ಕೆಳಭಾಗದ ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ಮಾನವಿ ಬ್ಲಾಕ್ ಕಾಂಗ್ರೆಸ್ ನಿಂದ ಪ್ರತಿಭಟನೆ.

ಮಾನವಿ ತಾಲೂಕಿನ ಕೆಳಭಾಗದ ಕಾಲುವೆ ಗಳಿಗೆ ಹಿಂದಿನ ಎರಡು ತಿಂಗಳಿನಿಂದ ನೀರು ತಲುಪಿರುವುದಿಲ್ಲ ಈ ಸಂಬಂಧ ನೀರಾವರಿ ಅಧಿಕಾರಿಗಳಿಗೆ ಮತ್ತು ತಾಲೂಕಿನ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಆದಕಾರಣ ಬ್ಲಾಕ್ ಕಾಂಗ್ರೆಸ್ ಇಂದು ಕೆಳಭಾಗದ ಕಾಲುವೆ ಗಳಿಗೆ ನೀರುಹರಿಸಿ ಕೆಳಭಾಗದ ರೈತರಿಗೆ ಜೀವ ನೀಡಬೇಕೆಂದು ಒತ್ತಾಯಿಸುತ್ತೇವೆ.

0
185

ಮಾನವಿ, 6/2/2021 ಮಾನವಿ ತಾಲೂಕಿನ ಕಾಲುವೆ ಗಳಿಗೆ ನೀರು ಹರಿಸಲು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಮಾನವಿ ವತಿಯಿಂದ ನಗರದ ಬಸವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ಮಾನ್ಯ ರಾಜ್ಯ ಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡರಾದ ಶ್ರೀ ರಾಜಾ ವಸಂತ ನಾಯಕ ಮಾತನಾಡುತ್ತಾ ಮಾನವಿ ತಾಲೂಕಿನ ಕೆಳಭಾಗದ ಕಾಲುವೆ ಗಳಿಗೆ ಹಿಂದಿನ ಎರಡು ತಿಂಗಳಿನಿಂದ ನೀರು ತಲುಪಿರುವುದಿಲ್ಲ ಈ ಸಂಬಂಧ ನೀರಾವರಿ ಅಧಿಕಾರಿಗಳಿಗೆ ಮತ್ತು ತಾಲೂಕಿನ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಆದಕಾರಣ ಬ್ಲಾಕ್ ಕಾಂಗ್ರೆಸ್ ಇಂದು ಕೆಳಭಾಗದ ಕಾಲುವೆ ಗಳಿಗೆ ನೀರುಹರಿಸಿ ಕೆಳಭಾಗದ ರೈತರಿಗೆ ಜೀವ ನೀಡಬೇಕೆಂದು ಒತ್ತಾಯಿಸುತ್ತೇವೆ.

ಅದೇರೀತಿ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ಪೈಕಿ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳು ವಾಪಸ್ಸು ಪಡೆಯಬೇಕು, ಪೆಟ್ರೋಲ್ ಡೀಸೆಲ್ ಸಿಲಿಂಡರ್ ಬೆಲೆ ಏರಿಕೆ ನಿಯಂತ್ರಣದಲ್ಲಿಡಲು ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಿ ರಾಜ್ಯ ಸರಕಾರ ಕ್ಕೆ ಆದೇಶ ನೀಡಬೇಕು ಮತ್ತು ನಮ್ಮ ಕೆಳಭಾಗದ ಕಾಲುವೆ ನಂ 85,89,ಕಾಲುವೆಗಳಿಗೆ ನೀರು ಹರಿಸುವಂತೆ ಸರಕಾರಕ್ಕೆ ಆದೇಶ ನೀಡಬೇಕೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನ ಸದಸ್ಯರು, ಪುರಸಭೆಯ ಸದಸ್ಯರು ಮತ್ತು ಇತರೇ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here