ನ್ಯಾಯಬೆಲೆ ಅಂಗಡಿಗಳ ಆಹಾರ ವಿತರಣೆಯಲ್ಲಿ ಶಾಮೀಲಾಗಿ, ಕರ್ತವ್ಯಲೋಪ ಆಹಾರ ಇಲಾಖೆ ಶಿರಸ್ತೆದಾರ ಆನಂದ ಮೋಹನ್ ಅಮಾನತ್ತು

ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆಯಲ್ಲಿ  ಅವ್ಯವಹಾರ ನಡೆದಿದ್ದು, ನಿಯಮಬಾಹಿರವಾಗಿ ಪಡಿತರ ವಿತರಣೆ ಮಾಡಿರುವ ಕಾರ್ಯಕ್ಕೆ ಕುಮ್ಮಕ್ಕು ನೀಡಿ, ಕರ್ತವ್ಯ ಲೋಪ ಎಸಗಿರುವ ಹಿನ್ನಲೆಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಿಂಧನೂರಿನ ಶಿರಸ್ತೆದಾರ ಆನಂದ್ ಮೋಹನ್ ಅವರನ್ನು ಅಮಾನತ್ತುಗೊಳಿಸಿ ಇಲಾಖೆಯ ಆಯುಕ್ತ ಹಾಗೂ ಶಿಸ್ತ ಪ್ರಾಧಿಕಾರಿ ಡಾ|| ಶಮ್ಲಾ ಇಕ್ಬಾಲ್ ಅವರು ಆದೇಶ ಹೊರಡಿಸಿದ್ದಾರೆ.

0
271

ನ್ಯಾಯಬೆಲೆ ಅಂಗಡಿಗಳ ಆಹಾರ ವಿತರಣೆಯಲ್ಲಿ ಶಾಮೀಲಾಗಿ, ಕರ್ತವ್ಯಲೋಪ

ಆಹಾರ ಇಲಾಖೆ ಶಿರಸ್ತೆದಾರ ಆನಂದ ಮೋಹನ್ ಅಮಾನತ್ತು

ಸಿಂಧನೂರು: ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆಯಲ್ಲಿ  ಅವ್ಯವಹಾರ ನಡೆದಿದ್ದು, ನಿಯಮಬಾಹಿರವಾಗಿ ಪಡಿತರ ವಿತರಣೆ ಮಾಡಿರುವ ಕಾರ್ಯಕ್ಕೆ ಕುಮ್ಮಕ್ಕು ನೀಡಿ, ಕರ್ತವ್ಯ ಲೋಪ ಎಸಗಿರುವ ಹಿನ್ನಲೆಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಿಂಧನೂರಿನ ಶಿರಸ್ತೆದಾರ ಆನಂದ್ ಮೋಹನ್ ಅವರನ್ನು ಅಮಾನತ್ತುಗೊಳಿಸಿ ಇಲಾಖೆಯ ಆಯುಕ್ತ ಹಾಗೂ ಶಿಸ್ತ ಪ್ರಾಧಿಕಾರಿ ಡಾ|| ಶಮ್ಲಾ ಇಕ್ಬಾಲ್ ಅವರು ಆದೇಶ ಹೊರಡಿಸಿದ್ದಾರೆ.

ತಾಲ್ಲೂಕಿನ ಬೆಳಗುರ್ಕಿ ನ್ಯಾಯಬೆಲೆ ಅಂಗಡಿ ಹಾಗೂ ಇನ್ನಿತರ ನ್ಯಾಯಬೆಲೆ ಅಂಗಡಿಗಳಿಗೆ ಸಂಬAಧಿಸಿದAತೆ ಪಡಿತರಗಳನ್ನು ಮ್ಯಾನುಯಲ್ ಆಗಿ ವಿತರಿಸಿ ಅಂತಿಮ ಶಿಲ್ಕು ತೋರಿರುವುದನ್ನು ಉಲ್ಲೇಖಿಸಿ ಮತ್ತು ಪಡಿತರ ದುರ್ಬಳಕೆಯನ್ನು ಮಾಡಿಕೊಂಡು ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಶಿವಪ್ಪ ಲಿಂಗಪ್ಪ ಸಿಂಧನೂರು, ಮಲ್ಲನಗೌಡ ಶಂಭನಗೌಡ ಮಾಲಿಪಾಟೀಲ್ ಎನ್ನುವವರು ಇಲಾಖೆಗೆ ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಲಾಗಿದ್ದು, ಪ್ರಕರಣದಲ್ಲಿ ಆನಂದ ಮೋಹನ್ ಇವರು ಪಡಿತರ ವಿತರಣಾ ಕಾರ್ಯದಲ್ಲಿ ಶಾಮೀಲಾಗಿ, ಇಲಾಖಾ ನಿಯಮವನ್ನು ಉಲ್ಲಂಘಿಸಿ, ಕರ್ತವ್ಯ ಲೋಪ ಮಾಡಿರುವುದು ಮೇಲ್ನೊಟದಲ್ಲಿ ಸಾಬೀತಾಗಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.

ನಡೆದಿದ್ದೇನು?:

ಇಲಾಖೆಯು ಡಿಸೆಂಬರ್ ೨೦೨೦ರ ಮಾಹೆಯಲ್ಲಿ ಯಾವುದೇ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರವನ್ನು ಮ್ಯಾನುಯೆಲ್ ಆಗಿ ವಿತರಿಸಲು ಅವಕಾಶ ನೀಡಿರುವುದಿಲ್ಲ. ಒಂದು ವೇಳೆ ಮ್ಯಾನುಯೆಲ್ ವಿತರಣಾ ಸಂದರ್ಭದವಿದ್ದಲ್ಲಿ ಕೂಡಲೇ ಕಡ್ಡಾಯವಾಗಿ ಇಲಾಖೆಯ ಆಯುಕ್ತರ ಅನುಮತಿ ಪಡೆಯಬೇಕೆಂದು ಹಲವಾರು ಬಾರಿ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಸ್ಥಳೀಯವಾಗಿ ಇಲಾಖೆಯ ಯಾವುದೇ ನಿಯಮಗಳನ್ನು ಅಧಿಕಾರಿಗಳು ಪಾಲನೆ ಮಾಡಿಲ್ಲ ಎಂದು ಆರೋಪಿಸಿ ದೂರುದಾರರು ದೂರು ನೀಡಿದ್ದರು. ನಂತರ ಮೇಲಾಧಿಕಾರಿಗಳು ರಾಯಚೂರು ಜಿಲ್ಲಾ ಉಪನಿರ್ದೇಶಕರಿಗೆ ಹಾಗೂ ಸಿಂಧನೂರು ತಹಸೀಲ್ದಾರರಿಗೆ ವರದಿ ನೀಡಲು ಸೂಚಿಸಿದ್ದರು. ನ್ಯಾಯಬೆಲೆ ಅಂಗಡಿಯವರೊAದಿಗೆ ಇಲಾಖೆಯ ಶಿರಸ್ತೆದಾರ ಆನಂದ ಮೋಹನ್ ಶಾಮೀಲಾಗಿದ್ದಾರೆ ಎಂದು ತನಿಖಾ ತಂಡದಿAದ ವರದಿಯನ್ನು ತಯಾರಿಸಿ ಶಿಫಾರಸ್ಸು ಮಾಡಿ ಕಳುಹಿಸಲಾಗಿತ್ತು.

ಆನಂದ ಅವರ ವಿರುದ್ಧ ಸ್ವೀಕೃತವಾಗಿರುವ ಹಾಗೂ ದೂರುಗಳಲ್ಲಿರುವ ಅಂಶಗಳನ್ನು ಪರಿಶೀಲಿಸಿ, ಎಲ್ಲಾ ಅಧಿಕಾರಿಗಳ ವರದಿಗಳನ್ನು ಮೇಲಾಧಿಕಾರಿಗಳು ತಾಳೆ ಹಾಕಿ, ಸಿಂಧನೂರು ತಾಲ್ಲೂಕಿನ ನ್ಯಾಯ ಬೆಲೆ ಅಂಗಡಿಗಳಲ್ಲಿ ಆಗಿರುವ ಲೋಪಗಳಿಗೆ ಆಹಾರ ಶಿರಸ್ತೆದಾರ ಆನಂದ ಮೋಹನ್ ಪಾತ್ರ ಕಂಡು ಬಂದಿರುವ ಹಿನ್ನಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳ ೧೯೬೬ರ ನಿಯಮಗಳ ೩ರ ನಿಯಮ ಒಂದು ಮತ್ತು ಎರಡರ ಉಲ್ಲಂಘನೆ ಎಸಗಿದ್ದಾರೆಂದು ನಿರ್ಧರಿಸಿ, ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.

LEAVE A REPLY

Please enter your comment!
Please enter your name here