ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

0
47

ಮಾನ್ವಿ: ತುಂಗಭದ್ರ ಎಡದಂಡೆ ನಾಲೆಯ ಮುಖ್ಯ ಕಾಲುವೆಯ ೧೦೪ರ ಮೈಲ್‌ನಲ್ಲಿ ನಿಗಧಿತ ಗೇಜ್ ಕಾಯ್ದುಕೊಳ್ಳಬೇಕು ಹಾಗು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಭತ್ತ, ತೊಗರಿ, ಕಡಲೆ ಮತ್ತು ಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವAತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾ ಸಮಿತಿ ವತಿಯಿಂದ ಸೋಮುವಾರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಯಿತು.
ತುಂಗಭದ್ರ ಎಡದಂಡೆ ನಾಲೆಯ ಸಿರವಾರ ವಿಭಾಗ ಮತ್ತು ರಾಯಚೂರು, ಯರಮರಸ್ ವಿಭಾಗಕ್ಕೆ ಕಾಲುವೆ ನೀರಿನ ವ್ಯತ್ಯಯ ಉಂಟಾಗಿದ್ದು ಕೆಳ ಭಾಗದ ರೈತರ ಎರಡನೇ ಬೆಳೆಗೆ ನೀರು ಬಾರದೇ ರೈತರು ಕಂಗಾಲರಾಗಿದ್ದಾರೆ. ಕಳೆದ ಐಸಿಸಿ ಸಭೆಯಲ್ಲಿ ನಿರ್ಣಯ ಕೈಗೂಂಡತೆ ಕೆಳಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂದು ಅರೋಪಿಸಿದರು.

ಫಸಲ್ ಭೀಮಾ ಯೋಜನೆಯಲ್ಲಿ ರೈತರು ವಿವಿಧ ಬೆಳೆಗಳಿಗೆ ಪ್ರಿಮಿಯಂ ಹಣ ತೋಬಿದ್ದಾರೆ ಜಿಲ್ಲೆಯನ್ನು ಬರಗಾಲ ಎಂದು ಘೋಷಣೆ ಮಾಡಲಾಗಿದೆ ಅದರೆ ಕೆಲ ರೈತರಿಗೆ ಪರಿಹಾರ ಹಣ ಬಂದಿಲ್ಲ. ಕೂಡಲೇ ಸರಕಾರ ರೈತರಿಗೆ ಪರಿಹಾರ ಕೂಡಲೇ ನೀಡಬೇಕು. ಬರಗಾಲದ ಬೆಳೆ ನಷ್ಟ ಪರಿಹಾರ ಭತ್ತ, ತೊಗರಿ, ಕಡಲೆ ಮತ್ತು ಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವAತೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಕಾರ್ಯಕರ್ತರು ಬಸವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ ಕಛೇರಿಗೆ ತೆರಳಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಹಸೀಲ್ದಾರ್ ಕಾರ್ಯಲಯದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಗೌರವಧ್ಯಕ್ಷ ಚಾಮರಸ ಮಾ.ಪಾಟೀಲ್, ದೊಡ್ಡಬಸನಗೌಡ ಬಲ್ಲಟಗಿ, ಸೂಗಯ್ಯ ಆರ್.ಎಸ್.ಮಠ, ಯಂಕಪ್ಪ ಕಾರಬಾರಿ, ಬಸವರಾಜ ಮಾ.ಪಾ, ಜಿಲ್ಲಾ ಉಪಾಧ್ಯಕ್ಷ ವೆಂಕಟರೆಡ್ಡಿ ರಾಜಲಬಂಡಾ, ವೆಂಕಟರಾವ್, ವೀರೇಶ ಗವಿಗಟ್, ವೀರೇಶ ಕಂಬಳಿ, ಬಾಲಾಜಿ, ಮಲ್ಲಿಕಾರ್ಜುನ್ ಪೋ.ಪಾ, ನರಸಪ್ಪ ಹೊಕ್ರಾಣಿ, ಸಿದ್ದುಯ್ಯಸ್ವಾಮಿ, ಹೆಚ್.ಶಂಕ್ರಪ್ಪ ದೇವತಗಲ್ ಸೇರಿದಂತೆ ಅನೇಕರಿದ್ದರು.

LEAVE A REPLY

Please enter your comment!
Please enter your name here