ಪೋತ್ನಾಳ್ ಗ್ರಾಮಕ್ಕೆ ರೈಲ್ವೆ ‌ನಿಲ್ದಾಣಕ್ಕಾಗಿ ಕೇಂದ್ರ ‌ಸಚಿವ ಸುರೇಶ ಅಂಗಡಿಗೆ ಮನವಿ

0
188

ಮಾನ್ವಿ: ಜ.05 ರಾಯಚೂರು ‌ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ್ ಗ್ರಾಮಕ್ಕೆ ರೈಲ್ವೆ ನಿಲ್ದಾಣವನ್ನು ಮುಂಜೂರು ಮಾಡುವಂತೆ ಸುರೇಶ್ ಅಂಗಡಿ ಕೇಂದ್ರ ‌ರೈಲ್ವೆ ಖಾತೆ ಸಹಾಯಕ‌ ಸಚಿವರಿಗೆ ಪೋತ್ನಾಳ್ ಹೋರಾಟ ಸಮನ್ವಯ ಸಮಿತಿಯಿಂದ ಬೆಳಗಾವಿಯಲ್ಲಿ ಮನವಿ ಸಲ್ಲಿಸಿದರು.
‌ಮುನಿರಬಾದ್ – ಮಹಿಬೂಬು ನಗರಕ್ಕೆ ಸಂಪರ್ಕ ‌ಕಲ್ಪಿಸುವ ರೈಲ್ವೆ ಯೋಜನೆ ‌1990ರಲ್ಲಿ ಭಾರತ ಸರ್ಕಾರದ ಅಂದಿನ ‌ರೈಲ್ವೆ ಸಹಾಯಕ‌ ಮಂತ್ರಿಗಳಾದ ದಿಗ್ವಜಯ ಸಿಂಗ್‌ ‌ಸಿಂಧನೂರಲ್ಲಿ‌ಅಡಿಗಲ್ಲು ಹಾಕಿದ್ದು ‌ಸರ್ವೆ ಪ್ರಕಾರ ಪೋತ್ನಾಳ್ ‌ಗೆ ರೈಲ್ವೆ ‌ನಿಲ್ದಾಣ‌ ಮುಂಜೂರಾತಿ ಆಗಿರಲಿಲ್ಲ ಅಂದಿನಿಂದ ‌ಇಂದಿನವರೆಗೂ ನಾವು ರೈಲ್ವೆ ‌ನಿಲ್ದಾಣಕ್ಕಾಗಿ ನಿರಂತರ ಹೋರಾಟ ‌ಮಾಡುತ್ತ ಬಂದಿದ್ದೇವೆ ಆದರೆ ‌ನಮ್ಮ ಮನವಿಗೆ ‌ರೈಲ್ವೆ ಇಲಾಖೆಯಿಂದಾಗಲಿ ಜನಪ್ರತಿನಿಧಿಗಳಿಂದಾಗಲಿ ಯಾವುದೇ ಸ್ಪಂದನೆ‌ ದೊರೆತಿರುವುದಿಲ್ಲ ಭೌಗೋಳಿಕವಾಗಿ ಪೋತ್ನಾಳ್ ಗೆ ಸರಿ ಸುಮಾರು ‌ಮೂವತ್ತರಿಂದ‌ ನಲ್ವತ್ತು ಕೇಂದ್ರ‌ ಸ್ಥಾನವಾಗಿದ್ದು ಸರಿ ಸುಮಾರು ‌ 1 ಲಕ್ಷ‌ 50 ಸಾವಿರ ‌ಜನಸಂಖ್ಯೆ ಹೊಂದಿರುವ ‌ಈ ಕೇಂದ್ರ ‌ಸ್ಥಾನಕ್ಕೆ‌ ರೈಲ್ವೆ ‌ನಿಲ್ದಾಣ ಮಾಡಿದರೆ ಬಹಳ ಅನುಕೂಲವಾಗುತ್ತದೆ ಎಂದು ‌ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂಧರ್ಭದಲ್ಲಿ ‌ಎಚ್.ಶರ್ಫುದ್ದಿನ್, ಕೆ.ಎಸ್.ಕುಮಾರ ‌ಸ್ವಾಮಿ, ಎಮ್. ಮಲ್ಲಿಕಾರ್ಜುನ ,‌ಎಲ್. ಚಕ್ರಪಾಣಿ, ಶಿವಪ್ಪ ಬುಸಾರಿ, ಉಮೇಶ್ ‌ಸಜ್ಜನ್, ಚನ್ನಬಸ್ಸಯ್ಯ ಸ್ವಾಮಿ, ಶರಣ‌ ಬಸವ, ಬಸವರಾಜ ‌ಶೆಟ್ಟಿ ಮಹಿಬೂಬ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here