ನೈತಿಕ ಪೊಲೀಸ್ ಗಿರಿ ಸಮರ್ಥನೆ ಹಾಗೂ ಬೆಲೆ ಏರಿಕೆ ಗಾಯದ ಮೇಲೆ ಬರೆ; ಫರೀದ್ ಉಮರಿ ಜಿಲ್ಲಾ ಅಧ್ಯಕ್ಷರು ವೆಲ್ಫೇರ್ ಪಾರ್ಟಿ ರಾಯಚೂರು

ಪೆಟ್ರೋಲ್ ಡೀಸೆಲ್ ಜೊತೆ,ಹಸಿವಿನ ಸೂಚ್ಯಂಕವೂ ನೂರರ ಗಡಿ ದಾಟಿದೆ ಇಂತಹ ಅಭಿವೃಧ್ಧಿ ಯಾರು ಬಯಸಿದ್ದರು.

0
193

ನೈತಿಕ ಪೊಲೀಸ್‌ಗಿರಿಗೆ ಸಿಎಂ ಬೊಮ್ಮಾಯಿ ಸಮರ್ಥನೆ ಅಪಾಯಕಾರಿ ಹಾಗೂ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ : ಫರೀದ್ ಉಮರಿ ಜಿಲ್ಲಾ ಅಧ್ಯಕ್ಷರು ವೆಲ್ಫೇರ್ ಪಾರ್ಟಿ ರಾಯಚೂರು

ಜನರು ಬಿಜೆಪಿ ಸಿದ್ಧಾಂತಗಳಂತೆ ಬದುಕಬೇಕು ಎಂದು ರಾಜ್ಯ ಸರ್ಕಾರ ಬಯಸಿದಂತಿದೆ. ನೈತಿಕ ಪೊಲೀಸ್‌ಗಿರಿ ನಡೆಸಲು ಸಂವಿಧಾನದಲ್ಲಿ ಅವಕಾಶ ಇದೆಯೇ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪ್ರಶ್ನಿಸುತ್ತೆ. ನೈತಿಕ ಪೊಲೀಸಗಿರಿ ಹೆಸರಲ್ಲಿ ಅಮಾಯಕ ಯುವಕ-ಯುವತಿಯರನ್ನು ಕಿರುಕುಳ ಕೊಡುವ ಕೆಲಸ ನಡೆಯುತ್ತಿದ್ದರೆ, ಅದನ್ನು ತಡೆಯುವ ಬದಲು ಇನ್ನಷ್ಟು ಪ್ರೋತ್ಸಾಹ ನೀಡುವ ಹಾಗೆ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವುದು ವಿಪರ್ಯಾಸ.

ನೈತಿಕ ಪೊಲೀಸ್‌ಗಿರಿಗೆ ಸಿಎಂ ಬೊಮ್ಮಾಯಿ ಸಮರ್ಥನೆ ಅಪಾಯಕಾರಿ ಹಾಗೂ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ; ಫರೀದ್ ಉಮರಿ

ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಗೌರವಯುತ ಸ್ಥಾನದಲ್ಲಿರುವ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎನ್ನುವ ಮೂಲಕ ನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ದ್ವೇಷ ಹರಡುವ ಕೆಲಸವನ್ನು ಅವರು ಸಮರ್ಥಿಸಿಕೊಳ್ಳಬಾರದು ನಮ್ಮ ಒತ್ತಾಯ.

ಬೊಮ್ಮಾಯಿ ಅವರು ಕೇವಲ ಸಂಘ ಪರಿವಾರದ ಮುಖ್ಯಮಂತ್ರಿ ಎಂಬಂತೆ ಹೇಳಿಕೆ ನೀಡಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಮತೀಯ ಗೂಂಡಾಗಿರಿ ಹೆಚ್ಚುವ ಅಪಾಯವಿದೆ.

ಪೆಟ್ರೋಲ್ ಡೀಸೆಲ್ ಜೊತೆ,ಹಸಿವಿನ ಸೂಚ್ಯಂಕವೂ ನೂರರ ಗಡಿ ದಾಟಿದೆ ಇಂತಹ ಅಭಿವೃಧ್ಧಿ ಯಾರು ಬಯಸಿದ್ದರು.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕನಿಷ್ಟ ಮಟ್ಟದಲ್ಲಿ ಇದ್ದಾಗಲೂ ಅವೈಜ್ಞಾನಿಕವಾಗಿ ಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್ ದರಗಳನ್ನು ಏರಿಕೆ ಮಾಡುತ್ತಿರುವುದು ದೇಶದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಡೀಸೆಲ್ ಬೆಲೆಯು 100 ರೂಪಾಯಿಗಳ ಗಡಿ ದಾಟಿದೆ. ಕಚ್ಚಾ ತೈಲದ ಬೆಲೆಯು ಅತ್ಯಂತ ಕಡಿಮೆ ಇದ್ದಾಗಲೂ ಪೆಟ್ರೋಲ್ ಡೀಸೆಲ್ ಬೆಲೆಯನ್ನು 100 ರೂಪಾಯಿಗಳ ಗಡಿ ದಾಟಿಸಿರುವ ಪ್ರಧಾನಿ ಮೋದಿಯವರ ಆಳ್ವಿಕೆಯಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹ ಮಾಡಿದ್ದಾಗ್ಯೂ, ಜನ ಸಾಮಾನ್ಯರ ಬದುಕಿಗೆ ನೆರವಾಗುವಂತಹ ಒಂದು ಯೋಜನೆಯೂ ಬಂದಿಲ್ಲ, ಬದಲಿಗೆ ತೈಲಗಳ ತೆರಿಗೆಯಿಂದ, ಜನರಿಗೆ ಉಚಿತವಾಗಿ ವ್ಯಾಕ್ಸಿನ್ ಕೊಡುತ್ತಿದ್ದೇವೆಂದು ಕೆಲ ಮಂತ್ರಿಗಳು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಜನರ ರಕ್ತ ಹೀರಿ ವ್ಯಾಕ್ಸಿನ್ ಕೊಡಿ ಅಂತ ಇವರಲ್ಲಿ ಯಾರು ಕೇಳಿದ್ದರು? ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವು ಪೆಟ್ರೋಲ್ ಡೀಸೆಲ್ ಬೆಲೆಯನ್ನು 200 ರೂಪಾಯಿಗೆ ಏರಿಸಿದರೂ ಅಚ್ಚರಿಯಿಲ್ಲ.ಖುದ್ದು ಬಿಜೆಪಿ ಪಾಳಯದಲ್ಲಿಯೇ ತೈಲ ಬೆಲೆ ಏರಿಕೆಯಾದ ಬಗ್ಗೆ ಅಸಮಾಧಾನದ ಹೊಗೆಯಾಡುತ್ತಿದೆ. ಆದರೆ, ಬಹಿರಂಗವಾಗಿ ಯಾರಿಗೂ ಹೇಳಿಕೊಳ್ಳುವ ಧೈರ್ಯ ಇಲ್ಲದಂತಾಗಿದೆ.

ರಾಜ್ಯವನ್ನು ಪ್ರತಿನಿಧಿಸುವ ನಮ್ಮ ಸಂಸದರುಗಳು ಒಬ್ಬರೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ತುಟಿ ಪಿಟಿಕ್ ಎನ್ನುತ್ತಿಲ್ಲ. ಮತ ನೀಡಿದ ಜನರ ಸಮಸ್ಯೆಗಳ ಬಗ್ಗೆ ಚಕಾರವೆತ್ತದ ಸಂಸದರು ರಾಜ್ಯದ ಪಾಲಿಗೆ ಕೇವಲ ಬೆದರು ಬೊಂಬೆಗಳಾಗಿದ್ದಾರೆ.
ಇವರು, ಜನರ ಸಮಸ್ಯೆಗಳ ಬಗ್ಗೆ ಗಂಭೀರತೆ ತೋರಿಸುವ ಬದಲು ಸಮಾಜದಲ್ಲಿ ವಿಷ ಬೀಜ ಬಿತ್ತುವ ಕಾಯಕದಲ್ಲಿ ನಿರತರಾಗಿದ್ದಾರೆ.
ರಾಜ್ಯದಲ್ಲಿ ತೈಲದ ಮೇಲಿನ ಸುಂಕವನ್ನು ಇಳಿಕೆ ಮಾಡಿ, ಜನರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸುವ ಎದೆಗಾರಿಕೆಯನ್ನು ರಾಜ್ಯ ಸರಕಾರ ಪ್ರದರ್ಶನ ಮಾಡದಿರುವುದು ತುಂಬಾ ಶೋಚನೀಯವಾಗಿದೆ.

ಬೆಲೆ ಏರಿಕೆ ಪರಿಣಾಮ ರಾಜ್ಯ ಮತ್ತು ದೇಶದಲ್ಲಿ ಅರಾಜಕತೆ ಉಂಟಾಗಿದೆ. ಭಾರತವಿಂದು ಹಸಿವಿನ ಸೂಚ್ಯಂಕದಲ್ಲಿಯೂ 101 ನೇಯ ಸ್ಥಾನದಲ್ಲಿದೆಯೆಂದು ಜಾಗತಿಕ ಮಟ್ಟದ ಅಧ್ಯಯನದಿಂದ ಸಾಬೀತಾಗಿದೆ. “ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ”, ಇವರು ದೇಶದ ಜನರ ಸಮಸ್ಯೆಗಳತ್ತ ಗಮನ ಹರಿಸದೇ ಬಂಡವಾಳ ಶಾಹಿಗಳಿಗೆ ಮಣೆ ಹಾಕುವ ಕ್ರಮ ಅತ್ಯಂತ ಖಂಡನಾರ್ಹವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೋಮುಸೌಹಾರ್ದ ಬೆಳೆಸುವ ಬದಲಾಗಿ ಕೋಮುವಾದವನ್ನು ಬೆಳೆಸುವ ಪ್ರವೃತ್ತಿ ಮುಖ್ಯಮಂತ್ರಿ ಅವರದಾಗಿದೆ ಇದು ಉತ್ತಮ ಬೆಳವಣಿಗೆ ಅಲ್ಲ ಇದು ರಾಜ್ಯದ ಜನರ ಜೊತೆಗೆ ಚೆಲ್ಲಾಟ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ನಂಬಿದೆ ಕಾರಣ ಮುಖ್ಯಮಂತ್ರಿಗಳು ಕೂಡಲೇ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಬೇಕು ಮುಖ್ಯಮಂತ್ರಿಗಳು ಸಂವಿಧಾನಾತ್ಮಕವಾಗಿ ಪ್ರಮಾಣವಚನ ಸ್ವೀಕರಿಸಿದ ವಿರುದ್ಧ ನೀಡಿರುವ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಆಗ್ರಹಿಸುತ್ತದೆ.

 

LEAVE A REPLY

Please enter your comment!
Please enter your name here