ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮುಸ್ಲಿಂ ಸಮಾಜದ ವತಿಯಿಂದ ಸನ್ಮಾನ

ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡಿ ಜನ ಪರ ಆಡಳಿತ ನೀಡಿ; ಪತ್ರಕರ್ತ ಅಬ್ದುಲ್ ಅಜೀಜ್.

0
179

ಮಸ್ಕಿ.ನ.10- ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಅಧಿಕಾರ ಸಿಕ್ಕ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡಿ ಜನ ಪರ ಆಡಳಿತ ನೀಡಬೇಕು ಎಂದು ಮುಸ್ಲಿಂ ಸಮಾಜದ ಮುಖಂಡ, ಪತ್ರಕರ್ತ ಅಬ್ದುಲ್ ಅಜೀಜ್ ಸಲಹೆ ನೀಡಿದರು.

ಇಲ್ಲಿಯ ಪುರಸಭೆ ಕಚೇರಿ ಬಳಿ ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮುಸ್ಲಿಂ ಸಮಾಜದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಮಸ್ಕಿ ಇತಿಹಾಸ ಪುಟದಲ್ಲಿ ವಿಶೇಷ ಸ್ಥಾನಮಾನ ಹೊಂದಿದೆ ಪುರಸಭೆ ಆಡಳಿತ ಮಂಡಳಿ ಉತ್ತಮ ಅಭಿವೃದ್ದಿ ಕಾರ್ಯಗಳನ್ನು ಮಾಡುವ ಮೂಲಕ ಹೆಸರು ಮಾಡಬೇಕು ಸರ್ವ ಸಮುದಾಯಗಳ ಅಭಿವೃದ್ದಿಗೆ ಯೋಜನೆಗಳನ್ನು ರೂಪಿಸ ಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ವಿಜಯ ಲಕ್ಷ್ಮೀ ಪಾಟೀಲ್, ಉಪಾಧ್ಯಕ್ಷೆ ಕವಿತಾ ಮಾಟೂರು ಅವರಿಗೆ ಸನ್ಮಾನಿಸಲಾಯಿತು. ಬಾಹರ ಅಲಿ, ಅಬ್ದುಲ್ ರಜಾಕ್, ಶಬ್ಬೀರ್ ಚೌದ್ರಿ, ಜಿಲಾನಿ ಖಾಜಿ,ದಾದಾ ಪೀರ, ಮಹಿಬೂಬ್ ಕುಷ್ಟಗಿ. ಮೌಲಾಸಾಬ್ ಮೇಸ್ತ್ರೀ, ಚಾಂದ್, ಮಹ್ಮದ್ ಸೇಡ್ಮೀ, ಶಫಿ ಖೋತ್, ಯಾಸೀನ್, ತಾಹೇರ್, ಅಜ್ಜು, ಮಹಿಬೂಬ್ ಮೆಕ್ಯಾನಿಕ್, ಹಣಗಿ ಮಹಿಬೂಬ್, ರಜಾಕ್ ಚೌದ್ರಿ,ಮುಖಂಡರಾದ ಬಸನಗೌಡ ಪಾಟೀಲ್, ಮಲ್ಲಯ್ಯ ಬಳ್ಳಾ, ಅಮರೇಶ ಮಾಟೂರು, ಅಂಬಾಡಿ ಮಲ್ಲಯ್ಯ, ಗ್ರಾಪಂ. ಮಾಜಿ ಸದಸ್ಯೆ ಲಲಿತಾ ಬಳ್ಳಾ ಇನ್ನಿತರ ಮುಖಂಡರಿದ್ದರು.

LEAVE A REPLY

Please enter your comment!
Please enter your name here