*ರಾಷ್ಟ್ರೀಯ ನವಜಾತ ಶಿಶುವಿನ ಸಪ್ತಾಹ ಆಚರಣೆ ಕಾಂಗರೂ ಮಾದರಿಯಲ್ಲಿ ಮಕ್ಕಳಿಗೆ ಆರೋಗ್ಯ ರಕ್ಷಣೆ ನೀಡಿ ತಾಯಿಂದಿರಿಗೆ ಬಾಲಪ್ಪ ನಾಯಕ ಸಲಹೆ*

ಅಂಗನವಾಡಿ ಕೇಂದ್ರದಲ್ಲಿ ಪುಷ್ಟಿ ಆಹಾರವನ್ನು ಮಕ್ಕಳಿಗೆ ತಪ್ಪದೇ ನೀಡಬೇಕು ಹಾಗೂ. ಆರು ತಿಂಗಳ  ವರಗೆ ತಪ್ಪದೇ. ಏದೆ ಹಾಲನ್ನು ಕೊಡಬೇಕು

0
120

*ರಾಷ್ಟ್ರೀಯ ನವಜಾತ ಶಿಶುವಿನ ಸಪ್ತಾಹ ಆಚರಣೆ ಕಾಂಗರೂ ಮಾದರಿಯಲ್ಲಿ ಮಕ್ಕಳಿಗೆ ಆರೋಗ್ಯ ರಕ್ಷಣೆ ನೀಡಿ ತಾಯಿಂದಿರಿಗೆ ಬಾಲಪ್ಪ ನಾಯಕ ಸಲಹೆ*

ಮಾನವಿ :- ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ ಪೋತ್ನಾಳ ಆಯಷ್ ಚಿಕಿತ್ಸಾಲಯ ಚಿಕಲಪರವಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ನವಜಾತ ಶಿಶುವಿನ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಕುರಿತು ವೈದ್ಯಾಧಿಕಾರಿಗಳಾದ ಡಾ. ರಾಜೇಂದ್ರ ಅವರ ಮಾತನಾಡಿದರು ಚಳಿಗಾಲದಲ್ಲಿ ಮಕ್ಕಳಿಗೆ ಕಾಂಗರೂ ಮಾದರಿಯಲ್ಲಿ ರಕ್ಷಣೆಯನ್ನು ನೀಡಬೇಕು. ಇದರಿಂದ ಮಕ್ಕಳ ಆರೋಗ್ಯ ಉತ್ತಮ ಗುಣಮಟ್ಟದ್ದಾಗಿರುತ್ತದೆ ಎಂದರು.

ನಂತರ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ರಾಷ್ಟ್ರೀಯ ನವಜಾತ ಶಿಶುವಿನ ಸಪ್ತಾಹ ಕಾರ್ಯಕ್ರಮವನ್ನು ದಿನಾಂಕ 15 11 2022 ರಿಂದ 21.11.2022ರ ವರೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ನಗರದ ಪ್ರದೇಶಗಳಲ್ಲಿ ತಾಯಿಂದಿರಿಗೆ ಮಕ್ಕಳ ಆರೈಕೆ ಕುರಿತು ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತದೆ ಕಾಂಗೂರು ಮಾದರಿ ಎಂದರೆ ಕಡಿಮೆ ತೂಕ ಇರುವ ಮಕ್ಕಳನ್ನು ತಂದೆ ತಾಯಂದಿರು ಅಜ್ಜಿಯರು ಚರ್ಮ ಶಿಶುವಿನ ಚರ್ಮಕ್ಕೆ ತಾಗುವಂತೆ. ಎದೆಯ ಮೇಲೆ ಮಲಗಿಸಿಕೊಂಡು ಸುದೀರ್ಘಕಾಲ ಆರೈಕೆ ಮಾಡುವ ಸರಳ ವಿಧಾನವಾಗಿದೆ

ಕಾಂಗೂರು ಮಾದರಿಯಲ್ಲಿ ಮಕ್ಕಳ ಆರೈಕೆ ಮಾಡುವುದರಿಂದ ಮಗುವಿಗೆ ಅನೇಕ ಲಾಭಗಳಾಗುತ್ತವೆ ದೈಹಿಕ ಚಟುವಟಿಕೆ ಹೆಚ್ಚಾಗುತ್ತದೆ ಸಹಜ ಉಸಿರಾಟಕ್ಕೆ ಸಹಾಯವಾಗುತ್ತದೆ ಬೆಚ್ಚಗಿಡುವ ಯಂತ್ರದಂತೆ ಕೆಲಸ ಮಾಡುತ್ತದೆ ಸೋಂಕಿನ ಸಾಧ್ಯತೆ ಕಡಿಮೆ ಶಿಶುವಿಗೆ ಸುಖ ನಿದ್ರೆ ದೇಹದ ಬೆಳವಣಿಗೆಗೆ ಸಹಾಯವಾಗುತ್ತದೆ ಶಿಶುವಿನ ಜೀವನ ಉಳಿಸುತ್ತದೆ ಮತ್ತು. ಶಿಶುವಿನ ಬುದ್ಧಿ ಶಕ್ತಿ ಹೆಚ್ಚಿಸುತ್ತದೆ ಹಾಗೂ ಇದರಿಂದ ತಾಯಿಗೆ ಆನೇಕ ಲಾಭಗಳು ಆಗುತ್ತವೆ. ತಾಯಿ ಎದೆಯ ಹಾಲು ಹೆಚ್ಚಾಗುತ್ತದೆ ಹಾಗೂ ತಾಯಿ ಮತ್ತು ಮಗುವಿನ ಬಾಂಧ್ಯವ ಹೆಚ್ಚಿಸುತ್ತದೆ ಮಗುವಿನ ಆರೋಗ್ಯ ಬೇಗ ಸುಧಾರಿಸುತ್ತದೆ. ಹಾಗೂ ತಾಯಿಯ ನೆಮ್ಮದಿ ಹೆಚ್ಚಿಸುತ್ತದೆ ಎಂದರು ತಿಳಿಸಿದರು.

ನಂತರ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ವೃಂದಾವನ ಆವರು ಅಂಗನವಾಡಿ ಕೇಂದ್ರದಲ್ಲಿ ಪುಷ್ಟಿ ಆಹಾರವನ್ನು ಮಕ್ಕಳಿಗೆ ತಪ್ಪದೇ ನೀಡಬೇಕು ಹಾಗೂ. ಆರು ತಿಂಗಳ  ವರಗೆ ತಪ್ಪದೇ. ಏದೆ ಹಾಲನ್ನು ಕೊಡಬೇಕು ಎಂದರು.

ಈ ಸಂದರ್ಭದಲ್ಲಿ.ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಬಾಬು ಚಿನ್ನು ಸಮುದಾಯ ಆರೋಗ್ಯ ಅಧಿಕಾರಿ ಪಾಂಡು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಂಜುಳಾ ಆಶಾ ಕಾರ್ಯಕರ್ತೆ ಮಾರುತಮ್ಮ ಹಾಗೂ ಗ್ರಾಮದ ತಾಯಂದಿರು ಹಾಜರಿದ್ದರು

LEAVE A REPLY

Please enter your comment!
Please enter your name here