ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಹಾಗೂ ಸಾಹಿತ್ಯದ ಅಭಿರುಚಿ ಬೆಳೆಸುವುದು ಅಗತ್ಯ; ಬಿಇಒ ವೆಂಕಟೇಶ ಗುಡಾಳ

0
247

ಮಾನ್ವಿ:ಜ.04- ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಹಾಗೂ ಸಾಹಿತ್ಯದ ಅಭಿರುಚಿ ಬೆಳೆಸುವುದು ಅಗತ್ಯ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ ಹೇಳಿದರು.

ಪಟ್ಟಣದ ಪ್ರಗತಿ ಪಿಯು ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಹಾಗೂ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮವನ್ನು ಬಿಇಒ ವೆಂಕಟೇಶ ಗುಡಾಳ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಮಕ್ಕಳ ಸಾಹಿತ್ಯ ಪರಿಷತ್ತಿನ ಸೇವೆ ಶ್ಲಾಘನೀಯ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯುವ ಕವಿ ಬಸವರಾಜ ಹೃತ್ಸಾಕ್ಷಿ ಮಾತನಾಡಿ,‘ ರಾಷ್ಟ್ರಕವಿ ಕುವೆಂಪು ತಮ್ಮ ಸಾಹಿತ್ಯದಲ್ಲಿ ವಿಶ್ವ ಮಾನವ ಸಂದೇಶ ಸಾರಿದ ಶ್ರೇಷ್ಠಕವಿ. ಅವರು ತಮ್ಮ ಸಾಹಿತ್ಯದಲ್ಲಿ ವೈಚಾರಿಕತೆಗೆ ಹೆಚ್ಚು ಮಹತ್ವ ನೀಡಿದರು. ಅವರು ನಮ್ಮ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಪ್ರತಿಬಿಂಬಿಸಲು ಯತ್ನಿಸಿದರು .ಆದರೆ ನಮ್ಮ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಶಾಂತಿಯ ತೋಟವನ್ನು ಪ್ರತ್ಯೇಕಿಸಲು ಹೊರಟಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ವಿವಿಧ ಶಾಲೆಗಳ 25 ಮಕ್ಕಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸುವ ಮೂಲಕ ಗಮನ ಸೆಳೆದರು. ಮಕ್ಕಳ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದಿಂದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಾಹಿತ್ಯಿಕ ಕೃತಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿ ಮಹೇಂದ್ರ ಕುರ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಮಹ್ಮದ್‌ ಮುಜೀಬ್‌,ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯಕ ಜೂಕೂರು ಹಾಗೂ ಪ್ರಧಾನ ಕಾರ್ಯದರ್ಶಿ ಡಾ.ಸೈಯದ್‌ ಮುಜೀಬ್‌ ಅಹ್ಮದ್‌ ಮಾತನಾಡಿದರು.
ಬಸವರಡ್ಡಿ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಗತಿ ಪಿಯು ಕಾಲೇಜು ಪ್ರಾಂಶುಪಾಲ ಬಸವರಾಜ ಭೋಗಾವತಿ, ಶಿಕ್ಷಣ ಇಲಾಖೆಯ ಮಹೇಶ್, ಮಕ್ಕಳ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಡಾ.ಪ್ರಜ್ಞಾ ಹರಿಪ್ರಸಾದ ಹಾಗೂ ಯಲ್ಲಪ್ಪ ನಿಲೋಗಲ್‌, ಪಕ್ಷಿಪ್ರೇಮಿ ಸಲಾವುದ್ದೀನ್‌, ಇತರ ಪದಾಧಿಕಾರಿಗಳಾದ ಉಮರ್‌ ದೇವರಮನಿ, ಮೌನೇಶ ಪೋತ್ನಾಳ,ಉಷಾಜ್ಯೋತಿ, ಎಚ್‌.ಎಂ.ಇಸಾಕ್‌, ಲಕ್ಷ್ಮಣರಾವ್‌ ಕಪಗಲ್‌, ರವಿಶರ್ಮಾ, ಎಚ್‌.ರಾಜಶೇಖರ, ಮೈನುದ್ದೀನ್‌ ಹರವಿ, ತಿಮ್ಮೇಶ ನಾಯಕ, ಅಶೋಕ ರೆಡ್ಡಿ, ಗಾಯತ್ರಿ, ಭಾರ್ಗವಿ ದೇಸಾಯಿ, ಕವನ ಸುಕೇಶ್ವರ, ಆದಿತ್ಯ ಮಠದ್‌, ಶ್ರೀಧರ ದೇಸಾಯಿ, ಪಿ.ವೆಂಕಟೇಶ ಬಾಗಲವಾಡ, ಶಿವಕುಮಾರ ಸಜ್ಜನ್‌ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here