ಸಾರಿಗೆ ನೌಕರರ ಬೇಡಿಕೆ ಮಾರ್ಚ್ 15 ರ ಒಳಗೆ ಈಡೇರದಿದ್ದರೆ ಬಸ್ ಸಂಚಾರ ಬಂದ್ ಮಾಡಿ ಮುಷ್ಕರ; ಕೋಡಿಹಳ್ಳಿ ಚಂದ್ರಶೇಖರ್.. .

ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎನ್ನುವುದು. ನಮ್ಮ ಬೇಡಿಕೆ. ಕೋಡಿಹಳ್ಳಿ ಚಂದ್ರಶೇಖರ್.. .

0
152

http://kalyanatimes.com/?p=2828&preview=true

ನಗರದ ಮೌರ್ಯ ಸರ್ಕಲ್​ನಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಕುರಿತು ಮಾತನಾಡಿದ  ನಮ್ಮ ಬೇಡಿಕೆ ಒಂದೇ ಇರುತ್ತೆ. ಅದು ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎನ್ನುವುದು. ನಮ್ಮ ಬೇಡಿಕೆ ಮಾರ್ಚ್ 15 ರ ಒಳಗೆ ಈಡೇರದಿದ್ದರೆ ಸರ್ಕಾರಕ್ಕೆ ನಾವು ಯೂಟರ್ನ್ ಹೊಡೀತಿವಿ ಎಂದು ಎಚ್ಚರಿಕೆ ನೀಡಿದ ಕೋಡಿಹಳ್ಳಿ ಚಂದ್ರಶೇಖರ್.. .

ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಮಾರ್ಚ್ 15 ರ ಬಳಿಕ ಬಸ್ ಬಂದ್ ಮಾಡಿ ಮುಷ್ಕರ ನಡೆಸಲಾಗುವುದು ಈ ಹಿಂದೆ ಯಾವುದೇ ಸಿದ್ಧತೆ ಇಲ್ಲದೆ ಒಂದೇ ರಾತ್ರಿಯಲ್ಲಿ ಇಡೀ ಬಸ್ ಸಂಚಾರ ನಿಲ್ಲಿಸಿದ್ವಿ ಹೆಂಡತಿ ಮಕ್ಕಳ ಸಮೇತ ರಸ್ತೆಗೆ ಇಳಿದು ಹೋರಾಟ ಮಾಡುತ್ತೇವೆ. ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಘೋಷಣೆ ಮಾಡಿದರು.

ಸಾರಿಗೆ ಸಚಿವರೇ.. ಮುಖ್ಯ ಮಂತ್ರಿಗಳೇ ಈಗಲೂ ಸಮಯ ಇದೆ.. ಯೋಚನೆ ಮಾಡಿ. ಕಳೆದ ಬಾರಿ ನಮ್ಮ ಯೂನಿಯನ್ ರಿಜಿಸ್ಟರ್ ಆಗಿಲ್ಲ ಅಂತ ಹೇಳಿದ್ರು. ಇವತ್ತು ನಮ್ಮ ಸಾರಿಗೆ ನೌಕರರ ಕೂಟ ರಿಜಿಸ್ಟರ್ ಆಗಿದೆ.

ಉದ್ದೇಶ ಪೂರ್ವಕವಾಗಿ ನಮ್ಮ ಮನವಿ ಸ್ವೀಕಾರ ಮಾಡಲು ಯಾವೊಬ್ಬ ಸಚಿವರೂ ಬಂದಿಲ್ಲ. ಮುಖ್ಯಮಂತ್ರಿಗಳಿಗೆ ಇಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಅರಿವು ಇದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ಒಂದು ವಿಚಾರ ಹೇಳ್ತೀವಿ. ಮುಂದೆ ಆಗುವ ಸಮಸ್ಯೆಗಳಿಗೆ.. ತೊಂದರೆಗಳಿಗೆ ಮುಖ್ಯಮಂತ್ರಿ ಅವರೇ ನೇರ ಹೊಣೆ ಎಂದಿದ್ದಾರೆ. ಅಲ್ಲದೇ ಯಾವುದೇ ಸಚಿವರು ಶಾಸಕರು ಮನವಿ ಸ್ವೀಕಾರ ಮಾಡಲು ಬಾರದ ಹಿನ್ನೆಲೆ ಸಾರಿಗೆ ನೌಕರರ ಕೂಟ ಡಿಸಿಪಿ ಅನುಚೇತ್ ಅವರಿಗೆ ಮನವಿ ಪತ್ರ ನೀಡಿದೆ. ಮನವಿ ಪತ್ರ ಸಿಎಂ ಅವರಿಗೆ ಇಲಾಖೆ ಮೂಲಕ ತಲುಪಿವುದಾಗಿ ಹೇಳಿದ ಡಿಸಿಪಿ ಅನುಚೇತ್ ಹೇಳಿದ್ದಾರೆ ಎನ್ನಲಾಗಿದೆ.

ನಾವು ಯುದ್ಧ ಸಾರಬೇಕಿದೆ. 40 ವರ್ಷಗಳಿಂದ ನಿರಂತವಾಗಿ ನೌಕರರು ಕೆಲಸ ಮಾಡ್ತಿದ್ದಾರೆ. ನೌಕರರ ವಿರುದ್ಧ ಸರ್ಕಾರ ಹಗಲು ದರೋಡೆ ಮಾಡ್ತಿದೆ. ನಮ್ಮ ಯುದ್ಧ ಅಹಿಂಸಾತ್ಮಕವಾಗಿ ಇರುತ್ತೆ. ಸಾರಿಗೆ ಇಲಾಖೆ ನಿಮ್ಮ ಅಪ್ಪನ ಆಸ್ತಿ ಅಲ್ಲ. ಕರ್ನಾಟಕದ ಜನರ ಆಸ್ತಿ. ತಲೆ ತಿರುಗೋ ಹಾಗೇ ಮಾತೋಡದನ್ನ ಬಿಡಿ. ಮಿಸ್ಟರ್ ಲಕ್ಷಣ್ ಸವದಿ ಅವರೇ ಪದೇ ಪದೇ ಮಾತಾಡ್ತೀರಾ.. ಯಾರು ಅವ್ರು ಅಂತ ಪ್ರಶ್ನೆ ಮಾಡ್ತೀರಲ್ಲ. ಆವತ್ತು ಪ್ರತಿಭಟನೆ ವೇಳೆ ಸಂಜೆ ನೀವು ಸರ್ಕಾರದ ನಿಗಮದ ಅಧ್ಯಕ್ಷರು ಬಂದು ನಮಗೆ ಲವ್ ಲೆಟರ್ ಕೊಟ್ಟಿದ್ದೀರಾ (ಪತ್ರದ ಮೂಲಕ ಆಶ್ವಾಸನೆ ಕೊಟ್ಟಿದ್ದು). ಅವಾಗ ನಿಮ್ಮ ಜ್ಞಾನ ಎಲ್ಲಿತ್ತು..? ಅವಾಗ ಸರಿ ಇತ್ತಾ? ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here