ವಾಹನ ಚಾಲನ ತರಬೇತಿ ಕಾರ್ಡಗಳ ವಿತರಣೆ
ಮಾನ್ವಿ: ಪಟ್ಟಣದ ಲೊಯೋಲ ಸಮಾಜ ಸೇವಾ ಕೇಂದ್ರದ ಆವರಣದಲ್ಲಿ ಲೊಯೋಲ ಸಮಾಜ ಸೇವಾ ಕೇಂದ್ರದ ನಿರ್ದೇಶಕರಾದ ಫಾ. ಡಾನ್ ಪ್ರೇಮ ಲೋಬೋ ರವರು ಸಂಸ್ಥೆ ವತಿಯಿಂದ ವಾಹನ ಚಾಲನ ತರಬೇತಿಯನ್ನು ಪೂರೈಸಿದ ಗ್ರಾಮೀಣ ಭಾಗದ ಯುವಕರಿಗೆ ವಾಹನ ಚಾಲನ ತರಬೇತಿ ಕಾರ್ಡನ್ನು ವಿತರಿಸಿ ಮಾತನಾಡಿ ಗ್ರಾಮೀಣ ಭಾಗದ ಯುವಕರು ಸ್ವಾಲಂಭಿ ಜೀವನವನ್ನು ನಡೆಸಲು ಅನುಕೂಲವಾಗುವಂತೆ ಯುವಕ ಹಾಗೂ ಯುವತಿಯರಿಗೆ ಕಂಪ್ಯೂಟರ್ ತರಬೇತಿ, ವಾಹನ ತರಬೇತಿ ಮಹಿಳೆಯರಿಗೆ ಉಪ್ಪಿನಕಾಯಿ, ಪಪಾಡ್ , ಬ್ಯಾಗ್ ತಯಾರಿಸುವ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ವಾಹನ ಚಾಲನೆ ತರಬೇತಿಯನ್ನು ಪೂರೈಸಿದ ೨೭ ಯುವಕರಿಗೆ ವಾಹನ ಚಾಲನ ಪರವಾನಗಿಯನ್ನು ವಿತರಿಸಲಾಯಿತು,
ಕಾರ್ಯಕ್ರಮದಲ್ಲಿ ಲೊಯೋಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಫಾ. ಲಿಯೋ ಪರೇರಾ ,ಸಿಬ್ಬಂದಿಗಳಾದ ರವೀಂದ್ರ ಜಾನೇಕಲ್, ಹನುಮಂತ, ಬಸವಲಿಂಗಪ್ಪ, ವಿಜಯಲಕ್ಷ್ಮೀ, ಜೂಲಿ ಹಾಗೂ ವೀರಭದ್ರೇಶ್ವರ ವಾಹನ ತರಬೇತಿ ಶಾಲೆಯ ಮುಖ್ಯಸ್ಥರಾದ ರವಿಕುಮಾರ ಸೇರಿದಂತೆ ಇನ್ನಿತರರು ಇದ್ದರು.
೨೫-ಮಾನ್ವಿ-೫:
ಮಾನ್ವಿ: ಪಟ್ಟಣದ ಲೊಯೋಲ ಸಮಾಜ ಸೇವಾ ಕೇಂದ್ರದ ಆವರಣದಲ್ಲಿ ಲೊಯೋಲ ಸಮಾಜ ಸೇವಾ ಕೇಂದ್ರದ ನಿರ್ದೇಶಕರಾದ ಫಾ. ಡಾನ್ ಪ್ರೇಮ ಲೋಬೋ ವಾಹನ ಚಾಲನ ತರಬೇತಿ ಕಾರ್ಡಗಳನ್ನು ವಿತರಿಸಿದರು.