ಮಾನ್ವಿ ವಿವಿಧ ಇಲಾಖೆಗಳ ಕೆಡಿಪಿ ಸಭೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಎಚ್ಚೆತ್ತುಕೊಳ್ಳಿ – ರಾಜಾ ವೆಂಕಟಪ್ಪ ನಾಯಕ

0
221

ಮಾನ್ವಿ:ಜ.17 ಕೆಲವೇ ದಿನಗಳಲ್ಲಿ ಬೇಸಿಗೆ ಉಂಟಾಗುತ್ತದೆ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಈಗಲೇ ಎಚ್ಚೆತ್ತುಕೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೆಳಿದರು.
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಬೇಸಿಗೆ ದಿನದಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ಈಗಲೇ ಕುಡಿಯುವ ನೀರಿನ ಆರೊ ಪ್ಲಾಂಟ್ ಗಳನ್ನು ಗಮನಿಸಿ ರಿಪೇರಿಯಲ್ಲಿ ಇರತಕ್ಕಂಥ ಆರೋ ಪ್ಲಾಂಟ್ಗಳು ಈಗಲೇ ಸರಿಪಡಿಸಿಕೊಳ್ಳಿ ಇಲ್ಲದಿದ್ದರೆ ನೀವೇ ಹೊಣೆಯಾಗುತ್ತೀರಿ ನೋಡಿ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ಪ ಅವರಿಗೆ ಎಚ್ಚರಿಸಿದರು.ಅವರು ಎಲ್ಲಾ ಆರೋ ಪ್ಲಾಂಟ್ಗಳಲಿ ಮೇಜರ್ ರಿಪೇರಿ ಇದ್ದರೆ ನಾವು ರಿಪೇರಿ ಮಾಡಿಸಲು ಆಗುವುದಿಲ್ಲ ಸಣ್ಣಪುಟ್ಟ ರಿಪೇರಿ ಇದ್ದರೆ ಮಾಡಿಸುತ್ತೇವೆ ಎಂದು ಹೇಳಿದರು.
ನಂತರ ಜಿಲ್ಲಾ ಪಂಚಾಯತ್ ಸದಸ್ಯರಾದ ಗಂಗಣ್ಣ ನಾಯಕ ಅವರು ಗಿಡಗಳನ್ನು ನೆಡುವುದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೀರಿ ಅದನ್ನು ಯಾವುದಕ್ಕೆ ಖರ್ಚು ಮಾಡಿದ್ದೀರಿ ನೀವು ನೆಟ್ಟಿರುವ ಗಿಡಗಳು ಎಲ್ಲಿದ್ದಾವೆ? ನೀವು ಸರಕಾರದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ನೆಟ್ಟಿರುವ ಗಿಡಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸುತ್ತಿಲ್ಲ ಮತ್ತು ಜಿಲ್ಲೆಯಲ್ಲಿ ಸಾಕಷ್ಟು ವೆಂಡರ್ ದಾರರು ಇದ್ದಾರೆ ಆದರೆ ನೀವು ಮಾತ್ರ ಎರಡು ಅಥವಾ ಮೂರು ವೆಂಡರ್ಗಳ ಖಾತೆಗೆ ಬಿಒಸಿ ಹಣ ಜಮಾ ಮಾಡುತ್ತೀರಿ ಇದರ ಮರ್ಮವೇನು ಎಂದು ಸಾಮಾಜಿಕ ಅರಣ್ಯ ವಲಯ ಅಧಿಕಾರಿಗೆ ಕೇಳಿದರು ಅವರು ಹಾರಿಕೆಯ ಉತ್ತರ ಕೊಟ್ಟರು.
ಕುರುಕುಂದಾ ಗ್ರಾಮದಲ್ಲಿ ಕೆರೆ ಒಡ್ಡು ಒಡೆದು ಹೋಗಿದೆ ಅದನ್ನು ಆದಷ್ಟು ಬೇಗ ಸರಿಪಡಿಸಿ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಯಾದ ಶಿವಪ್ಪ ಅವರಿಗೆ ಸೂಚಿಸಿದರು.
ನಂತರ ತಾಲೂಕು ಪಂಚಾಯಿತಿ ಪ್ರಭಾರಿ ಅಧ್ಯಕ್ಷ ರಾದ ಚನ್ನಬಸವಣ್ಣನವರು ಕಪ್ಪಗಲ್ ಗ್ರಾಮದಲ್ಲಿ ಕೆಂಪು ಮಂಗಗಳ ಹಾವಳಿ ಬಹಳಷ್ಟಿದೆ ಅಲ್ಲಿರುವ ಅಂಗನವಾಡಿ ಮಕ್ಕಳಿಗೆ ಮತ್ತು ಶಾಲೆಯ ಮಕ್ಕಳಿಗೆ ಬಹಳ ತೊಂದರೆ ಆಗುತ್ತಿದೆ ಇದಕ್ಕೆ ಪರಿಹಾರ ಏನು ಎಂದು ಅರಣ್ಯಾಧಿಕಾರಿಗಳನ್ನು ಕೇಳಿದರು ಅವರು ಮಂಗ ಹಿಡಿಯುವವರನ್ನು ಕರೆದುಕೊಂಡು ಬಂದು ಅವುಗಳನ್ನು ಹಿಡಿದುಕೊಂಡು ವನದಲ್ಲಿ ಬಿಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾದ ಉಮೇಶ್, ಜಿಲ್ಲಾ ಪಂಚಾಯತಿ ಸದಸ್ಯರಾದ ಕಿರಿಲಿಂಗಪ್ಪ ಕವಿತಾಳ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here