ಸಿಂಧನೂರು ತಾಲೂಕಿನಲ್ಲಿ 8 ಕೆರೆಗಳ ನಿರ್ಮಾಣ: ಲಕ್ಷ್ಮಿ ಕಾಂತ ರೆಡ್ಡಿ

0
157

ಸಿಂಧನೂರು:
ಸಿಂಧನೂರು ತಾಲೂಕಿನಲ್ಲಿ 8 ಹೊಸ ಕೆರೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಮಿ ಖರೀದಿಗೆ ಅನುಮೋದನೆ ಸಿಕ್ಕಿದೆ. ಉಪ್ಪಳ, ಸಾಲಗುಂದಾ, ಸಾಸಲಮರಿಕ್ಯಾಂಪ್, ಗಜಲಕ್ಷ್ಮಿ ಕ್ಯಾಂಪ್ ಸೇರಿದಂತೆ 8 ಕಡೆ ಕೆರೆ ನಿರ್ಮಾಣಕ್ಕೆ ಭೂಮಿ ಖರೀದಿ ಮಾಡಲಾಗುವುದು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿ ಕಾಂತರೆಡ್ಡಿ ತಿಳಿಸಿದರು.
ಅವರು ತಾಲೂಕಿನ ರೌಡಕುಂದಾ ಗ್ರಾಮದ ಜಿ.ಪಂ.ಸದಸ್ಯ ಬಸವರಾಜ ಹಿರೇಗೌಡರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಯಚೂರು ಜಿಲ್ಲೆಯಾದ್ಯಂತ ಡಿಸೆಂಬರ್ ತಿಂಗಳನ್ನು ಕರ ವಸೂಲಿ ತಿಂಗಳಾಗಿ ಕರ ವಸೂಲಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. 8 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. ಎಲ್ಲಾ ತಾಲೂಕುಗಳಿಗಿಂತಲೂ ಸಿಂಧನೂರು ತಾಲೂಕಿನಲ್ಲಿ ಕಳಪೆ ಸಾಧನೆ ಮಾಡಲಾಗಿದೆ. ಈಗಾಗಲೇ ಭತ್ತ ಕಟಾವ್ ಮುಗಿದಿರುವದರಿಂದ ಮತ್ತೊಮ್ಮೆ ಸಿಂಧನೂರು ತಾಲೂಕಿನಲ್ಲಿ ಮಾತ್ರ ಕರ ವಸೂಲಿ ಅಭಿಯಾನ ಆರಂಭಿಸಲಾಗುವುದು. ಇಲ್ಲಿ ಸಂಗ್ರಹವಾಗುವ ಹಣವನ್ನು ಪಂಚಾಯತ್‌ಗಳನ್ನು ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವೇತನ ನೀಡಿ, ಉಳಿದ ಹಣ ಅಭಿವೃದ್ದಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಲಕ್ಷö್ಯ ಯೋಜನೆಗೆ ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆ ಆಯ್ಕೆ ಮಾಡಿಕೊಳ್ಳಲಾಗಿದೆ. ಲಕ್ಷö್ಯ ಯೋಜನೆ ಎನ್ನುವದು ಆಸ್ಪತ್ರೆಗಳ ಹೆರಿಗೆ ಕೋಣೆಗೆ ಸಂಬAಧಿಸಿದAತೆ ಔಷಧಿ, ಲೇರ‍್ಸ್, ಸ್ವಚ್ಛತೆ ಸೇರಿದಂತೆ ಎಲ್ಲಾ ಅಗತ್ಯ ಸಾಮಗ್ರಿಗಳು ಇರುವದನ್ನು ಗುರುತಿಸಿ ಅಂಕಗಳನ್ನು ನೀಡಲಾಗುತ್ತದೆ. ಶೇ.70 ರಷ್ಟು ಅಂಕಗಳನ್ನು ಪಡೆದರೆ ಈ ಯೋಜನೆಗೆ ಆಯ್ಕೆಯಾಗಲಿದೆ. ಸಿಂಧನೂರು ಸಾರ್ವಜನಿಕ ಆಸ್ಪತ್ರೆಯು ಈಗಾಗಲೇ ಶೇ.೬೫% ಅಂಕ ಪಡೆದುಕೊಂಡಿದೆ. ಇನ್ನಷ್ಟು ಸುಧಾರಿಸಲು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಫೆಬ್ರುವರಿ ಆರಂಭದೊಳಗೆ 70 ರಷ್ಟು ಅಂಕ ಮುಟ್ಟುವ ವಿಶ್ವಾಸವಿದೆ ಎಂದರು.
ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸುಮಾರು 50 ಲಕ್ಷ ರೂ.ಗಳಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ದತೆ ಮಾಡಲಾಗಿದೆ. ಫಲಿತಾಂಶ ಬಂದ ನಂತರವೇ ನಮ್ಮ ಪ್ರಯತ್ನದ ಫಲಿತಾಂಶವಾಗಲಿದೆ. ಎಲ್ಲಾ ಇಲಾಖೆಗಳ ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ವಿವಿಧ ವಸತಿ ನಿಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 50 ಕೋಟಿ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದು, ಗ್ರಾ.ಪಂ. ಹಂತದಲ್ಲಿ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ನ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಹಿರೇಗೌಡರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here