ಡ್ರೈವಿಂಗ್ ತರಬೇತಿ ಪಡೆದು ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದಾಗ ಡ್ರೈವಿಂಗ್ ಪರೀಕ್ಷೆ ಅಗತ್ಯವಿಲ್ಲ.

ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಗಳಲ್ಲಿ ಚಾಲಕ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ವ್ಯಕ್ತಿ ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸುವಾಗ ಚಾಲನಾ ಪರೀಕ್ಷೆಯ ಅಗತ್ಯತೆಯಿಂದ ವಿನಾಯತಿ ನೀಡಲಾಗುತ್ತದೆ.

0
226

ಹೊಸದಿಲ್ಲಿ, ಫೆ. 7 : ಚಾಲಕ ತರಬೇತಿ ಕೇಂದ್ರಗಳ ಮಾನ್ಯತೆಗಾಗಿ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಶುಕ್ರವಾರ ಕರಡು ಅಧಿಸೂಚನೆ ಬಿಡುಗಡೆ ಮಾಡಿದೆ.

ಇದರ ಪ್ರಕಾರ ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಗಳಲ್ಲಿ ಚಾಲಕ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ವ್ಯಕ್ತಿ ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸುವಾಗ ಚಾಲನಾ ಪರೀಕ್ಷೆಯ ಅಗತ್ಯತೆಯಿಂದ ವಿನಾಯತಿ ನೀಡಲಾಗುತ್ತದೆ.

ಈ ಕ್ರಮ ಸಾರಿಗೆ ಉದ್ಯಮ ವಿಶೇಷ ತರಬೇತಿ ಹೊಂದಿದ ಚಾಲಕರನ್ನು ಹೊಂದಲು ನೆರವು ನೀಡುತ್ತದೆ. ಅವರ ದಕ್ಷತೆಯನ್ನು ಸುಧಾರಿಸುತ್ತದೆ ಹಾಗೂ ಅಪಘಾತಗಳನ್ನು ಕಡಿಮೆ ಮಾಡುತ್ತದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿ ಹೇಳಿದೆ. ನಾಗರಿಕರಿಗೆ ಗುಣಮಟ್ಟದ ಚಾಲಕ ತರಬೇತಿ ನೀಡುವ ಸಲುವಾಗಿ ಸಚಿವಾಲಯ ಇಂತಹ ಚಾಲಕ ತರಬೇತಿ ಕೇಂದ್ರಗಳು ಅನುಸರಿಸಬೇಕಾದ ನಿಯಮಗಳನ್ನು ಪ್ರಸ್ತಾಪಿಸಿದೆ.

2021 ಜನವರಿ 29ರ ದಿನಾಂಕದ ಕರಡು ಅಧಿಸೂಚನೆಯನ್ನು ಸಾರ್ವಜನಿಕರ ಅವಗಾಹನೆಗಾಗಿ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಸಾರ್ವಜನಿಕರ ಅವಗಾಹನೆಯ ಬಳಿಕ ಔಪಚಾರಿಕವಾಗಿ ಜಾರಿಗೊಳಿಸಲಾಗುವುದು ಎಂದು ಅಧಿಕಾರಿಗಳ ಪತ್ರಿಕಾ ಹೇಳಿಕೆ ತಿಳಿಸಿದ ಎಂದು ಅದು ವರದಿ ಮಾಡಿದೆ.

LEAVE A REPLY

Please enter your comment!
Please enter your name here