ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸಾಮೂಹಿಕ ಗೀತ ಗಾಯನ

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಅಬ್ದುಲ್ ವಾಹಿದ್ ಚಾಲನೆ ನೀಡಿದರು

0
108

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸಾಮೂಹಿಕ ಗೀತ ಗಾಯನ

ಮಾನ್ವಿ : ರಾಜ್ಯ ಸರಕಾರವು ೨೦೨೧ನೇ ಸಾಲಿನ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವಂತೆ ಅದೇಶ ನೀಡಿರುವ ಪ್ರಯುಕ್ತ ಅ.೨೪ರಿಂದ ಅ೩೧ರವರೆಗೆ ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನ ಹಾಗೂ ಮಾತಾಡ್ ಮಾತಾಡ್ ಕನ್ನಡ ಘೋಷವಾಕ್ಯದಡಿ ಗೀತ ಗಾಯನ ಸೇರಿದಂತೆ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಅಬ್ದುಲ್ ವಾಹಿದ್ ತಿಳಿಸಿದರು

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಂತರ ತಹಸೀಲ್ದಾರ್ ಅಬ್ದುಲ್ ವಾಹಿದ್ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು

ರಾಜ್ಯಾದ್ಯಂತ ಏಕ ಕಾಲದಲ್ಲಿ ಹಾಡುವಂತೆ ಸರಕಾರವು ನೀಡಿದ ಆದೇಶದಂತೆ ಬೆಳಿಗ್ಗೆ ೧೧ ಗಂಟೆಗೆ ಡಾ.ಕುವೆಂಪು ರಚಿಸಿರುವ ಬಾರಿಸು ಕನ್ನಡ ಡಿಂಡಿಮವ, ಡಾ.ಕೆ.ಎಸ್.ನಿಸಾರ್ ಅಹಮದ್ ರವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖರವರು ರಚಿಸಿರುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ೩ ಗೀತೆಗಳನ್ನು ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು , ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಸಾಮೂಹಿಕವಾಗಿ ಹಾಡಿದರು

ಕಾರ್ಯಕ್ರಮದಲ್ಲಿ ತಾ.ಪಂ.ಇ.ಒ.ಸ್ಟೇಲಾವರ್ಗೀಸ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಗುಡಿಹಾಳ್,ಪುರಸಭೆ ಮುಖ್ಯಾಧಿಕಾರಿ ಜಗದೀಶ್ ಭಂಢಾರಿ ,ಪುರಸಭೆ ಉಪಾಧ್ಯಕ್ಷ ಶುಕಮುನಿ, ಪುರಸಭೆ ಸದಸ್ಯರು, ಸಿ.ಡಿ.ಪಿ.ಒ.ಸುಭದ್ರಮ್ಮ, ಕೃಷಿ ಅಧಿಕಾರಿ ಹುಸೇನ್‌ಸಾಬ್, ಕರವೇ ಶಿವÀರಾಮೇಗೌಡ ಬಣ ತಾ.ಅಧ್ಯಕ್ಷ ಆನಂದಸ್ವಾಮಿ,ಕರವೇ ನಾರಯಣಗೌಡ ಬಣ ತಾ.ಅಧ್ಯಕ್ಷ ಬಸವನಗೌಡ, ಕರವೇ ಪ್ರವೀಣ ಶೆಟ್ಟಿ ಬಣ ತಾ.ಅಧ್ಯಕ್ಷ ಸುಬಾನ್‌ಬೇಗ್, ನರಸಪ್ಪ ಜೂಕುರು,ಹನುಮಂತ ಸಿಕಾಲ್,ಹುಸೇನಪ್ಪ ಸೇರಿದಂತೆ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here