭಕ್ತ ಕನಕದಾಸರ ಹಾಗು ಓನಕೆ ಓಬವ್ವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

LEAVE A REPLY

Please enter your comment!
Please enter your name here