ಶ್ರೀ ವೀರಭದ್ರೇಶ್ವರ ಹಾಗೂ ಪಾವಡಿ ಬಸವೇಶ್ವರ ರಥೋತ್ಸವ

ಮಾನ್ವಿ:ಪಟ್ಟಣದ ಶ್ರೀ ವೀರಭದ್ರೇಶ್ವರ ಹಾಗೂ ಪಾವಡಿ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ನಡೆದ ೧೮ನೇ ವರ್ಷದ ರಥೋತ್ಸವ ಅಂಗವಾಗಿ ಅಗ್ನಿ ಕುಂಡದಲ್ಲಿ ನಡೆದು ಹರಕೆ ತಿರಿಸಿದ ಭಕ್ತರು.

0
76

ಶ್ರೀ ವೀರಭದ್ರೇಶ್ವರ ಹಾಗೂ ಪಾವಡಿ ಬಸವೇಶ್ವರ ರಥೋತ್ಸವ

 ಮಾನವಿ ಪಟ್ಟಣದ ಶ್ರೀ ವೀರಭದ್ರೇಶ್ವರ ಹಾಗೂ ಪಾವಡಿ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ನಡೆದ ೧೮ನೇ ವರ್ಷದ ರಥೋತ್ಸವ ಹಾಗೂ ಲಕ್ಷ ದೀಪೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಬೆಳಿಗ್ಗೆ ಪಟ್ಟಣದ ಹಿರೇಭಾವಿಯಲ್ಲಿ ಗಂಗೇ ಪೂಜೆ ನೆರವೇರಿಸಿ ನೂರಾರು ಮಹಿಳೆಯರು ಕುಂಭ,ಕಳಸ ಹಾಗೂ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಇಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಳ್ಳಾರಿಯ ವೀರಗಾಸೆ ಕಲಾರತ್ನ ಪ್ರಶಸ್ತಿ ವಿಜೇತ ಕಲಾವಿದ ಎಂ.ನಾಗರಾಜಸ್ವಾಮಿ ಮತ್ತು ಸಂಗಡಿಗರು ಸಮ್ಮೇಳ,ಸೇರಿದಂತೆ ಮಂಗಳವಾದ್ಯಗಳೊAದಿಗೆ ಶ್ರೀ ವೀರಭದ್ರಸ್ವಾಮಿಯ ಒಡಪುಗಳನ್ನು ಹೇಳುತ್ತ ಪುರವಂತಿಕೆ ಹಾಗೂ ಕರಡಿ ಮಜಲು ಸೇವೆಯೊಂದಿಗೆ ದೇವಸ್ಥಾನಕ್ಕೆ ಅಗಮಿಸಿ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆಯೆ ಅಗ್ನಿ ಕುಂಡದಲ್ಲಿ ಅಗ್ನಿ ಪುಟಾರಾಧನೆ ನಡೆಸಿ ಸಿದ್ದಗೊಳ್ಳಿಸಿದ ಅಗ್ನಿ ಕುಂಡದಲ್ಲಿ ಮೊದಲು ಪುರವಂತಿಕೆ ಹೇಳುವವರು,ಕಳಸದವರು, ಶ್ರೀ ವೀರಭದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಹಿಡಿದ ದೇವಸ್ಥಾನದ ಆರ್ಚಕರು ಸಾಗಿದ ನಂತರ ಹರಕೆ ಹೊತ್ತಂತ ಸಾವಿರಾರು ಭಕ್ತರು ಶ್ರೀ ವೀರಭದ್ರ ಸ್ವಾಮಿಯನ್ನು ಮನೆದೇವರಾಗಿ ಹೊಂದಿದವರು ಸಾಲಾಗಿ ಸ್ವಾಮಿಯ ನಾಮಸ್ಮಾರಣೆ ಮಾಡುತ್ತಾ, ಅಗ್ನಿಕುಂಡದಲ್ಲಿ ನಡೆದು ದೇವರಿಗೆ ಭಕ್ತಿ ಸಮರ್ಪಣೆ ಮಾಡಿದರು.

ಶರಣಯ್ಯಸ್ವಾಮಿ ಸಂಗಾಪೂರ ಪೌರೋಹಿತ್ಯದಲ್ಲಿ ಬೆಳಗಿನ ಜಾವ ಶ್ರೀ ವೀರಭದ್ರಸ್ವಾಮಿ ಹಾಗೂ ಪಾವಡಿ ಬಸವೇಶ್ವರ ಮೂರ್ತಿಗಳಿಗೆ ರುದ್ರಾಭಿಷೇಕ,ಕುಂಭಾಭಿಷೇಕ ನೆರವೇರಿಸಲಾಯಿತು.ಶ್ರೀ ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ಮಹಾದೇವಪ್ಪಗೌಡ ಮಾಲಿಪಾಟೀಲ್, ಕಾರ್ಯದರ್ಶಿ ವೀರಭದ್ರಪ್ಪ ಬಣಗಾರ, ಅರ್ಚಕರಾದ ವೀರೇಶಸ್ವಾಮಿ,ಚಂದ್ರಶೇಖರಸ್ವಾಮಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು

 

LEAVE A REPLY

Please enter your comment!
Please enter your name here