ಜನಪದದಿಂದ ದೊರೆತ ಜನಪದ ಹಾಡುಗಳನ್ನು ಹಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು; ವೀರೇಶ್ ನಾಯಕ್ ಬೆಟ್ಟದೂರು

ನೇತಾಜಿ ಶಾಲೆಯಲ್ಲಿ ಕರವೇ ತಾ.ಘಟಕದಿಂದ ನಡೆದ ಗೀತಾಗಾಯನ ಸ್ಪರ್ಧೆಯನ್ನು ನಗರ ಯೋಜನಾ ಪ್ರಾದಿಕಾರದ ಅಧ್ಯಕ್ಷ ವಿರೇಶ ನಾಯಕ ಬೆಟ್ಟದೂರು ಉದ್ಘಾಟಿಸಿದರು

0
101

ಜನಪದದಿಂದ ದೊರೆತ ಜನಪದ ಹಾಡುಗಳನ್ನು ಹಾಡುವಂತೆ ಕರೆ
ಮಾನ್ವಿ: ಜನಪದರಿಂದ ದೊರೆತ ಜನಪದ ಹಾಡುಗಳನ್ನು ರಾಗ,ತಾಳ,ಲಾಯ ದೊಂದಿಗೆ ಸಾಹಿತ್ಯವನ್ನು ಕೂಡಿಸಿ ಕೊಂಡು ಹಾಡಿದಾಗ ಮಾತ್ರ ಜನರನ್ನು ರಂಜಿಸಲು ಸಾಧ್ಯವಾಗುತ್ತದೆ ಕನ್ನಡ ಭಾಷೆಯಲ್ಲಿ ಅನೇಕ ಕವಿಗಳು,ಸಾಹಿತಿಗಳು,ಶರಣರು, ವಚನಗಳನ್ನು, ಕವಿತೆಗಳನ್ನು, ಭಾವಗೀತೆಗಳನ್ನು, ರಚಿಸಿದರೆ ಎಂದು ನಗರ ಯೋಜನಾ ಪ್ರಾದಿಕಾರದ ಅಧ್ಯಕ್ಷ ವಿರೇಶ ನಾಯಕ ಬೆಟ್ಟದೂರು ತಿಳಿಸಿದರು

ಪಟ್ಟಣದ ನೇತಾಜಿ ಶಾಲೆಯಲ್ಲಿ ಕರವೇ ಹೆಚ್.ಶಿವರಾಮೇಗೌಡ ಬಣ ತಾ.ಘಟಕ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಗೀತಾಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು

ನೇತಾಜಿ ಶಾಲೆಯ ಅಧ್ಯಕ್ಷರಾದ ಕೆ.ನರಸಿಂಹ ಮಾತನಾಡಿ ಖಾಸಗಿ ಅಂಗ್ಲ ಮಾಧ್ಯಮ ಶಾಲೆಗಳಲ್ಲಿನ ಮಕ್ಕಳಿಗೆ ಕನ್ನಡ ಸಾಹಿತ್ಯದ ಬಗ್ಗೆ ಆರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ನೆರವಾಗುತ್ತವೆ ಎಂದು ತಿಳಿಸಿದರು

ಕರವೇ ತಾ.ಅಧ್ಯಕ್ಷ ಆನಂದಸ್ವಾಮಿ, ಸಂಗೀತ ಕಲಾವಿದರಾದ ವಿರುಪಕ್ಷಯ್ಯಸ್ವಾಮಿ ವಂದಲಿ, ಅಮರೇಶ ಸಾಲಿಮಠ,ಪುರಸಭೆ ಸದಸ್ಯ ಗೀರಿನಾಯಕ್, ತಿಮ್ಮರೆಡ್ಡಿ,ಮಹೇಶಗೌಡ, ಶಿವು ಸೇರಿದಂತೆ ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಗೀತಾಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡದ ಅನೇಕ ಹಾಡುಗಳನ್ನು ಹಾಡಿದರು

LEAVE A REPLY

Please enter your comment!
Please enter your name here