ಜೆ ಎನ್ ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಲೋಯೋಲ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

0
294

ಮಾನ್ವಿ : ದೆಹಲಿಯ ಜೆ ಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಅಗ್ರಹಿಸಿ ಲೋಯಲ್ ಕಾಲೇಜಿನ ವಿದ್ಯಾರ್ಥಿಗಳು ಸೋಮುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಅಂಬೇಡ್ಕರ ಮುಖ್ಯರಸ್ತೆಯಿಂದ ತಹಸೀಲ್ದಾರ ಕಛೇರಿವರೆಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಮುಸುಕುದಾರಿ ದಾಳಿಕೋರರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ದೆಹಲಿ ಕಾನೂನು ಸುವ್ಯವಸ್ಥೆ ಹೂಣೆ ಹೊತ್ತಿರುವ ಕೇಂದ್ರ ಸರ್ಕಾರ ಈ ಘಟನೆ ತಡೆಯುವಲ್ಲಿ ವಿಫಲವಾಗಿದೆ. ಸಂವಿಧಾನಾತ್ಮಕ ವಾಕ್ ಸ್ವಾತಂತ್ರö್ಯ ಹಕ್ಕುಗಳನ್ನು ರಕ್ಷಣೆ ಇಲ್ಲದಂತಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಭಾರತ ದೇಶ ಸಂವಿದಾನಿಕವಾಗಿ ಎಲ್ಲಾ ವರ್ಗ ಒಂದೇ ಎಂಬ ಮನೋಭಾವ ಕೂಡಿದೆ ಅದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‌ಅರ್‌ಸಿ, ಎನ್‌ಪಿಅರ್, ನಿಯಮಗಳು ಸಂವಿಧಾನ ಅಶಯದಂತೆ ವಿರೋಧ ನಿಯಮವಾಗಿದೆ. ದೇಶದಲ್ಲಿ ಅಶಾಂತಿ, ಕೋಮು ಗಲಭೆ ಸೃಷ್ಠಿಸುವಂತ ಕಾಯ್ದೆಗಳು ಕೇಂದ್ರ ಸರ್ಕಾರ ಜಾರಿ ಮಾಡಿರುವುದು ಖಂಡನೀಯ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಕುರಿತು ಸೂಕ್ತ ತನಿಖೆ ನಡೆಸಬೇಕು, ವಿದ್ಯಾರ್ಥಿಗಳ ಸೂಕ್ತ ಚಿಕಿತ್ಸೆ ಹಾಗೂ ರಕ್ಷಣೆ ನೀಡಬೇಕು, ಹಾಗೂ ಮೂಲಭೂತ ಹಕ್ಕುಗಳಿಗೆ ದಕ್ಕೆಯಾಗದಂತೆ ಕಾನೂನು ರೀತಿಯ ರಕ್ಷಣೆಯನ್ನು ನೀಡಬೇಕು, ಪ್ರತಿಯೂಬ್ಬರ ವಾಕ್ ಸ್ವಾತಂತ್ರö್ಯ ಹಕ್ಕುಗಳನ್ನು ರಕ್ಷಿಸಬೇಕು, ಭಾರತ ಸಂವಿದಾನಕ್ಕೆ ಯಾವುದೇ ರೀತಿಯ ದಕ್ಕೆಯಾಗದಂತೆ ರಕ್ಷಿಸಬೇಕು ಎಂದು ತಹಸೀಲ್ದಾರ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂಧರ್ಭದಲ್ಲಿ ಲೋಯಲ್ ಶಿಕ್ಷಣ ಸಂಸ್ಥೆ ಪ್ರಚಾರ್ಯ ಫಾ.ರೊಯಿಸ್ಟನ್ ಮಾಡ್ತಾ, ಹಾಗೂ ಫದಾರ್ ಹೆರಾಲ್ಡ್ ಡಿಸೋಜಾ, ಫಾಧರ್ ಪ್ರವೀಣ್ ಹೃದಯರಾಜ್, ಫಾಧರ್ ಹ್ಯಾರಿ, ಫಾದರ್ ಅರುಣ ಲುವಿಸ್, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here