ಡಾ! ಭಾನುಪ್ರಕಾಶ್ ಹಾಗೂ ಕ್ಯೂರ್ ಕ್ಲಿನಿಕ್ ವಿರುದ್ಧ ದೂರು ದಾಖಲಿಸಲಾಗುವುದು; ಅಪ್ಪಣ್ಣ ಮೇಟಿ ಗೌಡ

ಕ್ಯೂರ್ ಕ್ಲಿನಿಕ್ ಮಾಲೀಕರಾಗಿರುವಂತಹ ಡಾ. ಭಾನುಪ್ರಕಾಶ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಜಿಲ್ಲೆಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವಂತಹ ಆಸ್ಪತ್ರೆಗಳು,ರಕ್ತ ಪರೀಕ್ಷೆ ಕೇಂದ್ರ ಮತ್ತು ಕ್ಷ-ಕಿರಣಗಳನ್ನೂ ನಿರ್ಮಾಣ ಮಾಡಿರುವಂತಹ ಮಾಲೀಕರ ವಿರುದ್ಧ ಪ್ರಕರಣವನ್ನು ಸಂಬಂಧಪಟ್ಟ ಅಧಿಕಾರಿಗಳು ದಾಖಲು ಮಾಡಬೇಕು

0
114

ಡಾ! ಭಾನುಪ್ರಕಾಶ್ ಹಾಗೂ ಕ್ಯೂರ್ ಕ್ಲಿನಿಕ್ ವಿರುದ್ಧ ದೂರು ದಾಖಲಿಸಲಾಗುವುದು; ಅಪ್ಪಣ್ಣ ಮೇಟಿ ಗೌಡ.

ಕ್ಯೂರ್ ಕ್ಲಿನಿಕ್ ನಲ್ಲಿ ಅನುಮಾನಾಸ್ಪದವಾಗಿ ಒಂದು ಮುದ್ದು ಕಂದಮ್ಮ ಶಿವರಾಜ್ ಅವರ ಮಗಳು ದೀಪಾ ಸೇರಿ ಇನ್ನೂ ಎರಡು ಜನ ನವೀನ್ ಕುಮಾರ ಮಾನ್ವಿ ವಯಸ್ಸು 18 ಮತ್ತು ವಿರೇಶ್ 26 ವರ್ಷ ಮುಷ್ಠುರು ಗ್ರಾಮ ಮೃತಪಟ್ಟಿರುವುದಕ್ಕೆ ಅಲ್ಲಿನ ವೈದ್ಯಾಧಿಕಾರಿಯಾದ ಡಾ. ಭಾನುಪ್ರಕಾಶ್ ರವರ ಬೇಜವಾಬ್ದಾರಿತನವೇ ಕಾರಣ ಅವರೇ ನೇರ ಹೊಣೆಗಾರರು ಅವರ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸುವ ಬಗ್ಗೆ ಮತ್ತು ಮೂರು ಜನರ ಸಾವಿಗೆ ನ್ಯಾಯ ದೊರಕಬೇಕು ಹಾಗೂ ಅವರಿಗೆ ಪರಿಹಾರ ಸಿಗಬೇಕು ಮತ್ತು ಕ್ಯೂರ್ ಕ್ಲಿನಿಕ್ ನ್ನೂ ಶಾಶ್ವತವಾಗಿ ಮುಚ್ಚಿಸಬೇಕು. ಡಾ.ಭಾನುಪ್ರಕಾಶ್ ಮತ್ತೆ ಎಲ್ಲೂ ಕೂಡ ವೈದ್ಯ ವೃತ್ತಿ ಮಾಡಬಾರದೆನ್ನುವ ಆದೇಶ ಸಂಬಂಧ ಅಧಿಕಾರಿಗಳು ಹೊರಡಿಸಬೇಕು ಅವರ ವಿರುದ್ಧ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರನ್ನು ನೀಡುತ್ತಿದ್ದೇನೆ.

ನಮ್ಮ ರಾಯಚೂರು ಜಿಲ್ಲೆಯಲ್ಲಿ ನಿಮಗೆಲ್ಲ ತಿಳಿದಿರುವಂತೆ ಡೆಂಗ್ಯೂ ಪ್ರಕರಣಗಳು ಹಲವಾರು ತಿಂಗಳುಗಳಿಂದ ಕಾಣಿಸಿಕೊಳ್ಳುತ್ತಿದೆ. ಇದನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದೂ ಒಂದು ಕಡೆಯಾದರೆ, ಪ್ರಾರಂಭದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಿಗೆ ಕಂಡುಬಂದಾಗ ನಾನು ರಕ್ತ ಪರೀಕ್ಷೆಗೆ ಈ ಹಿಂದೆ ಒಳಪಟ್ಟು ಶಿವ ಸಾಯಿ ಲ್ಯಾಬ್ ನಲ್ಲಿ ಏರು-ಪೇರು ವರದಿಕೊಟ್ಟು ಅನಧಿಕೃತವಾಗಿ ನಿರ್ಮಾಣಗೊಂಡಿರುವಂತಹದ್ದು ಅಧಿಕಾರಿಗಳಿಗೆ ದೂರು ನೀಡಿದ ಮೇಲೆ ಮುಚ್ಚಿಸಿರುತ್ತಾರೆ ಇಂತಹ ರಕ್ತ ಪರೀಕ್ಷೆ ಕೇಂದ್ರಗಳು ಕ್ಷ-ಕಿರಣ ಹಾಗೂ ಆಸ್ಪತ್ರೆಗಳ ವಿರುದ್ಧ ಈಗಾಗಲೇ ಪ್ರಕರಣವನ್ನು ದಾಖಲು ಮಾಡಿ ಅಂತಹವುಗಳ ವಿರುದ್ಧ ಅಧಿಕಾರಿಗಳು ನೋಟಿಸ್ ಕೂಡ ಜಾರಿ ಮಾಡಿರುತ್ತಾರೆ.

ದೂರು ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾನ್ಯ ಟಿ. ಹೆಚ್. ಓ ಅವರ ಮೌಖಿಕ ಆದೇಶದಂತೆ ದಿನಾಂಕ:- 27/09/2021 ರಂದು ಮಾನ್ಯ ತಾಲೂಕಿನ ಕುಟುಂಬ ಮತ್ತು ಕಲ್ಯಾಣ ಅಧಿಕಾರಿಗಳು ಇವರಿಗೆ ನೋಟಿಸು ನೀಡಿದ್ದರೂ ಕೂಡ ಇವರು ಯಾವುದೇ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಿರುವುದಿಲ್ಲ ಕ್ಯೂರ್ ಕ್ಲಿನಿಕ್ ಅನಧಿಕೃತವಾಗಿ ನಿರ್ಮಾಣವಾಗಿದೆ ಅದಕ್ಕೆ ಸೂಕ್ತ ದಾಖಲೆ ನೀಡಿರುವುದಿಲ್ಲ ಹಾಗಾಗಿ ಕ್ಯೂರ್ ಕ್ಲಿನಿಕ್ ಮಾಲೀಕರಾಗಿರುವಂತಹ ಡಾ. ಭಾನುಪ್ರಕಾಶ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಜಿಲ್ಲೆಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವಂತಹ ಆಸ್ಪತ್ರೆಗಳು,ರಕ್ತ ಪರೀಕ್ಷೆ ಕೇಂದ್ರ ಮತ್ತು ಕ್ಷ-ಕಿರಣಗಳನ್ನೂ ನಿರ್ಮಾಣ ಮಾಡಿರುವಂತಹ ಮಾಲೀಕರ ವಿರುದ್ಧ ಪ್ರಕರಣವನ್ನು ಸಂಬಂಧಪಟ್ಟ ಅಧಿಕಾರಿಗಳು ದಾಖಲು ಮಾಡಬೇಕು ಈಗ ನಡೆದಿರುವಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು ಎನ್ನುವ ಕಳಕಳಿಯಿಂದ ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗೂ ಇವರ ವಿರುದ್ಧ ಪೋಲಿಸ್ ಸ್ಟೇಷನ್ ನಲ್ಲಿ ಅಧಿಕಾರಿಗಳು ಪ್ರಕರಣ ದಾಖಲು ಮಾಡಬೇಕು ಅದಕ್ಕೆ ಸಂಬಂಧಪಟ್ಟಂತೆ ದೂರು ದಾಖಲೆ ಮಾಡುತ್ತೇನೆ..

ಪತ್ರಿಕಾಗೋಷ್ಠಿಯಲ್ಲಿ ಮೃತ ನವೀನ್ ಅವರ ಅಣ್ಣ ಶ್ರೀಕಾಂತ್ ಚಲ್ಮಾಲ್ ಅವರ ಚಿಕ್ಕಪ್ಪ ಈರಣ್ಣ ತಮ್ಮ ಅಳಲನ್ನು ತೋಡಿಕೊಂಡರು..

LEAVE A REPLY

Please enter your comment!
Please enter your name here