ಜಿಲ್ಲಾ ಮಟ್ಟದ ಕಲಿಕಾ ಹಬ್ಬಕ್ಕೆ ಚಾಲನೆ

0
261

ಜಿಲ್ಲಾ ಮಟ್ಟದ ಕಲಿಕಾ ಹಬ್ಬಕ್ಕೆ ಚಾಲನೆ

ಮಾನ್ವಿ: ತಾಲೂಕಿನ ಪೋತ್ನಾಳ್ ಗ್ರಾಮದ ಸರಕಾರಿ ಫ್ರೌಡಶಾಲೆಯ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಲಿಕಾ ಹಬ್ಬವನ್ನು ಜಿಲ್ಲಾ ಉಪನಿರ್ದೆಶಕರ ಇಲಾಖೆಯ ಡಿ.ವೈ.ಪಿ.ಸಿ ಅಧಿಕಾರಿ ಇಂದಿರಾ ದೀಪಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ಶಿಕ್ಷಣವನ್ನು ನಲಿಯುತ್ತ ಕಲಿಯಬೇಕು, ಕಲಿಕೆಯು ಆಸಕ್ತಿದಾಯಕವಾಗಿರಬೇಕು. ಮಕ್ಕಳಲ್ಲಿ ಸೂಪ್ತವಾಗಿರುವ ಪ್ರತಿಭೆ ,ಕೌಶಲ್ಯವನ್ನು ಹೊರತರುವಂತಿರಬೇಕು.ಹಾಗೂ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತವಾದ ಅವಕಾಶ ಹಾಗೂ ವೇದಿಕೆಯ ಸೃಷ್ಟಿಯಾಗಬೇಕು ಎನ್ನುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ಮಕ್ಕಳನ್ನು ಶಿಕ್ಷಣದ ಕಡೆ ಆಕರ್ಷಿಸುವ ಉದ್ದೇಶದಿಂದ ವಲಯ ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯಮಟ್ಟದವರೆಗೂ ಕಲಿಕಾ ಹಬ್ಬವನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆ ರಾಜ್ಯ ಮಟ್ಟದಲ್ಲಿ ಗುರುತಿಸುವುದಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ ೩ದಿನಗಳ ಕಾಲ ನಡೆಯುವ ಕಲಿಕಾ ಹಬ್ಬದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ೩೦೦ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಿ ಹಳ್ಳಿಯ ಸೋಗಡಿನ ವಾತಾವರಣದಲ್ಲಿ ಗ್ರಾಮದ ಮನೆಗಳಲ್ಲಿ ಅತಿಥಿಗಳಾಗಿ ಉಳಿದು ಕೊಂಡು ವಿವಿಧ ವಿಷಯಗಳ ಪರಿಣಿತರಿಂದ ಸಂತಸದಾಯಕ ವಾತಾವರಣದಲ್ಲಿ ಕಲಿಕೆ,ಸಾಹಸಪ್ರದರ್ಶನ,ಅಗ್ನಿಆನಾಹುತಗಳ ಬಗ್ಗೆ ಜಾಗ್ರತೆ,ಸರಿಸೃಪಗಳ ಬಗ್ಗೆ;ಪಕ್ಷಿಗಳ ಬಗ್ಗೆ ಮಾಹಿತಿ,ಕರಕುಶಲ ವಸ್ತುಗಳ ತಯಾರಿಕೆ,ಸಂಜೆ ವೇಳೆ ಬಿಡುವಿನ ಸಮಯದಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ,ತಹಸೀಲ್ದಾರ್ ಚಂದ್ರಕಾAತ್ ಎಲ್.ಡಿ,ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ.ಡಿ.ಬಿ.ಆರ್.ಸಿ.ಕುಬೇರಪ್ಪ,ಅಕ್ಷರದಾಸೋಹ ಇಲಾಖೆಯ ಅಧಿಕಾರಿ ಸುರೇಶನಾಯಕ, ಕಲಿಕಾ ಹಬ್ಬದ ಜಿಲ್ಲಾ ನೋಡಲ್ ಅಧಿಕಾರಿ ಸತೀಷ ಕುಮಾರ,ಪಕ್ಷಿ ಪ್ರೇಮಿ ಸಲ್ಲಾವುದ್ದೇನ್, ಶಾಲೆಯ ಭೂದಾನಿ ನವೀನ್ ಗೌಡ, ಕೃಷ್ಣ, ಸರಕಾರಿ ನೌಕರರ ಸಂಘದ ತಾ.ಅಧ್ಯಕ್ಷ ಶ್ರೀ ಶೈಲಗೌಡ,ಕ.ರಾ.ಪ್ರಾ.ಶಾ.ಶಿ.ಸಂಘದ ತಾ.ಅಧ್ಯಕ್ಷ ಸಂಗಮೇಶ ಮುಧೋಳ್,ಸುರೇಶಕುರ್ಡಿ,ಪೀರಸಾಬ್, ಮಲ್ಲೇಶಪ್ಪ, ಅಕ್ತರಪಾಷಾ,ಕುಮಾರಸ್ವಾಮಿ,ಹೆಚ್ ಶರ್ಫುದ್ದೀನ್,ಮುಖ್ಯಗುರು ವಲಿಬಾಬು,ಚಂದ್ರಶೇಖರ ಚಂಡೂರು,ಮುಕಪ್ಪ ಕಟ್ಟಿಮನಿ,ಸೇರಿದಂತೆ ಇನ್ನಿತರರು ಇದ್ದರು.

ಶಾಲೆಯ ಆವರಣದಲ್ಲಿ ಸಂಪನ್ಮೂಲ ಶಿಕ್ಷಕರು ತಯಾರಿಸಿದ ಎತ್ತಿನ ಬಂಡಿ, ಬಸ್,ಪತ್ತರಗೀತಿ,ವಿಮಾನ, ಕನ್ನಡದ ತೇರು ಪ್ರಮುಖ ಆಕರ್ಷಣೆಯಾಗಿತ್ತು.

ಗ್ರಾಮದ ಹುಚ್ಚಬುಡೇಶ್ವರಸ್ವಾಮಿ ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಶಾಲಾ ಮಕ್ಕಳು ವಿವಿಧ ಕಲಿಕಾ ಸಾಮಾಗ್ರಿಗಳ ಪ್ರದರ್ಶನ,ಹಾಗೂ ವಿವಿಧ ಜನಪದ ವೇಷ ಭೂಷಣಗಳನ್ನು ತೋಟ್ಟು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಂಗವಾಗಿ ಜಾಥ ನಡೆಸಿದರು.

೨೫-ಮಾನ್ವಿ-೧:

ಮಾನ್ವಿ: ತಾಲೂಕಿನ ಪೋತ್ನಾಳ್ ಗ್ರಾಮದ ಸರಕಾರಿ ಫ್ರೌಡಶಾಲೆಯ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಲಿಕಾ ಹಬ್ಬವನ್ನು ಶಿಕ್ಷಣ ಇಲಾಖೆಯ ಡಿ.ವೈ.ಪಿ.ಸಿ ಅಧಿಕಾರಿ ಇಂದಿರಾ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here