ವೈದ್ಯಕೀಯ ವೆಚ್ಚದ ಸಹಾಯಧನ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜನಪರ ಬಣದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

0
208
ಮಾನ್ವಿ:ಜ.29 ಪುರಸಭೆ ಅನುದಾನದ 2018-19ನೇ ಸಾಲಿನ ಶೇ. 24.10 ಪ.ಜಾತಿ/ಪ. ಪಂಗಡದಲಿ ವೈದ್ಯಕೀಯ ವೆಚ್ಚದ  ಸಹಾಯಧನ ನೀಡಬೇಕೆಂದು ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ             ಕರ್ನಾಟಕ ರಕ್ಷಣಾ ವೇದಿಕೆ ಜನಪರ ಬಣ ರಾಜ್ಯ ಘಟಕದಿಂದ ಮನವಿ ಕೊಟ್ಟರು.
ಮಾನವಿ ಪಟ್ಟಣದ  ಪ.ಜಾತಿ/ಪ. ಪಂಗಡ ಸಮುದಾಯದವರು ಕ್ರಿಯಾ ಯೋಜನೆಯ ಅನುಸಾರವಾಗಿ 2018-19ನೇ, ಸಾಲಿನಲ್ಲಿ ವೈದ್ಯಕೀಯ ವೆಚ್ಚದ ಸಹಾಯಧನ ನೀಡಬೇಕೆಂದು, ಬಡ ಮತ್ತು ಹಿಂದುಳಿದ ದಲಿತ ಸಮುದಾಯದವರು ಪುರಸಭೆ ಕಾರ್ಯಾಲಯಕ್ಕೆ ಅರ್ಜಿ ಸಮೇತವಾಗಿ ರೋಗಕ್ಕೆ ಸಂಬಂದಿಸಿದಂತೆ ವ್ಯದ್ಯರಿಂದ ಚಿಕಿತ್ಸೆ ಪಡೆದ ಬಿಲ್ ಪ್ರತಿಗಳನ್ನು ಸಲ್ಲಿಸಿದ್ದಾರೆ. ಆದರೆ ಬಡ ರೋಗಿಗಳಿಗೆ ಇದುವರೆಗೂ ಸಹಾಯಧನ ನೀಡಿಲ್ಲ.ಅರ್ಜಿದಾರರು ಪುರಸಭೆ ಕಾರ್ಯಾಲಯಕ್ಕೆ ಕಳೆದ ಎರಡು ವರ್ಷದಿಂದ ಸಹಾಯಧನ ನೀಡಿ ಎಂದು ಅಂಗಲಾಚುತ್ತಾ ನಿತ್ಯ ಅಲೆಯುತ್ತಿದ್ದಾರೆ.
ಆದರೆ ಪುರಸಭೆ ಸಿಬ್ಬಂದಿಯವರು ಇಂದು ಬಾ, ನಾಳೆ ಬಾ, ಎಂದು ಜನರನ್ನು ಸತಾಯಿಸುತ್ತಿದ್ದಾರೆ.
  1. ಸರ್ಕಾರದ ನಿಯಮದಂತೆ ಪ.ಜಾತಿ/ಪ. ಪಂಗಡ ಸಮುದಾಯಕ್ಕೆ  ಶೇ 24.10ರ ಯೋಜನೆಯಡಿಯಲ್ಲಿ ಅವರ ಶ್ರೇಯೋಭಿವೃದ್ದಿಗಾಗಿ ಅನುದಾನ ಮೀಸಲಿಡಲಾಗುತ್ತದೆ. ಆದರೆ ಪುರಸಭೆ ಮುಖ್ಯಾಧಿಕಾರಿಗಳು ಪ.ಜಾತಿ/ಪ.ಪಂಗಡ ಸಮುದಾಯಕ್ಕೆ ಸಹಾಯಧನ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸ್ವತಹ ರೋಗಗ್ರಸ್ಥ ಕುಟುಂಬಸ್ಥರೆ ಮುಖ್ಯಾಧಿಕಾರಿಗಳನ್ನು ಭೇಟಿಯಾದರು, ಸಾರ್ವಜನಿಕರ ಮನವಿಗೆ ಸ್ಪಂದಿಸಲು ಮುಂದಾಗುತ್ತಿಲ್ಲ.
ಹೀಗಾಗಿ ರಾಜ್ಯ ಸರ್ಕಾರವೇ ಪ.ಜಾತಿ/ಪ.ಪಂಗಡದ ಅನುದಾನವನ್ನು ಆಯಾ ವರ್ಷದಲ್ಲೇ, ಒಂದು ನಯಾ ಪೈಸೆ ಉಳಿಸದಂತೆ ಆದೇಶ ಹೊರಡಿಸಿದೆ. 2013ರಲ್ಲಿ ಪ.ಜಾತಿ/ಪ.ಪಂಗಡ ಅನುದಾನವನ್ನು ಬಳಕೆ ಮಾಡುವ ಸಂಬಂಧವಾಗಿ ಕಾಯ್ದೆ ಜಾರಿಯಾಗಿದ್ದರೂ ಮಾನ್ವಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಕಾನೂನು ಪಾಲನೆಮಾಡದೆ ಉಲ್ಲಂಘನೆ ಮಾಡಿರುತ್ತಾರೆ.
ಇವರ ನಿರ್ಲಕ್ಷ್ಯಧೋರಣೆಯನ್ನು ಕಂಡು ಮಾನ್ಯ ಜಿಲ್ಲಾಧಿಕಾರಿಗಳು ಕಾನೂನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗಳ ವಿರುದ್ದ ಶಿಸ್ತು ಕ್ರಮಕೈಗೊಂಡು, ಬಡ ರೋಗಿಗಳ ಕುಟುಂಬಸ್ಥರಿಗೆ ಸಹಾಯಧನ ನೀಡಬೇಕೆಂದು ಕರವೇ ಜನಪರ ಬಣ ಸಂಘಟನೆಯಿಂದ ಮನವಿ ಮೂಲಕ ಎಚ್ಚರಿಸಿದರು.
ಈ ಸಂದರ್ಭದಲ್ಲಿ   ಶ್ರೀಕಾಂತ ಪಾಟೀಲ ಗೂಳಿ,  ದೊಡಪ್ಪ ಹೂಗಾರ,   ರಾಮಣ್ಣ ನಾಯಕ,  ಡಾ. ನೂರುಲ್ಲಾಖಾನ, ಸಿದ್ದಪ್ಪನಂದಿಹಾಳ, ಲೀಲಾವತಿಲಕ್ಷ್ಮಣ, ಕೃಷ್ಣದಾನಿ,   ಎಂ. ಡಿ. ಇಮಾಮ್ ಸಾಬ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here