ಕನ್ನಡ ಭಾಷೆ,ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೇಲಸವಾಗಬೇಕು

ಮಾನ್ವಿ: ಪಟ್ಟಣದ ಈದ್ಗಾ ಫಂಕ್ಷನ್ ಹಾಲ್‌ನಲ್ಲಿ ನವಸ್ಪೂರ್ತಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಿAದ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರದ್ಮಶ್ರೀ ಪುರಸ್ಕೃತೆ ಜೋಗತಿ ಬಿ.ಮಂಜಮ್ಮರನ್ನು ಸನ್ಮಾನಿಸಲಾಯಿತು.

0
75

ಮಾನ್ವಿ: ಪಟ್ಟಣದ ಈದ್ಗಾ ಫಂಕ್ಷನ್ ಹಾಲ್‌ನಲ್ಲಿ ಪಯೋನಿರ್ಸ್ ಸರ್ವಾಭಿವೃದ್ಧಿ ಬಳಗ ಹಾಗೂ ನವಸ್ಪೂರ್ತಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ರಾಜಾ ವೆಂಕಟಪ್ಪನಾಯಕ ಉದ್ಘಾಟಿಸಿ ಮಾತನಾಡಿ ರಾಜ್ಯದ ನೆಲ,ಜಲ,ಸಂಸ್ಕೃತಿಗೆ ಹಾನಿಯಾದಲ್ಲಿ ಪ್ರತಿಯೊಬ್ಬ ಕನ್ನಡಿಗ ಕೂಡ ರಕ್ಷಣೆಗೆ ಧಾವಿಸಬೇಕು. ಕರ್ನಾಟಕ ರಾಜ್ಯವು ದೇಶದಲ್ಲಿಯೇ ಅತ್ಯಂತ ಶಾಂತಿಯುತವಾದ ಸೌಹಾರ್ಧತೆಯಿಂದ ಕೂಡಿದ ನಾಡು ಎಂದು ಹೆಸರು ಪಡೆದಿದ್ದು ಯಾವುದೇ ಕಾರಣಕ್ಕೂ ಶಾಂತಿಯನ್ನು ಕದಡುವವರಿಗೆ ಅವಕಾಶವನ್ನು ನೀಡಬಾರದು ಪ್ರದ್ಮಶ್ರೀ ಪುರಸ್ಕೃತೆ ಜೋಗತಿ ಬಿ.ಮಂಜಮ್ಮ,ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ಕಮಲಮ್ಮ ನಮ್ಮ ನಾಡಿನ ಹೆಮ್ಮೆಯ ಪ್ರತೀಕವೆಂದು ತಿಳಿಸಿದರು.

ಪ್ರದ್ಮಶ್ರೀ ಪುರಸ್ಕೃತೆ ಜೋಗತಿ ಬಿ.ಮಂಜಮ್ಮ ಮಾತನಾಡಿ ಕೇವಲ ಕನ್ನಡ ಪ್ರೀತಿ ನವೆಂಬರ್‌ಗೆ ಸೀಮಿತವಾಗದೆ ದಿನವಿಡಿ ಕನ್ನಡ ಭಾಷೆ,ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೇಲಸವಾಗಬೇಕು ಗಂಡಾಗಿ ಹುಟ್ಟಿ ಹೆಣ್ಣಗುವುದು ಹೆಣ್ಣಗಿ ಹುಟ್ಟಿ ಗಂಡಗುವುದು ಪ್ರಕೃತಿ ಸಹಾಜ ಕ್ರೀಯೆಯಾಗಿದ್ದು ತೃತೀಯ ಲಿಂಗಿಗಳಿಗೆ ತಾರತಮ್ಯ ಮಾಡದೆ ಪಾಲಕರು ಇತರೆ ಮಕ್ಕಳಂತೆ ಸಮಾನವಾಗಿ ಕಂಡು ಶಿಕ್ಷಣ ನೀಡಿದಲ್ಲಿ ಅವರು ಕೂಡ ಸಮಾಜದಲ್ಲಿ ಒಂದು ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಲು ಅವಕಾಶವಾಗುತ್ತದೆ ಸರ್ಕಾರ ತೃತೀಯ ಲಿಂಗಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ.೧ಮೀಸಲಾತಿ ಅವಕಾಶ ಕಲ್ಪಿಸಿದ್ದು ಅವರಿಗೂ ಕೂಡ ಸಮಾನತೆ ನೀಡಿ ಎಂದು ತಿಳಿಸಿದರು.

ಜಾನಪದ ವಾಗ್ಮಿ ವೆಂಕನಗೌಡ ವಟಗಲ್ ಜಾನಪದ ಕಲೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿದರು.

ನಂತರ ಪ್ರದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮ ಹಾಗು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ಕಮಲಮ್ಮರನ್ನು ಸನ್ಮಾನಿಸಲಾಯಿತು.

ವಿವಿಧ ಶಾಲೆಗಳ ಮಕ್ಕಳಿಗಾಗಿ ಆಯೋಜಿಸಲಾದ ಭಾಷಣ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ವಿತರಿಸಲಾಯಿತು.

ಆಮ್‌ಆದ್ಮಿಯ ಜಿಲ್ಲಾ ಪ್ರ.ಕಾರ್ಯದರ್ಶಿ ಶ್ಯಾಂಸುAದರ ನಾಯಕ, ಕಸಾಪ ತಾಲೂಕ ಅಧ್ಯಕ್ಷ ರವಿಕುಮಾರ ಪಾಟೀಲ್,ಅರಣ್ಯಾಧಿಕಾರಿ ರಾಜೇಶ ನಾಯಕ, ಪಕ್ಷಿ ಪ್ರೇಮಿ ಸಲ್ಲಾವುದ್ದೀನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಸಂಗಮೇಶ ಮುಧೋಳ, ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಈ.ನರಸಿಂಹ, ಡಾ.ಪ್ರಜ್ಞಾ ಹರಿಪ್ರಸಾಸ್, ಡಾ.ಅಂಬಿಕಾ ಮಧುಸೂಧನ್, ಪದಾಧಿಕಾರಿಗಳಾದ ಸುನೀಲ್, ಯು.ಕೆ.ಪತ್ತಾರ, ಲಚುಮಯ್ಯ, ಶಿವಾನಂದ, ಶಿಲ್ಪಾ, ನಿರ್ಮಲಾ, ಮಹಿಬೂಬ ಮದ್ಲಾಪೂರ, ದೇವರಾಜ್ ನಾಯಕ ಇದ್ದರು.

೧೧-ಮಾನ್ವಿ-೩:

ಮಾನ್ವಿ: ಪಟ್ಟಣದ ಈದ್ಗಾ ಫಂಕ್ಷನ್ ಹಾಲ್‌ನಲ್ಲಿ ನವಸ್ಪೂರ್ತಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಿAದ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರದ್ಮಶ್ರೀ ಪುರಸ್ಕೃತೆ ಜೋಗತಿ ಬಿ.ಮಂಜಮ್ಮರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here