ಮಾನವಿ,ನ.10- ಪುರಸಭೆ ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಸುಫಿಯಾ ಬೇಗಮ್, ಉಪಾಧ್ಯಕ್ಷರಾಗಿ ಸಮಾಜವಾದಿ ಪಕ್ಷದ ಸುಕುಮುನಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎ ಮಹಿಳೆ ಮತು ಉಪಾಧ್ಯಕ್ಷ ಸ್ಥಾನ ಎಸ್‌ಸಿ ಗೆ ಮೀಸಲಾಗಿದ್ದು
ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಮಾಜಿ ನಾಮನಿರ್ದೇಶಿತ ಸದಸ್ಯ ರಾದ ಜೀಲಾನಿ ಖುರೇಶಿಯವರ ಧರ್ಮಪತ್ನಿ ಸುಫಿಯಾ ಬೇಗಮ್ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸುಕುಮುನಿ ನಾಮಪತ್ರ ಸಲ್ಲಿಸಿದ್ದರು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಏರಲು 14 ಸ್ಥಾನ ಬೇಕಾಗಿತ್ತು 13 ಸದಸ್ಯರನ್ನ ಹೋಂದಿರುವ ಕಾಂಗ್ರೇಸ್ ಗೆ ಸಮಾಜವಾದಿ ಪಕ್ಷದ 4 ಸದಸ್ಯರು, ವೆಲ್ಫೇರ ಪಾರ್ಟಿಯ ಸದಸ್ಯ ಫರೀದ್ ಉಮರಿ ಮತ್ತು ಪಕ್ಷೇತರ ಸದಸ್ಯೆ ಶೈನಾಜ್ ಬೇಗಮ್ ಬೆಂಬಲ ಸೂಚಿಸಿದ ಕಾರಣ ಒಟ್ಟು 19 ಸದಸ್ಯರ ಬಹುಮತದಿಂದ ಕಾಂಗ್ರೇಸ್ ಪಕ್ಷ ಅಧಿಕಾರವನ್ನ ಗಿಟ್ಟಿಸಿಕೊಂಡಿದೆ.