ಬಹುಜನ ಸಂಘರ್ಷ ಸಮಿತಿಯಿಂದ ಮನೆ-ಮನೆಗೆ ಅಂಬೇಡ್ಕರ್

0
75

ಬಹುಜನ ಸಂಘರ್ಷ ಸಮಿತಿ ವತಿಯಿಂದ ಮನೆ-ಮನೆಗೆ ಅಂಬೇಡ್ಕರ್

ಮಾನ್ವಿ: ತಾಲೂಕಿನ ಜಾನೇಕಲ್ ಗ್ರಾಮದಲ್ಲಿನ ಯಂಕಮ್ಮ- ಮುದುಕಪ್ಪ ನಾಯಕ ನಿವಾಸದಲ್ಲಿ ಬಹುಜನ ಸಂಘರ್ಷ ಸಮಿತಿ ವತಿಯಿಂದ ನಡೆದ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮಕ್ಕೆ ಕ.ಸಾ.ಪ. ತಾ.ಅಧ್ಯಕ್ಷ ರವಿಕುಮಾರ್ ಪಾಟೀಲ್ ಉದ್ಘಾಟಿಸಿ ಮಾತನಾಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ದೇಶದಲ್ಲಿನ ಹಿಂದೂಳಿದ ಸಮೂಹಕ್ಕೆ ಸ್ವತಂತ್ರವಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಂಡು ಬದುಕುವುದಕ್ಕೆ ಅನುಕೂಲ ಕಲ್ಪಿಸಿದ್ದಾರೆ ಸಂವಿಧಾನದಲ್ಲಿ ನೀಡಿರುವ ಸಮಾನ ಹಕ್ಕುಗಳನ್ನು ಪ್ರತಿಯೊಬ್ಬರು ಸದುಪಯೊಗ ಪಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಅಭಿವೃದ್ದಿ ಹೊಂದುವAತೆ ತಿಳಿಸಿದರು.

ಪ್ರಗತಿಪರ ಚಿಂತಕ, ಉಪನ್ಯಾಸಕ ಹನುಮೇಶ ನಾಯಕ ಜೀನೂರು ಮಾತನಾಡಿ ಸಂವಿಧಾನವು ಪ್ರತಿಯೋಬ್ಬ ಭಾರತದ ಪ್ರಜೆಗೂ ಶಿಕ್ಷಣ,ಉದ್ಯೋಗ,ರಾಜಕೀಯ ಕ್ಷೇತ್ರಗಳಲ್ಲಿ ಸಮಾನವಾದ ಅವಕಾಶಗಳನ್ನು ಕಲ್ಪಿಸಲಾಗಿದ್ದು ಶಿಕ್ಷಣವನ್ನು ಪಡೆದಾಗ ಮಾತ್ರ ನಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಬಹುಜನ ಸಂಘರ್ಷ ಸಮಿತಿ ತಾ. ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ಲಕ್ಷ್ಮಣ, ಶ್ರೀ ಮಹರ್ಷಿ ವಾಲ್ಮಿಕಿ ಸಂಘಟನೆ ಜಿಲ್ಲಾಧ್ಯಕ್ಷ ಶರಣಬಸವನಾಯಕ, ಜನಶಕ್ತಿ ಮುಖಂಡ ಮಾರೆಪ್ಪ, ಶಿಕ್ಷಕ ಶಿವಪ್ಪನಾಯಕ, ಮಾತೆ ಸಾವಿತ್ರಿಬಾಯಿ ಪುಲೇ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹನುಮಂತ, ಗ್ರಾ.ಪಂ.ಸದಸ್ಯರಾದ ಹನುಮಂತಿ ತಿಪ್ಪಣ್ಣ , ಮೌನೇಶ ಗೌಡ, ಬಸವರಾಜ ನಾಯಕ, ಕರಿಯಪ್ಪನಾಯಕ, ಮಹಿಳಾ ಜಾಗೃತಿ ಸಂಘಟನೆಯ ನೀಲಾವತಿ, ಪ್ರವೀಣ್ ಕುಮಾರ್, ಸಾಯಿಕುಮಾರ್, ಚನ್ನಬಸವನಾಯಕ, ಶಿವರಾಜ, ಚನ್ನಬಸವ ಇದ್ದರು ನ್ವಿ: ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ಬಹುಜನ ಸಂಘರ್ಷ ಸಮಿತಿ ವತಿಯಿಂದ ನಡೆದ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಕ.ಸಾ.ಪ. ತಾ.ಅಧ್ಯಕ್ಷ ರವಿಕುಮಾರ್ ಪಾಟೀಲ್ ಮಾತನಾಡಿದರು.

LEAVE A REPLY

Please enter your comment!
Please enter your name here