ನ.19 ರಂದು ದಾಸರ ಬೀಡು ವೈಭವ-2022 ಕಾರ್ಯಕ್ರಮ

ವೇದಿಕೆಯ ಕಾರ್ಯಕ್ರಮಗಳನ್ನು ಶಾಸಕ ರಾಜಾ ವೆಂಕಟಪ್ಪ    , ಶಾಮಿಯಾನ-ಸಪ್ಲೆರ‍್ಸ್, ಲೈಟಿಂಗ್ ಧ್ವನಿವರ್ಧಕಗಳಿಗೆ ಸಂಬಂಧಿಸಿದ ವಾಣಿಜ್ಯಮಳಿಗೆಗಳನ್ನು ಮೇಕೋ ಕನ್ಸಟ್ರಕ್ಷನ್ಸ್ನ ಎಂ. ಈರಣ್ಣನವರು ಉದ್ಘಾಟಿಸಲಿದ್ದಾರೆ.

0
195

ನ.19 ರಂದು ದಾಸರ ಬೀಡು ವೈಭವ-೨೦೨೨ ಕಾರ್ಯಕ್ರಮ

ಮಾನ್ವಿ: ಪಟ್ಟಣದ ಕಲ್ಮಠ ಧ್ಯಾನ ಮಂದಿರದಲ್ಲಿ ಉತ್ತರ ಕರ್ನಾಟಕ ಶಾಮಿಯಾನ-ಸಪ್ಲೆರ‍್ಸ್, ಲೈಟಿಂಗ್ ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆಲಂಬಾಷಾ ಸುದ್ದಿಗಾರರೊಂದಿಗೆ ಮಾತನಾಡಿ ಪಟ್ಟಣದ ಕಲ್ಮಠ ಧ್ಯಾನ ಮಂದಿರದಲ್ಲಿ ನ. ೧೯ ರಂದು ದಾಸರ ಬೀಡು ವೈಭವ-೨೦೨೨ ಹೆಸರಿನಲ್ಲಿ ಪ್ರಥಮ ಜಿಲ್ಲಾ ಮಹಾ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿದ್ದು

ಶಾಮಿಯಾನ-ಸಪ್ಲೆರ‍್ಸ್, ಲೈಟಿಂಗ್ ಧ್ವನಿವರ್ಧಕ ಮತ್ತು ಡೆಕೋರೇಷನ್ ವೃತ್ತಿ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಗಳು,ನೂತನ ಆವಿಷ್ಕಾರಗಳು,ಹೊಸ ಅಲಂಕಾರಿಕ ಸಾಮಾಗ್ರಿಗಳು ಹಾಗೂ ಬೃಹತ್ ವೇದಿಕೆಗಳು ಹಾಗೂ ಅಧುನಿಕ ಪದ್ದತಿಗಳನ್ನು ಪರಿಚಾಯಿಸುವುದರ ಜೊತೆಗೆ ಈ ಕ್ಷೇತ್ರಕ್ಕೆ ಸಂಭಂದಿಸಿದ ವಸ್ತುಗಳನ್ನು ತಯಾರಿಸುವ,ಮಾರಾಟಮಾಡುವ ಸಂಸ್ಥೆಗಳನ್ನು ಗ್ರಾಮ ಮಟ್ಟದಲ್ಲಿನ ಸಂಘದ ಸದಸ್ಯರಿಗೆ ಪರಿಚಯಿಸುವುದಕ್ಕಾಗಿ ವ್ಯಾಪಾರ ಮಳಿಗೆಗಳ ಆಯೋಜನೆ ಮಾಡಲಾಗಿದ್ದು, ಬೆಳಿಗ್ಗೆ ರಾಜ್ಯಾಧ್ಯಕ್ಷರಾದ ಕೆ. ನರಸಿಂಹಮೂರ್ತಿ ಸಂಘದ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಪಟ್ಟಣದ ಬಸವ ವೃತ್ತದಿಂದ ಕಲ್ಮಠ ಧ್ಯಾನ ಮಂದಿರದವರೆಗೆ ಗಣ್ಯರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು

ವೇದಿಕೆಯ ಕಾರ್ಯಕ್ರಮಗಳನ್ನು ಶಾಸಕ ರಾಜಾ ವೆಂಕಟಪ್ಪ    , ಶಾಮಿಯಾನ-ಸಪ್ಲೆರ‍್ಸ್, ಲೈಟಿಂಗ್ ಧ್ವನಿವರ್ಧಕಗಳಿಗೆ ಸಂಬಂಧಿಸಿದ ವಾಣಿಜ್ಯಮಳಿಗೆಗಳನ್ನು ಮೇಕೋ ಕನ್ಸಟ್ರಕ್ಷನ್ಸ್ನ ಎಂ. ಈರಣ್ಣನವರು ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಸದರಾದ ರಾಜಾ ಅಮರೇಶ ನಾಯಕ ಉಪಸ್ಥಿತಿತರಿರಲಿದ್ದು ,ದಿವ್ಯ ಸಾನಿಧ್ಯವನ್ನು ಕಲ್ಮಠದ ಶ್ರೀ ವಿರುಪಾಕ್ಷ ಪಂಡಿತರಾಜ್ಯ ಶಿವಚಾರ್ಯ ಮಹಾಸ್ವಾಮಿಗಳು, ಚೀಕಲಪರ್ವಿಯ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಅಭಿನವ ರುದ್ರಮುನಿ ಸ್ವಾಮಿಗಳು, ಶ್ರೀ ಸದಾಶಿವ ಮಹಾಸ್ವಾಮಿಗಳು ಜಿಲ್ಲಾ ಜಮಾತೆ ಉಲಮಾದ ಅಧ್ಯಕ್ಷರಾದ ಮುಫ್ತಿ ಸೈಯದ್ ಹಸನ್ ಜಿಶಾನ್ ಖಾದ್ರ, ಅಬ್ಬಾಸ್ ಅಲಿ ತಾತನವರು, ಲೋಯಲ ಶಾಲೆಯ ಪ್ರಾಚಾರ್ಯರಾದ ರೆ.ಫಾ. ಜಾನ್ ಕ್ರೈಸ್ತ, ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರು ಕೆ ನರಸಿಂಹ ಮೂರ್ತಿ ಅಪ್ಪಣ್ಣ,ಜಿಲ್ಲಾಧ್ಯಕ್ಷರಾದ ಎಂ.ಡಿ.ಆಲAಬಾಷಾ, ಇವರು ವಹಿಸಲಿದ್ದಾರೆ

ನ. 20 ರಂದು ವೇದಿಕೆಯಲ್ಲಿ ಸಂಘದ ಕಾರ್ಯಕ್ರಮಗಳ ಬಗ್ಗೆ ಸದಸ್ಯರಿಗೆ ಮಾಹಿತಿ ಹಾಗೂ ಕಾರ್ಯಗಾರ, ವಿವಿಧ ತಾಲೂಕುಗಳ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು. ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳಿಗೆ ರಾಯಚೂರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಶಾಮಿಯಾನ-ಸಪ್ಲೆರ‍್ಸ್, ಲೈಟಿಂಗ್ ಧ್ವನಿವರ್ಧಕ ಮತ್ತು ಡೆಕೋರೇಷನ್ ವೃತ್ತಿಯಲ್ಲಿರುವ ಮಾಲಿಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ತಾ.ಅಧ್ಯಕ್ಷ ಸೈಯಾದ್ ಅಫ್ಜಲ್ ಹುಸೇನ್, ಮಹಾಂತೇಶ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕನ್ನಾರಿ, ಶಿವಾನಂದ ನಾಯಕ,ವಿರುಪಾಕ್ಷಗೌಡ,ಬುರಾನುದ್ದೀನ್,ಚನ್ನಬಸವ ಗಸ್ತಿ,ಸಿದ್ದನಗೌಡ,ಸಂಗಮೇಶ,ಸುಬಾನ್ ಸಾಬ್,ನರೇಶಕುಮಾರ್,ಇದ್ದರು.

LEAVE A REPLY

Please enter your comment!
Please enter your name here