ಅ.ಕ.ಬ್ರಾ.ಮಹಾಸಭಾ ಚುನಾವಣೆ : ರಘುನಾಥರಿಗೆ ಬೆಂಬಲ; ಜಗನ್ನಾಥ ಕುಲಕರ್ಣಿ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನದ ಚುನಾವಣೆ ಇದೇ ಡಿ.೧೨ ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು,

0
107

ರಾಯಚೂರು,ಡಿ.೧೧- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನದ ಚುನಾವಣೆ ಸಮೀಪಿಸುತ್ತಿದ್ದು, ಈ ಬಾರಿ ಬ್ರಾಹ್ಮಣ ಸಮುದಾಯ ಹಾಗೂ ಬ್ರಾಹ್ಮಣ ಸಮಾಜದ ಉಪ ಪಂಗಡಗಳು ಈ ಬಾರಿಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್,ರಘುನಾಥ್ ಅವರಿಗೆ ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಜಗನ್ನಾಥ ಕುಲಕರ್ಣಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನದ ಚುನಾವಣೆ ಇದೇ ಡಿ.೧೨ ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಮೈಸೂರು, ಶಿವಮೊಗ್ಗ, ಹಾಸನ, ಹುಬ್ಬಳ್ಳಿ, ಮತ್ತು ರಾಯಚೂರು ಜಿಲ್ಲೆಗಳ ಐದು ಮತಗಟ್ಟೆಯಲ್ಲಿ ನಡೆಯಲಿದ್ದು, ಈ ಹಿಂದೆ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು ಬ್ಯಾಂಕುಗಳಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಮೇಲೆ ನಂಬಿಕೆಯಿಟ್ಟು ಬ್ರಾಹ್ಮಣ ಸಮಾಜದ ಹಲವರು ರಾಷ್ಟ್ರೀಕೃತ ಬ್ಯಾಂಕ್‌ಗಳ ಬದಲಾಗಿ ಇವರರಿರುವ ಸಹಾಕಾರಿ ಬ್ಯಾಂಕ್‌ಗಳಲ್ಲಿ ಹಣವನ್ನು ಠೇವಣಿ ಮಾಡಿದ್ದರು. ಸುಮಾರು ೩೭೦೦ ಕೋಟಿ ರೂ. ಎಫ್.ಡಿ ಠೇವಣಿ ಬ್ರಾಹ್ಮಣ ಸಮಾಜದವರಿಂದ ಜಮೆಯಾಗಿದ್ದು, ಹಣವನ್ನು ಬ್ಯಾಂಕಿನ ವ್ಯವಹಾರಕ್ಕಾಗಿ ಬಳಸಿಕೊಂಡಿದ್ದಾರೆ. ಇದರಿಂದ ಸರಿಯಾದ ಸಮಯಕ್ಕೆ ಹಣ ಸಿಗದ ಕಾರಣ ೯೪ ಮಂದಿ ಠೇವಣಿ ಮಾಡಿದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುವ ಪದಾಧಿಕಾರಿಗಳು ಸಮಾಜದಲ್ಲಿ ಪದಾಧಿಕಾರಿಗಳಾಗಲು ಬೇಡ ಎಂಬ ನಿರ್ಧಾರದಿಂದ ಈ ಬಾರಿಯ ಅಧ್ಯಕ್ಷ ಸ್ಥಾನಕ್ಕೆ ಎಸ್. ರಘುನಾಥ ಅವರಿಗೆ ಬೆಂಬಲಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಸಭಾದ ನಿರ್ದೇಶಕಿ ವತ್ಸಲಾ, ರಾಜ್ಯ ಉಪಾಧ್ಯಕ್ಷ ತ್ರಿವಿಕ್ರಮ ಜೋಷಿ, ನಗರಾಧ್ಯಕ್ಷ ತಾಳಿಕೋಟೆ ಗುರುರಾಜ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪವನ್ ಕುಮಾರ್ ಇದ್ದರು.

LEAVE A REPLY

Please enter your comment!
Please enter your name here