ಡೆಂಗ್ಯೂ ತಡೆಯಲಿಕ್ಕೆ 3000 ಮೀನು; ಸುಕುಮುನಿ

0
72

ಮಾನ್ವಿ:ಅ.27- ಪಟ್ಟಣದಾದ್ಯಂತ ಡೆಂಗ್ಯೂ ತಡೆಯುವಿಕೆಗಾಗಿ ಪಟ್ಟಣದಲ್ಲಿ ಇರುವಂತಹ ಹಳೆಯ ಕೆರೆ, ಬಾವಿಗಳಲ್ಲಿರುವ ನೀರಿನಲ್ಲಿ 3000 ಮೀನುಗಳು ಬಿಡಲಾಯಿತು ಎಂದು ಪುರಸಭೆ ಉಪಾಧ್ಯಕ್ಷ ಕೆ.ಸುಕುಮುನಿ ಹೇಳಿದರು.

ಪಟ್ಟಣದ ಕೋನಾಪುರ ಪೇಟೆಯ ವಕ್ರಣಿ ಕೆರೆ ಬಾವಿಯಲ್ಲಿ ಮೀನುಗಳನ್ನು ಬಿಟ್ಟು ಮಾತನಾಡಿದ ಅವರು ಮಾನ್ವಿ ಪಟ್ಟಣದಲ್ಲಿ ಡೆಂಗ್ಯೂ ವಿಪರೀತ ಹರಡುತ್ತಿದೆ ಡೆಂಗ್ಯೂನಿಂದ ಹಲವಾರು ಜನರು ಸಾವಿಗೀಡಾಗಿದ್ದಾರೆ. ಡೆಂಗು ಹರಡುವುದನ್ನು ತಡೆಯುವಿಕೆಗಾಗಿ ಪಟ್ಟಣದಲ್ಲಿರುವ ಹಳೆ ಕೆರೆಗಳು ಮತ್ತು ಬಾವಿಗಳಲ್ಲಿ ಹಾಗೂ ದೊಡ್ಡ ಬಂಡೆಯ ಕೆಳಗಡೆ ಹಾಗೂ ತಗ್ಗು ಪ್ರದೇಶದಲ್ಲಿ ನಿಂತಿರುವ ನೀರಿನಲ್ಲಿ ಮೀನುಗಳನ್ನು ಬಿಟ್ಟರೆ ಸೊಳ್ಳೆ ಹುಟ್ಟುವ ಮುಂಚಿತವಾಗಿ ನೀರಿನ ಒಳಗಡೆ ಇರುವ ಲಾವವನ್ನು ಮೀನುಗಳು ತಿನ್ನುವುದರಿಂದ ಡೆಂಗು ಹರಡುವುದನ್ನು ನಿಲ್ಲಿಸಬಹುದು ಎಂಬ ಉದ್ದೇಶದಿಂದ ಮೀನುಗಳನ್ನು ಬಿಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರ ಪತಿ ಜಿಲಾನಿ ಕುರುಷಿ, ಪುರಸಭೆ ಸದಸ್ಯರಾದ ವೆಂಕಟೇಶ್ ನಾಯಕ್, ಕಾಲೇಶ್ವರ ಸ್ವಾಮಿ,ಆರೋಗ್ಯ ಸಿಬ್ಬಂದಿಯವರಾದ ರಂಗಸ್ವಾಮಿ, ದೇವಿಂದ್ರಪ್ಪ, ರಾಜಕುಮಾರ, ಯಲ್ಲಯ್ಯ ನಾಯಕ್, ರಾಮಣ್ಣ, ಹನುಮೇಶ್ ದಫೇದಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here