ಶ್ರೀದೇವಿ ಪುರಾಣ ಮಹಾಮಂಗಲೋತ್ಸವ*

0
79

*ಶ್ರೀದೇವಿ ಪುರಾಣ ಮಹಾಮಂಗಲೋತ್ಸವ*

ಲಿಂಗಸುಗೂರು : ತಾಲೂಕಿನ ಯಲಗಲದಿನ್ನಿ ಗ್ರಾಮದಲ್ಲಿ ಶರನ್ನವರಾತ್ರಿಯ ಶ್ರೀದೇವಿ ಮಹಾತ್ಮೆ ಪುರಾಣ ಮಹಾಮಂಗಲೋತ್ಸವದ ನಿಮಿತ್ಯ ಶುಕ್ರವಾರ ಪಲ್ಲಕ್ಕಿ ಉತ್ಸವ ಜರುಗಿತು.

ವೀರಭದ್ರ ಮಹಾಸ್ವಾಮಿಗಳು ಅಂಕಲಿಮಠ, ಸಿದ್ದರಾಮನಂದಪುರಿ ಮಹಾಸ್ವಾಮಿಗಳು ತಿಂಥಣಿ ಬ್ರಿಜ್ ಇವರುಗಳ ಕೃಪಾಶೀರ್ವಾದದಿಂದ ವಿಜಯದಶಮಿ ಅಂಗವಾಗಿ ನಡೆದ ಮಹಾ ಪುರಾಣದ ಮಂಗಲೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಮುತ್ತೈದೆಯರು ಕಳಸ, ಕುಂಭಗಳನ್ನು ಹೊತ್ತು ಪಾಲ್ಗೊಂಡಿದ್ದರು.

ವೀರಭದ್ರಯ್ಯ ಹಿರೇಮಠ, ಈರಪ್ಪ ಗಾಳಿಪೂಜಿ, ಅಮರೇಗೌಡ ಪಾಟೀಲ, ಶಿವಪ್ಪ, ಹನುಮಪ್ಪ, ಅಮರಪ್ಪ ಜಲಿಬೆಂಚಿ ಸೇರಿ ಗ್ರಾಮದ ಹಿರಿಯರ ನೇತೃತ್ವದಲ್ಲಿ ನಡೆದ  ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here