ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಕರೆಯುವಂತೆ ಮನವಿ

:ಪಟ್ಟಣದ ಕಾರ್ಮಿಕ ನಿರೀಕ್ಷಕರ ಕಚೇರಿ ಆವರಣದಲ್ಲಿ ಕಾರ್ಮಿಕರ ಫೆಡರೇಶನ್ ಸಿ.ಐ.ಟಿ.ಯು ಸಂಯೋಜಿತ ತಾಲೂಕು ಸಮಿತಿಯ ಗೌರವಾಧ್ಯಕ್ಷ ಹೆಚ್.ಶರ್ಪುದ್ದೀನ್ ಕಾರ್ಮಿಕ ನೀರಿಕ್ಷಕರಿಗೆ ಮನವಿ ಸಲ್ಲಿಸಿದರು.

0
156

ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಕರೆಯುವಂತೆ ಮನವಿ

ಮಾನ್ವಿ:ಪಟ್ಟಣದ ಕಾರ್ಮಿಕ ನಿರೀಕ್ಷಕರ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತ್ತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಿ.ಐ.ಟಿ.ಯು ಸಂಯೋಜಿತ ತಾಲೂಕು ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತ್ತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ಕಾರ್ಯದರ್ಶಿಗಳಿಗೆ ತಾಲೂಕು ಕಾರ್ಮಿಕ ನಿರೀಕ್ಷಕ ಶ್ರೀಧರರವರ ಮೂಲಕ ಮನವಿ ಸಲ್ಲಿಸಿ ತಾಲೂಕು ಸಮಿತಿಯ ಗೌರವಾಧ್ಯಕ್ಷ ಹೆಚ್.ಶರ್ಪುದ್ದೀನ್ ಪೋತ್ನಾಳ್ ಮಾತನಾಡಿ ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ನಿರ್ವಾಹಿಸುತ್ತಿರುವ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎನ್ನುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತ್ತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಪ್ರತಿವರ್ಷ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಹಾಯಧನವನ್ನು ನೀಡಲಾಗುತ್ತಿತ್ತು ಆದರೆ ಕಳೆದ ವರ್ಷ ೨೦೨೧-೨೨ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಫಲನುಭಾವಿಗಳಿಗೂ ಇದುವರೆಗೂ ಶೈಕ್ಷಣಿಕ ಸಹಾಯಧನ ಪಾವತಿಯಾಗಿಲ್ಲ ಹಾಗೂ ೨೦೨೨-೨೩ ನೇ ಸಾಲಿಗೆ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿಯನ್ನು ಆಹ್ವಾನಿಸಿಲ್ಲದೆ ಇರುವುದರಿಂದ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ನಡೆಸಲು ತೊಂದರೆಯಾಗಿದ್ದು ಕೂಡಲೇ ಬಾಕಿ ಇರುವವರಿಗೆ ಹಣ ಪಾವತಿ ಮಾಡಬೇಕು ಹಾಗೂ ಶೀಘ್ರವೇ ಶೈಕ್ಷಣಿಕ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಬೇಕು ಎಂದು ಒತ್ತಾಯಿಸಿದರು.

ತಾ.ಅಧ್ಯಕ್ಷ ರುದ್ರಪ್ಪನಾಯಕ,ಪ್ರ.ಕಾರ್ಯದರ್ಶಿ ಆಂಜೀನೇಯ್ಯಕೋಟೆ,ಸA.ಕಾರ್ಯದರ್ಶಿ ಸಿದ್ದಲಿಂಗಯ್ಯ, ಮಹಮ್ಮದ್, ಪ್ರತಾಪ, ಲಕ್ಷö್ಮಣ, ರಮೇಶ, ಹನುಮಂತ, ಶ್ರೀನಿವಾಸ, ರಾಮಲಿಂಗಪ್ಪ, ರಾಮಣ್ಣ ಸೇರಿದಂತೆ ಇನ್ನಿತರರು ಇದ್ದರು.

೧೦-ಮಾನ್ವಿ-೫:

ಮಾನ್ವಿ:ಪಟ್ಟಣದ ಕಾರ್ಮಿಕ ನಿರೀಕ್ಷಕರ ಕಚೇರಿ ಆವರಣದಲ್ಲಿ ಕಾರ್ಮಿಕರ ಫೆಡರೇಶನ್ ಸಿ.ಐ.ಟಿ.ಯು ಸಂಯೋಜಿತ ತಾಲೂಕು ಸಮಿತಿಯ ಗೌರವಾಧ್ಯಕ್ಷ ಹೆಚ್.ಶರ್ಪುದ್ದೀನ್ ಕಾರ್ಮಿಕ ನೀರಿಕ್ಷಕರಿಗೆ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here