ತಾಲೂಕಿಗೆ ಭೇಟಿ ನೀಡಿದ ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಸದಸ್ಯರ ತಂಡ

ಪೋತ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಧೈರ್ಯಲಕ್ಷ್ಮಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚೇತನ, ಶಾರದ, ಸದಸ್ಯರು ತಾವು ಕೈಗೊಂಡಿರುವ ರೊಟ್ಟಿ ಕೇಂದ್ರ,ಯಲಕ್ಕಿಯಿಂದ ಹಾರ ತಯಾರಿಸುವುದು ಹಾಗೂ ಮಣ್ಣಿನಿಂದ ತಯಾರಿಸಿದ ಟೆರಕೋಟ ಹಾರಗಳನ್ನು ತಯಾರಿಸುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

0
87

ತಾಲೂಕಿಗೆ ಭೇಟಿ ನೀಡಿದ ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಸದಸ್ಯರ ತಂಡ

ಮಾನ್ವಿ: ತಾಲೂಕಿನ ಪೋತ್ನಳ್ ಗ್ರಾಮ ಪಂಚಾಯಿತಿಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ವ-ಸಹಾಯಯ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದ್ದರು.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯಚರಣೆ ಅಧಿಕಾರಿ ಪಿ.ಜಿ.ವೇಣುಗೋಪಾಲ ಮಾತನಾಡಿ

ರಾಜ್ಯ ಸರಕಾರವು ರಾಜ್ಯ ಜೀವನೋಪಯ ಸಂವರ್ಧನ ಘಟಕದಿಂದ ರಾಜ್ಯದಲ್ಲಿರುವ ಗ್ರಾಮ ಪಂಚಾಯಿಗಳ ವ್ಯಾಪ್ತಿಯಲ್ಲಿನ ಸ್ರೀ ಶಕ್ತಿ ಗುಂಪುಗಳ ಸದಸ್ಯರು ಅರ್ಥಿಕವಾಗಿ ಅಭಿವೃದ್ದಿ ಸಾಧಿಸಲು ವಿವಿಧ ಉತ್ಪದಾಕ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರತಿ ಸ್ರೀ ಶಕ್ತಿ ಗುಂಪುಗಳಿಗೆ ಚಟುವಟಿಕೆಗಳನ್ನು ನಡೆಸಲು ಅಗತ್ಯವಾದ ಆರ್ಥಿಕ ನೇರವನ್ನು ನೀಡುವ ಉದ್ದೇಶದಿಂದ ಸಾಲ ಸೌಲಭ್ಯ, ಹಾಗೂ ಸಹಾಯಧಾನ ವಿತರಿಸಲಾಗುತ್ತಿದ್ದು, ಕೌಶಲ್ಯಾಭಿವೃದ್ದಿಗಾಗಿ ತರಬೇತಿ ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಒಣ ಕಸ ಹಾಗೂ ಹಸಿ ವಿಂಗಡಿಸುವ ಕೇಲಸವನ್ನು ಕೂಡ ಸ್ವಸಹಾಯ ಸಂಘದ ಸದಸ್ಯರಿಗೆ ನೀಡಲಾಗುತ್ತಿದೆ.ಹಾಗೂ ಸ್ವಸಾಹಯ ಗುಂಪುಗಳು ಉತ್ಪದಿಸುವ ಉತ್ಪನಗಳಿಗೆ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ ರಾಜ್ಯ ತಂಡದಿAದ ರಾಜ್ಯದಲ್ಲಿನ ವಿವಿಧ ತಾಲೂಕುಗಳಲ್ಲಿನ ಸ್ರೀ ಶಕ್ತಿ ಗುಂಪುಗಳ ಚಟುವಟಿಕೆಗಳನ್ನು ಅಧ್ಯಾಯನ ಮಾಡಿ ಸರಕಾರದಿಂದ ಸ್ರೀ ಶಕ್ತಿ ಗುಂಪುಗಳಿಗೆ ದೊರೆಯಬೇಕಾದ ಸೌಲಭ್ಯಗಳ ಬಗ್ಗೆ ತಂಡ ದಿಂದ ಅಧ್ಯಾಯನ ನಡೆಸಿ ಸರಕಾರಕ್ಕೆ ವರದಿಸಲ್ಲಿಸಲಾಗುವುದು ಎಂದು ತಿಳಿಸಿದರು.

ಪೋತ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಧೈರ್ಯಲಕ್ಷ್ಮಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚೇತನ, ಶಾರದ, ಸದಸ್ಯರು ತಾವು ಕೈಗೊಂಡಿರುವ ರೊಟ್ಟಿ ಕೇಂದ್ರ,ಯಲಕ್ಕಿಯಿಂದ ಹಾರ ತಯಾರಿಸುವುದು ಹಾಗೂ ಮಣ್ಣಿನಿಂದ ತಯಾರಿಸಿದ ಟೆರಕೋಟ ಹಾರಗಳನ್ನು ತಯಾರಿಸುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ರಾಜ್ಯ ತಂಡದ ಅಧಿಕಾರಿಗಳು ಗುಂಪಿನವರು ತಯಾರಿಸಿದ ಟೆರಕೋಟ ಮಣ್ಣಿನ ಹಾರಗಳನ್ನು ೧೧,೦೦೦ ರೂ ನೀಡಿ ಖರೀದಿಸಿದರು.

ನರೇಗಾ ತಾಲೂಕು ಸಹಾಯಕ ನಿರ್ದೇಶಕ ಅಲಂ ಬಾಷ, ತಾಂತ್ರಿಕ ಸಹಾಯಕ ನಿರ್ದೇಶಕ ಶಿವಾನಂದ ರಾಜ್ಯ ತಂಡಕ್ಕೆ ಅಗತ್ಯ ಮಾಹಿತಿಯನ್ನು ನೀಡಿದರು.

ಪಿ.ಡಿ.ಒ. ಅಕ್ತರಪಾಷಾ, ಗ್ರಾ.ಪಂ. ಕಾರ್ಯದರ್ಶಿ ಸಿದ್ದಯ್ಯಸ್ವಾಮಿ, ಯುವ ವೃತ್ತಿಪರ ಜೀವನೋಪಾಯ ಮತ್ತು ಎನ್.ಅರ್.ಎಂ. ಅಧಿಕಾರಿ ವಿನಾಯಕ, ಸೇರಿದಂತೆ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here