ನಾಳೆ ವರ್ಷದ ಕೊನೆಯ ಕಂಕಣ ಸೂರ್ಯಗ್ರಹಣ

0
260

ನವದೆಹಲಿ : ನಾಳೆ ಗುರುವಾರ ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದ್ದು, ಈ ಸೂರ್ಯಗ್ರಹಣ ಭಾರತ ಆಸ್ಟ್ರೇಲಿಯಾ, ಆಫ್ರಿಕಾದ ಜೊತೆಗೆ ಏಷ್ಯಾದ ಇತರ ಅನೇಕ ದೇಶಗಳಲ್ಲಿಯೂ ಸೂರ್ಯಗ್ರಹಣ ಕಂಡುಬರಲಿದೆ  ಎಂದು ಹೇಳಲಾಗಿದೆ.

ಇಡೀ ಪ್ರಪಂಚದಲ್ಲೇ 150 ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿರುವ ಕಂಕಣ ಸೂರ್ಯಗ್ರಹಣ      ರಾಜ್ಯದ ಬೆಂಗಳೂರು, ಮಂಗಳೂರು, ಮೈಸೂರು ಹಾಸನ ಮತ್ತು ತಮಿಳು ನಾಡಿನ ಕೊಯಮತ್ತೂರು, ಸೇಲಂ, ದಿಂಡಿಗಲ್ ಸೇರಿದಂತೆ ದಕ್ಷಿಣ ಭಾರತದ ವಿವಿಧ ಸ್ಥಳಗಳಲ್ಲಿ ಪೂರ್ಣ ಪ್ರಮಾಣದ ಸೂರ್ಯ ಗ್ರಹಣ ಗೋಚರಿಸಲಿದೆ ಇದಾದ ನಂತ್ರ ಮುಂದಿನ ವರ್ಷ ಜನವರಿಯಲ್ಲಿ ಹೊಸ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ.

ವರ್ಷದಲ್ಲಿ ಉಂಟಾಗುವ ಸೂರ್ಯಗ್ರಹಣ ವಿಶಿಷ್ಟವಾಗಿದ್ದು, ಸುದೀರ್ಘ ಕಾಲ ಸೂರ್ಯನನ್ನು ಚಂದ್ರ ಆವರಿಸಿಕೊಳ್ಳಲಿದೆ. ಹೀಗಾಗಿ ಇದರ ಪರಿಣಾಮ ಕೂಡ ಹೆಚ್ಚು ಸಮಯ ಇರುತ್ತದೆ ಎಂದು ಹೇಳಲಾಗುತ್ತಿದೆ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಪ್ರವೇಶಿಸುವ ಈ ವೇಳೆ ಸೂರ್ಯ ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತದೆ. ಕಾರಣ ಸೂರ್ಯನ ಕಿರಣಗಳು ಉಂಗುರದ ರೀತಿ ಗೋಚರಿಸುತ್ತವೆ ಆದ ಕಾರಣ ಇದಕ್ಕೆ ಕಂಕಣ ಸೂರ್ಯ ಗ್ರಹಣ ಎನ್ನಲಾಗುತ್ತದೆ

ಕೆಲವೇ ಕ್ಷಣಗಳು ಸಂಭವಿಸುವ ಈ ವಿದ್ಯಾಮಾನಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ.

ಸೂರ್ಯಗ್ರಹಣಕ್ಕೂ ಮುನ್ನ 12 ಗಂಟೆಗಳ ಮೊದಲೇ ಸೂತಕ ಶುರುವಾಗಲಿದೆ. ಧಾರ್ಮಿಕ ನಂಬಿಕೆ ಪ್ರಕಾರ ಸೂತಕದ ಸಮಯ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಧಾರ್ಮಿಕ ನಂಬಿಕೆ ಪ್ರಕಾರ, ಸೂರ್ಯಗ್ರಹಣವು ವ್ಯಕ್ತಿಯ ಜೀವನದ ಮೇಲೆ ವಿಶೇಷ ಪರಿಣಾಮ ಬೀರಲಿದೆ.

ಸೂರ್ಯಗ್ರಹಣದ ಸಂದರ್ಭದಲ್ಲಿ ಆಹಾರ ಸೇವನೆ ಮಾಡಬಾರದು. ಶಬ್ಧ ಮಾಡಬಾರದು. ಶುಭ ಕೆಲಸ ಮಾಡಬಾರದು. ಪೂಜೆಗಳನ್ನು ಮಾಡಬಾರದು. ದೇವಸ್ಥಾನಕ್ಕೆ ಭೇಟಿ ನೀಡಬಾರದು.

ಆದಷ್ಟು ಮನೆಯಿಂದ ಹೊರಗೆ ಹೋಗಬೇಡಿ. ಶಾರೀರಿಕ ಸಂಬಂಧ ಬೆಳೆಸಬಾರದು. ಗುರು ಮಂತ್ರವನ್ನು ಪಠಿಸಬಹುದು. ಯಾವುದೇ ಮಂತ್ರ, ರಾಮಾಯಣವನ್ನು ಪಠಿಸಬಹುದು. ಗ್ರಹಣ ನಂತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಶುದ್ಧವಾಗಬೇಕು. ದಾನ ಮಾಡಬೇಕು. ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು. ಗ್ರಹಣ ಅವಧಿಯಲ್ಲಿ ನೇರಳಾತೀತ ಕಿರಣಗಳು ಸೂರ್ಯನಿಂದ ಬಿಡುಗಡೆಯಾಗುತ್ತವೆ. ಇದು ಭ್ರೂಣಕ್ಕೆ ಹಾನಿಯುಂಟು ಮಾಡುತ್ತದೆ. ಸೂರ್ಯ ಗ್ರಹಣದ ವೇಳೆ ಬರಿಗಣ್ಣಿನಲ್ಲಿ ಸೂರ್ಯನನ್ನು ನೋಡಬಾರದು ಎಂದು ಧಾರ್ಮಿಕ ಗುರು ಹಿರಿಯರ ಅಭಿಪ್ರಾಯ

ಭಾರತದಲ್ಲಿ ಬೆಳಗ್ಗೆ 7.59 ರಿಂದ ಸೂರ್ಯಗ್ರಹಣ ಶುರುವಾಗಲಿದ್ದು, 10.47 ಕ್ಕೆ ಗರಿಷ್ಠ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ.

*ಪ್ರಮುಖ ಊರುಗಳಲ್ಲಿ ಸೂರ್ಯಗ್ರಹಣದ ಸಮಯ*

*ಊರು     ಸ್ಪರ್ಷ    ಮಧ್ಯ   ಮೋಕ್ಷ*

*ವಿಜಯಪುರ   08.05   09.26   11.03*

*ಬಾಗಲಕೋಟ  08.05   09.26   11.04*

*ಧಾರವಾಡ    08.04  09.24   11.02*

*ಹುಬ್ಬಳ್ಳಿ      08.04   09.25   11.03*

*ಹಾವೇರಿ     08.04  09.25   11.04*

*ಗದಗ       08.05   09.25   11.04* .

*ಬೆಳಗಾವಿ     08.04   09.24   11.01* .

*ಕಲಬುರ್ಗಿ    08.06   09.28   11.06* .

*ಯಾದಗಿರಿ    08.06   09.28   11.07* .

*ಕೊಪ್ಪಳ     08.05   09.24   11.05* .

*ರಾಯಚೂರ   08.06   09.28   11.08* .

*ಬಳ್ಳಾರಿ     08.06   09.28   11.08* .

*ಹೊಸಪೇಟೆ   08.05   09.27   11.06* .

*ಬೀದರ      08.07   09.28   11.07* .

*ಶಿವಮೊಗ್ಗ     08.05  09.26   11.05* .

*ದಾವಣಗೆರೆ    08.05  09.26   11.05* .

*ಮೈಸೂರು    08.06  09.28   11.09* .

*ಮಂಡ್ಯ      08.06  09.29   11.10* .

*ಚಿತ್ರದುರ್ಗ    08.05  09.27   11.07* .

*ತುಮಕೂರು   08.06  09.29    11.10* .

*ಗಂಗಾವತಿ    08.06  09.27    11.06* .

*ಬಸವಕಲ್ಯಾಣ   08.06  09.28    11.06* .

*ಸುಳ್ಯ       08.06  09.27 (ಕಂ) 11.05* .

*ನೆಲಮಂಗಲ   08.06  09.29     11.11* .

*ಕನಕಪುರ     08.06  09.29     11.11* .

*ಮುಳಬಾಗಿಲು   08.07  09.31     11.13* .

*ಶಿಕಾರಿಪುರ    08.05  09.26    11.04* .

*ಸವದತ್ತಿ      08.04  09.25     11.03* .

*ಹಾನಗಲ್ಲ     08.04  09.25     11.03* .

*ಮಂಗಳೂರು   08.04  09.25 (ಕಂ) 11.03* .

*ಹಾಸನ      08.05  09.27    11.07* .

*ಉಡುಪಿ      08.04  09.25     11.03* .

*ಧರ್ಮಸ್ಥಳ     08.04  09.25    11.03* .

*ಚಾಮರಾಜನಗರ 08.05  09.29    11.10*   .

*ಮಡಿಕೇರಿ     08.05  09.27(ಕಂ)  11.06* .

*ಬೆಂಗಳೂರು    08.06  09.30     11.11*   .

*ಚಿಕ್ಕಮಗಳೂರು  08.05  09.26    11.06* .

*ಕಾರವಾರ     08.04  09.24    11.00* .

*ಗೋಕಾಕ     08.04  09.24    11.01* .

*ಗೋಕರ್ಣ    08.04  09.24    11.01* .

*ಚಿಕ್ಕೋಡಿ     08.04  09.24    11.01* .

*ಜಮಖಂಡಿ    08.05  09.25    11.02* .

*ಬದಾಮಿ     08.05  09.26  11.04* .

*ಮುಧೋಳ    08.05  09.25  11.02* .

*ರಾಣೆಬೆನ್ನೂರ  08.04  09.26  11.04* .

*ಶಿರಸಿ      08.04  09.25  11.02* .

*ಶೃಂಗೇರಿ     08.04  09.25  11.04* .

*ರೋಣ      08.05  09.26  11.04* .

LEAVE A REPLY

Please enter your comment!
Please enter your name here